ರಂಗಮಂದಿರದ ವಿವರಗಳು
ಹಿಂದಕ್ಕೆ


ಕುವೆಂಪು ಕಲಾಮಂದಿರ

ಚಿಕ್ಕಮಗಳೂರು

Chikkamagalore


ಹೇಮಾಂಗಣವಿವರಣೆ

ಜಿಲ್ಲೆಯ ಹೆಸರು ರಂಗಮಂದಿರ ಪ್ರಾರಂಭಿಸಿದ ದಿನಾಂಕ ಪೂರ್ಣಗೊಂಡ ದಿನಾಂಕ ರಂಗಮಂದಿರದ ಕಾಮಗಾರಿ ವೆಚ್ಚ ರಂಗಮಂದಿರದ ವಿವರಣೆ ರಂಗಮಂದಿರದ ವಿಳಾಸ

ಚಿಕ್ಕಮಗಳೂರು

1995

1991

13623500

ಚಿಕ್ಕಮಗಳೂರು ಜಿಲ್ಲೆ ಕಾಫಿಯ ನಾಡೆಂದು ಪ್ರಸಿದ್ದಿ ಪಡೆದಿದ್ದು ಹಲವಾರು ಪ್ರಕೃತಿ ರಮ್ಯತಾಣಗಳನ್ನು ಹೊಂದಿದ್ದು ಹಲವು ಸಂಸ್ಕೃತಿಗಳ ಉಗಮಕ್ಕೆ ಸಾಕ್ಷಿಯಾಗಿದೆ. ಜಾನಪದ ಕಲೆಗಳಾದ ಡೊಳ್ಳು, ವೀರಗಾಸೆ, ಚಿಟ್ಟಿ ಮೇಳ, ಯಕ್ಷಗಾನ, ನಾಟಕಗಳು, ಸುಗ್ಗಿ ಕುಣಿತ, ಹೋಳಿ ಕುಣಿತ, ಬೀಸೆಕಲ್ಲು ಪದ, ಸೋಭಾನ ಪದ, ಅಂಟಿಕೆ-ಪಿಂಟಿಕೆ, ತೊಗಲು ಗೊಂಬೆ ಮೇಳ ಹೀಗೆ ಹಲಾವಾರು ಜಾನಪದ ಸೊಗಡು ಹೊಂದಿರುವ ಜಿಲ್ಲೆಯಾಗಿದೆ. ಈ ಜಿಲ್ಲೆಯು ಹಲವು ಧಾರ್ಮಿಕ ಸ್ಥಳಗಳನ್ನು ಹೊಂದಿದ್ದು ಶೃಂಗೇರಿ ಶಾರಾದಾಂಭ ದೇವಸ್ಥಾನ, ಕಳಸದ ಕಳಸೇಶ್ವರ ದೇವಾಸ್ಥಾನ, ಹೊರನಾಡಿನಲ್ಲಿ ಅನ್ನಪೂರ್ಣೇಶ್ವರಿ ದೇವಾಸ್ಥಾನ, ಮುಳಯ್ಯನ ಗಿರಿ ಬೆಟ್ಟ, ದತ್ತಾತ್ರೇಯರ ಪೀಠ, ದೇವಿರಮ್ಮನ ದೇವಸ್ಥಾನ, ಕೆಮ್ಮಣ್ಣು ಗುಂಡಿ ಗಿರಿಧಾಮ, ಕುದುರೆ ಮುಖ ಗಿರಿ ಶಿಖರಗಳು ಹಾಗೂ ಮುತ್ತೋಡಿ ಅರಣ್ಯ ಗಿರಿಧಾಮಗಳು, ಜರಿ ಜಲಪಾತಗಳನ್ನು ಹೊಂದಿದ್ದು ಪ್ರೇಕ್ಷಣಿಯ ಸ್ಥಳವಾಗಿದೆ. ವಿಸ್ತಾರ ನದಿ ಉಗಮ ಸ್ಥಾನಗಳ ನಯನ ಮನೋಹರ ಮಲೆನಾಡು ನೆನಪಾಗದೆ ಇರಲಾರದು, ಹೀಗೆ ಪ್ರಾಕೃತಿಕವಾಗಿ ಹಲವು ವೈವಿದ್ಯಗಳನ್ನು ಹೊಂದಿರುವ ಈ ಜಿಲ್ಲೆಯಲ್ಲಿ ಸಾಂಸ್ಕೃತಿಕ ಸಂದರ್ಭಗಳು ಕೂಡಾ ಪ್ರಕೃತಿಯ ಜೊತೆಗೇ ಅಬಿನಾಭಾವ ಸಂಬಂಧ ಹೊಂದಿರುವುದನ್ನು ಗಮನಿಸಬಹುದು. ಬಯಲುನಾಡಿನ ಗಡಸುತನವನ್ನು ಬಿಂಬಿಸುವ ಹಾಗೂ ವೀರರಸ ಪ್ರಧಾನವಾದ ಅಬ್ಬರದ ಕಲೆ ವೀರಗಾಸೆ,ಡೊಳ್ಳು ಕುಣಿತ ಎಲ್ಲರ ಗಮನ ಸೆಳೆದರೆ ಮಲೆನಾಡಿನಲ್ಲಿ ಹಲವು ಗುಪ್ತಗಾಮಿನಿಯಂಥ ಶಿಷ್ಠಕಲೆಗಳು ಹಾಸುಹೊಕ್ಕಾಗಿರುವುದನ್ನು ನೊಡಬಹುದು, ಮಲೆನಾಡಿನ ಮನೋಧರ್ಮಕ್ಕೆ ಅನುಗುಣವಾಗಿಯೂ ಇಲ್ಲಿ ಶಾಸ್ರೀಯ ಕಲೆಗಳು ದೊಡ್ಡಮಟ್ಟದ ನೆಲೆಗಟ್ಟನ್ನು ಕಂಡುಕೊಂಡಿದೆ. ಈ ಎಲ್ಲಾ ಸಾಂಸ್ಕೃತಿಕ ಚಟುವಟಿಕೆಗಳಿಗೆ ಸೂಕ್ತ ವೇದಿಕೆಯಾಗಿ ಚಿಕ್ಕಮಗಳೂರು ಜಿಲ್ಲಾ ಕೇಂದ್ರದ ಹೃದಯ ಭಾಗದಲ್ಲಿರುವ ಕುವೆಂಪು ಕಲಾಮಂದಿರ ಕಳಸಪ್ರಾಯಾವಾಗಿರುವುದು ವಿಶೇಷ, ಈ ಕಲಾಮಂದಿರವು 1991ರಲ್ಲಿ ಪ್ರಾರಂಭಗೊಂಡು ನಿರಂತರವಾಗಿ ಹಲವು ಸಾಂಸ್ಕೃತಿಕ ಚಟುವಟಿಕೆಗಳು ಕಲಾಮಂದಿರದಲ್ಲಿ ನಡೆಯುತ್ತಿವೆ, 740 ಸ್ಥಿರ ಆಸನಗಳನ್ನು ಹೊಂದಿದ್ದು, ಉತ್ತಮ ಗುಣಮಟ್ಟದ ಧ್ವನಿ-ಬೆಳಕು ವ್ಯವಸ್ಥೆಯನ್ನು ಹೊಂದಿರುತ್ತದೆ,ಡಿಜಿಟಲ್ ಕಂಟ್ರೊಲ್ಡ್ ಬೆಳಕಿನ ವ್ಯವಸ್ಥೆ ಇರುತ್ತದೆ, ವೇದಿಕೆಯಲ್ಲಿ 30x40 ಅಡಿ ಅಳತೆಯ M.D.F ಶೀಟಿನಿಂದ ನೆಲಹಾಸು ಮಾಡಲಾಗಿದೆ, ಮೂರು ವಿಂಗುಗಳು ಹಾಗೂ ಸೈಕ್ಲೊರಾಂ ಅಳವಡಿಸಲಾಗಿದೆ, ಮಹಿಳೆಯರ ಮತ್ತು ಪುರುಷರ ಪ್ರತ್ಯೇಕ ಅಲಂಕಾರಿಕ ಕೊಠಡಿಗಳು ಇರುತ್ತವೆ, 50KVA ಸಾಮರ್ಥ್ಯವುಳ್ಳ ಜನರೇಟರ್ ಹೊಂದಿರುತ್ತದೆ ಹಾಗೂ ಪಾರ್ಕಿಂಗ್ ವ್ಯವಸ್ಥೆ ಕೂಡ ಇರುತ್ತದೆ.

ಕುವೆಂಪು ಕಲಾಮಂದಿರ, ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಹಿಂಭಾಗ, ಚಿಕ್ಕಮಗಳೂರು-577101
08262-231372