ಎಲ್ಲರಿಗೂ ನಮಸ್ಕಾರ, ನೀವು ಕೊಡ ನಿಮ್ಮ ಮಕ್ಕಳಿಗೆ ಶಾಲೆಗೆ ಸೇರಿಸಲು ಯೋಚನೆ ಮಾಡುತ್ತಿದ್ದೀರಾ. ನಿಮ್ಮ ಮಗುವಿಗೆ ಆರು ವರ್ಷ ತುಂಬಿಲ್ಲವೇ..? 1 ನೇ ತರಗತಿಗೆ ಸೇರಿಸಲು 6 ವರ್ಷ ಕಡ್ಡಾಯವಾಗಿತ್ತು. ಆದರೆ ಈ ವರ್ಷ ಈ ನಿಯಮವಿಲ್ಲ ಎಂದು ಸರ್ಕಾರ ತಿಳಿಸಿದೆ.
ಹೌದು ನಿಮ್ಮ ಮಗುವಿಗೆ ಆರು ವರ್ಷ ತುಂಬದಿದ್ದರು ಶಾಲೆಗೆ ಸೇರಿಸಬಹುದು. 1ನೇ ತರಗತಿ ಸೇರಲು 6 ವರ್ಷ ಪೂರ್ಣಗೊಂಡಿರಬೇಕೆಂಬ ನಿಯಮ ಪ್ರಸ್ತಕ ವರ್ಷಕ್ಕೆ ಅನ್ವಯಿಸುವುದಿಲ್ಲ.
ಮಕ್ಕಳನ್ನು ಶಾಲೆಗೆ ಸೇರಿಸುವಾಗ ಜನನ ಪ್ರಮಾಣಪತ್ರ, ಆಸ್ಪತ್ರೆ ದಾಖಲೆ, ಅಂಗನವಾಡಿ, ಆರೋಗ್ಯ ಸಹಾಯಕಿಯರ ದೃಢೀಕರಣ, ಇಲ್ಲವೇ ಪೋಷಕರು ನೀಡುವ ಸ್ವಯಂ ದೃಢೀಕರಿಸಿದ ಪ್ರಮಾಣಪತ್ರ ಸೇರಿದಂತೆ ಯಾವುದಾದರೂ ಒಂದು ದಾಖಲೆ ಸಲ್ಲಿಸಬೇಕು.
ಶಾಲೆ ಆರಂಭದ ಮೊದಲ ದಿನವೇ ಮಕ್ಕಳಿಗೆ ಪಠ್ಯಪುಸ್ತಕಗಳನ್ನು ಹಾಗೂ 2 ಜತೆ ಸಮವಸ್ತ್ರಗಳನ್ನು ನೀಡಲಾಗುತ್ತದೆ. ಶಾಲೆ ಆರಂಭಕ್ಕೂ ಮೊದಲೇ ಎಲ್ಲ ವಿಷಯಗಳ ಪಠ್ಯಪುಸ್ತಕಗಳು ಶಾಲೆಗಳನ್ನು ತಲುಪಿದ್ದು ಇದೇ ಮೊದಲು.
ಇತರೆ ಮಾಹಿತಿಗಳನ್ನು ಓದಿ:
HSRP ನಂಬರ್ ಪ್ಲೇಟ್ ಅಳವಡಿಸಿ, ಇಲ್ಲವೇ ದಂಡ ಗ್ಯಾರಂಟಿ