ಶ್ರೀ ಸಿ.ಟಿ. ರವಿ ಅವರು ನಡೆದು ಬಂದ ಹಾದಿ

1967:
ರೈತಾಪಿ ಕುಟುಂಬದಲ್ಲಿ ಜನನ.
1981-1982:
ಪ್ರೌಢಶಿಕ್ಷಣ ಪಡೆಯುತ್ತಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧದ ರೈತ ಸಂಘಟನೆಯ ಹೋರಾಟದ ಶಕ್ತಿಯುತ ಪ್ರಭಾವದಿಂದ ರೈತ ಹೋರಾಟಗಳಲ್ಲಿ ಸಕ್ರಿಯ ಪಾಲ್ಗೊಳ್ಳುವಿಕೆ.
1983-1984:
ರೈತ ಪರವಾದ ಹೋರಾಟದಲ್ಲಿ ಆಲ್ದೂರಿನಿಂದ ಚಿಕ್ಕಮಗಳೂರಿಗೆ ಪಾದಯಾತ್ರೆ. ಆಗಲೇ ಒಂದು ದಿನ ಸೆರವಾಸ.
1985-1986:
ಕಾಲೇಜು ವ್ಯಾಸಂಗದಲ್ಲಿ ರೈತ ವಿದ್ಯಾರ್ಥಿ ಒಕ್ಕೂಟದ ಸ್ಥಾಪನೆ, ನಾನು ಕಾರ್ಯದರ್ಶಿಯಾಗಿ ಆಯ್ಕೆ.
1986-1987:
ಎ.ಬಿ.ವಿ.ಪಿ.ಯಲ್ಲಿ ಸಕ್ರಿಯವಾಗಿ ಹಾಗೂ ಕಾಲೇಜು ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಪಾಲ್ಗೊಳ್ಳುವಿಕೆ. ನಂತರ ನಿರಂತರವಾಗಿ ಎ.ಬಿ.ವಿ.ಪಿ.ಯ ವಿವಿಧ ಸ್ತರಗಳಲ್ಲಿ ಸೇವೆ.
1987-1990:
ಬಿ.ಜೆ.ಪಿ. ಸಾಮಾನ್ಯ ಸದಸ್ಯನಾಗಿ ನೋಂದಣಿ. ಆಲ್ದೂರು ಹೋಬಳಿ ಬಿ.ಜೆ.ಪಿ. ಘಟಕ ಕಾರ್ಯದರ್ಶಿಯಾಗಿ ನೇಮಕ. ಆರ್.ಎಸ್.ಎಸ್. ಸಂಪರ್ಕ ಪಡೆದು ಸ್ವಯಂ ಸೇವಕನಾಗಿ ಕಾರ್ಯ.
1990-1992:
ಬಿ.ಜೆ.ಪಿ. ಯುವ ಮೋರ್ಚಾ ಚಿಕ್ಕಮಗಳೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಹಾಗೂ ಯಶಸ್ವಿಯಾಗಿ ಜಿಲ್ಲಾ ಯುವ ಸಮ್ಮೇಳನ ನಿರ್ವಹಣೆ. ಅಯೋಧ್ಯೆ ಹೋರಾಟದಲ್ಲಿ ಸಕ್ರಿಯವಾಗಿ ಭಾಗಿ.
1993-1998:
1993ರ ದೆಹಲಿ ಸತ್ಯಾಗ್ರಹ ಭಾಗವಹಿಸುವಿಕೆ - ಮಹಾರಾಷ್ಟ್ರದಲ್ಲಿ ಜೈಲುವಾಸ. ಮುರುಳಿ ಮನೋಹರ ಜೋಷಿಯವರ ಭಾರತ ಏಕತಾ ಯಾತ್ರೆಯಲ್ಲಿ ಭಾಗಿ - ಶ್ರೀನಗರಕ್ಕೆ ಪ್ರಯಾಣ. ಹುಬ್ಬಳ್ಳಿ ಧ್ವಜ ಸತ್ಯಾಗ್ರಹದಲ್ಲಿ ಭಾಗಿ. ದತ್ತಪೀಠ ಮುಕ್ತಿ ಹೋರಾಟದ ನೇತೃತ್ವ. ಕುಡಿಯುವ ನೀರಿನ ಸಮಸ್ಯೆ, ರೈತರ ಬೆಳೆಗೆ ಬೆಲೆ – ವಿಮೆ, ಆಶ್ರಯ ಮನೆ, ಬಿ.ಪಿ.ಎಲ್. ಕಾರ್ಡ್, ಸಣ್ಣ ಬೆಳೆಗಾರರ ಸಮಸ್ಯೆಗಳು, ಕೊಳಚೆ ನಿವಾಸಿಗಳ ಸಮಸ್ಯೆ ಹಾಗೂ ಇನ್ನಿತರೆ ಮೂಲಭೂತ ಸೌಕರ್ಯಗಳನ್ನು ಈಡೇರಿಸುವಂತೆ ಆಗ್ರಹಿಸಿ ಹೋರಾಟ - ಪಾದಯಾತ್ರೆಗಳಲ್ಲಿ ಭಾಗಿಯಾಗುವ ಮೂಲಕ ಬಿ.ಜೆ.ಪಿ. ರಾಜ್ಯ ಕಾರ್ಯದರ್ಶಿಯಾಗಿ ನಿಯುಕ್ತಿ. ನಂತರ 1998ರಲ್ಲಿ ರಾಜ್ಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ಐದು ವರ್ಷಗಳ ಕಾಲ ಸೇವೆ.
1999-2002:
1999ರಲ್ಲಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರಕ್ಕೆ ಸ್ಪರ್ಧಿಸಲು ಬಿ.ಜೆ.ಪಿ.ಯಿಂದ ಅವಕಾಶ. ಪ್ರತಿಕೂಲ ಪರಿಸ್ಥಿತಿಯಲ್ಲೂ ಸ್ಪರ್ಧೆ ಮಾಡಿ ಪ್ರಬಲ ಅಭ್ಯರ್ಥಿ ಕಾಂಗ್ರೆಸ್‌ನ ಶ್ರೀ ಸಗೀರ್‌ ಅಹಮದ್‌ರವರ ವಿರುದ್ಧ ಕೇವಲ 800 ಮತಗಳ ಅಂತರದಿಂದ ಸೋಲು. ಸೋಲನ್ನೆ ಸವಾಲಾಗಿ ಸ್ವೀಕರಿಸಿ ಜನಸಂಪರ್ಕವನ್ನು ಬಿಡದೆ ಜನರ ಜೊತೆಯಲ್ಲಿ ಬೆರೆತು ಜನರ ಜೊತೆಯಾಗಿದ್ದುಕೊಂಡು ಜನರ ಸೇವೆ ಹಾಗೂ ದತ್ತಪೀಠ ಮುಕ್ತಿ ಹೋರಾಟದಲ್ಲಿ ಸಕ್ರಿಯವಾಗಿ ಭಾಗಿ.
2003 :
ಬಿ.ಜೆ.ಪಿ. ರಾಜ್ಯ ಯುವ ಮೋರ್ಚಾ ಅಧ್ಯಕ್ಷರಾಗಿ ನೇಮಕವಾಗುವ ಮೂಲಕ ಪಕ್ಷದ ಸಂಘಟನೆಯಲ್ಲಿ ಭಾಗಿ.
2004 -2008 :
ಶಾಸಕರಾಗಿ ಆಯ್ಕೆ.
2004ರ ಚುನಾವಣೆಯಲ್ಲಿ ಅದೇ ಕಾಂಗ್ರೆಸ್ಸ್‌ನ ಶ್ರೀ ಸಗೀರ್‌ ಅಹಮದ್‌ರವರನ್ನು 25000 ಸಾವಿರ ಮತಗಳ ಅಂತರದಿಂದ ಜನರು ನನ್ನನ್ನು ಜಯಗಳಿಸಿ ಬೆನ್ನೆಲುಬಾಗಿ ನಿಂತರು. ಚಿಕ್ಕಮಗಳೂರು ಕ್ಷೇತ್ರದ ಇತಿಹಾಸದಲ್ಲಿ ಅತ್ಯಂತ ಹೆಚ್ಚು ಮತ ಪಡೆದು ಅತಿ ಕಡಿಮೆ ವಯಸ್ಸಿನ ಶಾಸಕನಾಗಿ ಆಯ್ಕೆಗೊಂಡೆ.
2005-2006:
ರಾಜ್ಯದಲ್ಲಿ ಕಾಂಗ್ರೆಸ್-ಜನತಾದಳ ಸೇರಿ ಸರ್ಕಾರ ರಚನೆ ಮಾಡಿದ್ದು 19 ತಿಂಗಳು ನನಗೊಂದು ಕಠಿಣ ಸವಾಲು. ಅತ್ತ ಅನುಭವ ಇಲ್ಲ. ಇತ್ತ ಅಧಿಕಾರ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಆತ್ಮಗೌರವ ಕಾಪಾಡಿಕೊಳ್ಳಲು ತಾಲ್ಲೂಕಿನಲ್ಲಿ ನಾನು ಶಾಸಕನಾಗಿ ಹೋರಾಟದ ದಾರಿ ತುಳಿಯುವುದು ಅನಿವಾರ್ಯವಾಯಿತು. ಇದಕ್ಕಾಗಿ 2005ರಲ್ಲಿ ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಒತ್ತುವರಿ ಸಮಸ್ಯೆ, ರೈತರ ಬಡ್ಡಿ ಮನ್ನಾ, ಮೂಲಸೌಕರ್ಯಗಳ ಅಭಿವೃದ್ಧಿಗಾಗಿ, ಒತ್ತುವರಿ ಸಮಸ್ಯೆ ಮುಂತಾದ ಸಮಸ್ಯೆಗಳನ್ನು ಕೈಗೆತ್ತಿಕೊಂಡು ಆಡಳಿತದವರ ಗಮನ ಸೆಳೆಯಲು ಚಿಕ್ಕಮಗಳೂರಿನಿಂದ -ಬೆಂಗಳೂರಿಗೆ 285ಕಿ.ಮೀ. ಗಳನ್ನು 10 ದಿನಗಳ ಕಾಲ ಪಾದಯಾತ್ರೆ ಕೈಗೊಂಡೆ. ಪಾದಯಾತ್ರೆ ನನ್ನ ವಿಶ್ವಾಸ ಜಾಸ್ತಿ ಮಾಡಿತು. ಪಾದಯಾತ್ರೆ ಯಶಸ್ವಿಯಾಗಿ ಜನರ ಮೆಚ್ಚುಗೆಗೆ ಪಾತ್ರನಾದೆ.
2005ರಲ್ಲಿ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕು ಎಂ.ಸಿ.ಹಳ್ಳಿಯಿಂದ ಚಿಕ್ಕಮಗಳೂರಿಗೆ ದತ್ತಪೀಠ ಸತ್ಯ ಸಂದೇಶ ಯಾತ್ರೆ, ದತ್ತ ಪೀಠ ಮುಕ್ತಿಗೆ ಹೋರಾಟ ಕುರಿತು 70ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಂಪರ್ಕ ಸಭೆಯಲ್ಲಿ ಭಾಗಿ.
2006:
ಬೆಂಗಳೂರಿನಲ್ಲಿ ಬಿ.ಜೆ.ಪಿ. ಯುವಮೋರ್ಚಾ ವತಿಯಿಂದ ಸಾಮರಸ್ಯ ಸಮಾವೇಶದ ಯಶಸ್ವಿ ನಿರ್ವಹಣೆ. ಈ ಬೃಹತ್ ಯುವ ಸಮಾವೇಶದಲ್ಲಿ 25000 ಸಾವಿರಕ್ಕೂ ಅಧಿಕ ಜನ ಸಾಮರಸ್ಯದ ಸಂಕಲ್ಪ ಮಾಡಿದರು. 2006ರ ನವೆಂಬರ್‌ನಲ್ಲಿ ಮೈಸೂರಿನಿಂದ ಚಿಕ್ಕಮಗಳೂರುವರೆಗೆ ದತ್ತ ಪೀಠದ ಸತ್ಯ ಸಂದೇಶ ಸಂಕಲ್ಪ ಯಾತ್ರೆ ಕೈಗೊಂಡು ಸುಮಾರು 7 ಜಿಲ್ಲೆಗಳ 29 ವಿಧಾನಸಭಾ ಕ್ಷೇತ್ರದಲ್ಲಿ ದತ್ತ ಪೀಠದ ವಾಸ್ತವಿಕ ಸತ್ಯಾಂಶವನ್ನು ತಿಳಿಸಿ ದತ್ತ ಪೀಠದ ಮುಕ್ತಿಗೆ ಬೆಂಬಲವನ್ನು ಕೋರಿದೆವು.
2006-2008:
ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ನೀಡಿದ್ದು ಹಾಗೂ ಎಲ್ಲಾ ಗ್ರಾಮ ಪಂಚಾಯಿತಿ ಮಟ್ಟಗಳಲ್ಲಿ ಜನಸಂಪರ್ಕ ಸಭೆಗಳನ್ನು ನಡೆಸುವ ಮೂಲಕ ಇಡೀ ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳ ಸಹಿತವಾಗಿ ಗ್ರಾಮಗಳಿಗೆ ತಾಲ್ಲೂಕು ಆಡಳಿತವನ್ನು ಕೊಂಡೊಯ್ದು ಸಾರ್ವಜನಿಕರ ಸಮಕ್ಷಮದಲ್ಲಿ ಆಗಿರುವ ಕೆಲಸಗಳು ಹಾಗೂ ಆಗಬೇಕಾಗಿರುವ ಕೆಲಸಗಳ ಬಗ್ಗೆ ಕೂಲಂಕುಷ ಚರ್ಚೆ ನಡೆಸುವ ಜನಸಂಪರ್ಕ ಸಭೆ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಯಿತು.
2008-2013:
ಶಾಸಕರಾಗಿ ಎರಡನೇ ಬಾರಿಗೆ ಆಯ್ಕೆ.
2008ರ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಮಗಳೂರು ವಿಧಾನಸಭಾ ಪುನರ್‌ವಿಂಗಡಿತ ಕ್ಷೇತ್ರದಿಂದ ಹದಿನೈದು ಸಾವಿರಕ್ಕೂ ಅಧಿಕ ಮತಗಳಿಂದ ಮತ್ತೊಂದು ಬಾರಿಗೆ ಶಾಸಕನಾಗಿ ಆಯ್ಕೆ.
2008-2012:
ಬಿ.ಜೆ.ಪಿ. ರಾಜ್ಯ ಕಾರ್ಯದರ್ಶಿ. ಬಿ.ಜೆ.ಪಿ. ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಕ್ತಾರರಾಗಿ ಆಯ್ಕೆ. ಬಿ.ಜೆ.ಪಿ. ರಾಷ್ಟ್ರೀಯ ವಿಶೇಷ ಆಹ್ವಾನಿತ ಸದಸ್ಯರಾಗಿ ನೇಮಕವಾಗುವ ಮೂಲಕ ಪಕ್ಷ ಹಾಗೂ ಸರ್ಕಾರದ ನೀತಿ ನಿಯಮಗಳ ಸಮರ್ಥ ಪ್ರತಿಪಾದನೆ.
2012-2013:
ದಿನಾಂಕ 12-7-2012ರಂದು ಮಾನ್ಯ ಮುಖ್ಯಮಂತ್ರಿ ಶ್ರೀ ಜಗದೀಶ್ ಶೆಟ್ಟರ್‌ರವರ ನೇತೃತ್ವದ ಕರ್ನಾಟಕ ಸರ್ಕಾರದಲ್ಲಿ ಉನ್ನತ ಶಿಕ್ಷಣ ಸಚಿವರಾಗಿ ಪ್ರಮಾಣವಚನ ಸ್ವೀಕಾರ. ಮೂವತ್ತು ದಿನಗಳ ಆರ್.ಎಸ್.ಎಸ್.ನ ತೃತೀಯ ವರ್ಷದ ಸಂಘ ಶಿಕ್ಷವರ್ಗದಲ್ಲಿ ತರಬೇತಿ ಪಡೆದಿದ್ದು ಸಂಘದಲ್ಲಿ ಸಕ್ರಿಯವಾಗಿ ಭಾಗಿ.
2013 :
ಶಾಸಕರಾಗಿ ಮರು ಆಯ್ಕೆ.
2013ರ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಿಂದ ಮೂರನೇ ಬಾರಿಗೆ ಶಾಸಕರಾಗಿ ಮರು ಆಯ್ಕೆ.
2013-2014:
ಲೋಕಸಭಾ ಚುನಾವಣೆಯ ಸಾರಥ್ಯ. ಅಂದಿನಿಂದ ಇಂದಿನವರಿಗೆ ಪ್ರತಿ ಗ್ರಾಮಗಳಿಗೂ ಭೇಟಿ ನೀಡಿ ಅಭಿವೃದ್ಧಿ ಯೋಜನೆ ಜಾರಿಗೆ ಪ್ರಾಮಾಣಿಕ ಯತ್ನ. ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಗ್ರಾಮ ವಾಸ್ತವ್ಯ ಹಾಗೂ ಸತ್ಸಂಗ ಸಭೆಗಳ ಮೂಲಕ ಸಾಮರಸ್ಯದ ಭಾವ ಪಸರಿಸುವಲ್ಲಿ ಯಶಸ್ವಿ
2014:
ಹತ್ತು ವರ್ಷಗಳ ಶಾಸಕನಾಗಿ ಆಯ್ಕೆಯಾದ ಅವಧಿಯಲ್ಲಿ ಅಧಿವೇಶನದಲ್ಲಿ ಶಿಸ್ತುಬದ್ಧ ಹಾಜರಿಯ ಜೊತೆಗೆ ಕ್ರಮಬದ್ಧ ಚರ್ಚೆಯಲ್ಲಿ ಪಾಲ್ಗೊಳ್ಳುವ ಮೂಲಕ ಮಾಧ್ಯಮದವರಿಂದ ಸದನಶೂರ ಎಂಬ ಹಿರಿಮೆಗೆ ಪಾತ್ರವಾದ ಸಮಾಧಾನ. ಕ್ಷೇತ್ರದ ಎಲ್ಲಾ ಬಹುತೇಕ ರಸ್ತೆ ಸುಧಾರಣೆ, ಕುಡಿಯುವ ನೀರು ಪೂರೈಕೆ, ಕೆರೆ ಅಭಿವೃದ್ಧಿ ಗಂಗಾಕಲ್ಯಾಣ, ಶೈಕ್ಷಣಿಕ ಪ್ರಗತಿ ಹಾಗೂ ಯಶಸ್ವಿ ವಸತಿ ಯೋಜನೆ ಜಾರಿ ಸೇರಿದಂತೆ ಕ್ಷೇತ್ರದ ಸಮಗ್ರ ಅಭಿವೃದ್ಧಿಯಲ್ಲಿ ರಾಜ್ಯದಲ್ಲೇ ಮುಂಚೂಣಿಯಲ್ಲಿರುವಂತೆ ತೃಪ್ತಿಯ ಸಾಧನೆ.
2018:
2018ರ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಿಂದ ಸತತವಾಗಿ ನಾಲ್ಕನೇ ಬಾರಿಗೆ ಶಾಸಕರಾಗಿ 70863 ಮತ ಪಡೆದು.
ಶಾಸಕರಾಗಿ ನಾಲ್ಕನೇ ಬಾರಿಗೆ ಆಯ್ಕೆ ಮರು ಆಯ್ಕೆಯಾಗಿದ್ದು ಹಾಲಿ ಶಾಸಕರಾಗಿ ಕಾರ್ಯನಿರ್ವಹಣೆ. ಲೋಕಸಭಾ ಚುನಾವಣೆಯಲ್ಲಿ ಸಹ ಚುನಾವಣಾ ಪ್ರಭಾರಿಯಾಗಿ ಆಯ್ಕೆ - ತಮಿಳುನಾಡು, ಪಾಂಡಿಚೇರಿ, ಅಂಡಮಾನ್ ಮತ್ತು ನಿಕೋಬಾರ್.
2019:
ಪ್ರಧಾನಿ ನರೇಂದ್ರ ಮೋದಿಯವರ ವಾರಣಾಸಿ ಲೋಕಸಭಾ ಕ್ಷೇತ್ರದ ಚುನಾವಣೆಗೆ ಸಹ ಚುನಾವಣಾ ಪ್ರಚಾರಕನಾಗಿ ಆಯ್ಕೆ. ರಾಷ್ಟ್ರೀಯ ಸಹ ಚುನಾವಣಾ ಕಾರ್ಯದರ್ಶಿಯಾಗಿ ಆಯ್ಕೆ. ಶ್ರೀ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟದಲ್ಲಿ ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಮತ್ತು ಸಕ್ಕರೆ ಸಚಿವರಾಗಿ ದಿನಾಂಕ 20-8-2019 (ಸಂಪುಟ ದರ್ಜೆ) ರಂದು ಪ್ರಮಾಣ ವಚನ ಸ್ವೀಕಾರ.
2020:
ಕನ್ನಡ ಮತ್ತು ಸಂಸ್ಕೃತಿ,ಪ್ರವಾಸೋದ್ಯಮ,ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವರು.

© 2018, kannadasiri.in | ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. |