ಎಲ್ಲರಿಗೂ ನಮಸ್ಕಾರ, ಕುರಿ/ಮೇಕೆಗಳು, ಹಸು, ಎಮ್ಮೆ ಮತ್ತು ಎತ್ತು ಆಕಸ್ಮಿಕವಾಗಿ ಮರಣ ಹೊಂದಿದರೆ ಅನುಗ್ರಹ ಕೊಡುಗೆ ಯೋಜನೆ (Anugraha Koduge Scheme) ಅಡಿಯಲ್ಲಿ ಮಾಲೀಕರುಗಳಿಗೆ ಪರಿಹಾರ ಧನವನ್ನು ನೀಡಲಾಗುತ್ತದೆ. ಸರ್ಕಾರ ಎಷ್ಟು ಪರಿಹಾರವನ್ನು ನೀಡುತ್ತದೆ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ.
ಹೌದು ಸರ್ಕಾರವು ಈ ಯೋಜನೆಯ ಮೂಲಕ ಕುರಿ, ಮೇಕೆ, ಹಸು, ಎಮ್ಮೆ ಮತ್ತು ಎತ್ತುಗಳು ಆಕಸ್ಮಿಕವಾಗಿ ಮರಣ ಹೊಂದಿದರೆ. ಅಂತಹ ಸಂದರ್ಭದಲ್ಲಿ ಮಾಲೀಕರುಗಳಿಗೆ ಪರಿಹಾರ ಧನ ನೀಡಲಾಗುತ್ತದೆ.
ಯಾವುದೇ ರೋಗದಿಂದ ಹಸು, ಎಮ್ಮೆ, ಎತ್ತು, ಕುರಿ, ಮೇಕೆ ಮೃತಪಟ್ಟರೆ ತಕ್ಷಣ ಪರಿಹಾರ ನೀಡಬೇಕು. ಯಾವುದೇ ಕಾರಣಕ್ಕೂ ನಿಧಾನ ಆಗಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಿಳಿಸಿದ್ದಾರೆ.
Anugraha Koduge Scheme 2024:
ಕುರಿ/ಮೇಕೆಯುನ್ನು ಸಾಕಿದ 3-6 ತಿಂಗಳ ಒಳಗಾಗಿ ಮರಣ ಹೊಂದಿದರೆ ಅಂತಹ ಪ್ರತಿ ಕುರಿ/ಮೇಕೆ ಮರಿಗಳಿಗೆ ತಲಾ 2,500 ರೂ. ಸಹಾಯಧನ ಸರ್ಕಾರ ನೀಡುತ್ತದೆ.
ಮಾಲೀಕರು ಸಾಕಿರುವ ಕುರಿ/ಮೇಕೆಯು 6 ತಿಂಗಳು ಮೇಲ್ಪಟ್ಟು ಮರಣಿಸಿದರೆ ಪ್ರತಿ ಕುರಿ/ಮೇಕೆಗಳಿಗೆ 5,000 ರೂ. ಮತ್ತು ಹಸು, ಎಮ್ಮೆ ಮತ್ತು ಎತ್ತುಗಳಿಗೆ 10,000 ರೂ. ಪರಿಹಾರ ನೀಡಲಾಗುತ್ತದೆ.
Anugraha Koduge Scheme ಅರ್ಹತೆಗಳು:
ಮರಣ ಹೊಂದಿದ ಕುರಿ/ಮೇಕೆ, ಹಸು, ಎಮ್ಮೆ, ಎತ್ತುಗಳ ಶವ ಪರೀಕ್ಷೆಗೆ ಮೊದಲು ಮತ್ತು ಶವ ಪರೀಕ್ಷೆ ನಂತರದ ಭಾವಚಿತ್ರಗಳಲ್ಲಿ ಫಲಾನುಭವಿ ಮತ್ತು ಶವ ಪರೀಕ್ಷೆ ನಡೆಸಿದ ಪಶುವೈದ್ಯರು ಇರುವ ಜಿ.ಪಿ.ಆರ್.ಎಸ್ ಭಾವಚಿತ್ರಗಳನ್ನು ತೆಗೆದು ಶವ ಪರೀಕ್ಷೆ ನಡೆಸಿದ ಪಶುವೈದ್ಯರು ದೃಢೀಕರಿಸುವುದು.
ಮರಣಿಸಿದ ಕುರಿ/ಮೇಕೆ, ಹಸು, ಎಮ್ಮೆ, ಎತ್ತುಗಳ ಭಾವಚಿತ್ರಗಳನ್ನು ಸಂಬಂಧಪಟ್ಟ ಪಶುವೈದ್ಯರು, ಸಹಾಯಕ ನಿರ್ದೇಶಕರು ಪರಿಶೀಲಿಸಿ ಸಲ್ಲಿಸುವುದು ಹಾಗೂ ಮರಣೀಸಿದ ಕುರಿ/ಮೇಕೆ, ಹಸು, ಎಮ್ಮೆ, ಎತ್ತುಗಳ ಭಾವಚಿತ್ರಗಳಿಗೆ ಸಂಬಂಧಿಸಿದಂತೆ ಶವ ಪರೀಕ್ಷೆ ನಡೆಸಿದ ಪಶುವೈದ್ಯರೇ ವೈಯುಕ್ತಿಕ ಜವಾಬ್ದಾರರಾಗಿರುತ್ತಾರೆ.
ಮರಣೋತ್ತರ ವರದಿ, ಫೋಟೋಗಳು, ಫಲಾನುಭವಿ ಅರ್ಜಿ, ಆಧಾರ್ ಲಿಂಕ್ ಆಗಿರುವ ಬ್ಯಾಂಕ್ ಖಾತೆ ಮತ್ತು ಮುಂಗಡ ಹಣ ಸಂದಾಯ ರಶೀದಿಯಲ್ಲಿ ಫಲಾನುಭವಿಗಳ ಸಹಿ, ಪೂರ್ಣ ವಿಳಾಸ ಹಾಗೂ ಅಗತ್ಯ ದಾಖಲಾತಿಗಳೊಂದಿಗೆ ತಪ್ಪದೇ ವೋಚರಳನ್ನು ದೃಢೀಕರಿಸಿ ಸಲ್ಲಿಸಬೇಕು.
ಇತರೆ ಮಾಹಿತಿಗಳನ್ನು ಓದಿ:
ಗೃಹಲಕ್ಷ್ಮಿ DBT Status Check ಮಾಡಿ