2023-24ನೇ ಸಾಲಿನ ಬಿ.ಇಡಿ ಕೋರ್ಸಿನ ವ್ಯಾಸಂಗಕ್ಕಾಗಿ ಸರ್ಕಾರಿ ಕೋಟಾದ ಸೀಟುಗಳ ದಾಖಲಾತಿಗಾಗಿ ಸೀಟು ಹಂಚಿಕೆಯ ಮೊದಲ ಪಟ್ಟಿ (B.ed Selection List 2023-24) ಯನ್ನು ದಿನಾಂಕ 28-12-2023 ರಂದು ಅಪರಾಹ್ನ ಇಲಾಖಾ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು ಎಂದು ಶಾಲಾ ಶಿಕ್ಷಣ ಇಲಾಖೆ ತಿಳಿಸಿದೆ.
ಸೀಟು ಹಂಚಿಕೆಯಾದ ಅಭ್ಯರ್ಥಿಗಳು Online ನಲ್ಲಿ ಚಲನ್ ಡೌನ್‌ಲೋಡ್ ಮಾಡಿಕೊಂಡು ದಾಖಲಾತಿ ಶುಲ್ಕವನ್ನು SBI ಬ್ಯಾಂಕಿನಲ್ಲಿ ಪಾವತಿಸಿ ದಿನಾಂಕ: 30-12-2023 ರಿಂದ 03-01-2024 ರ ಒಳಗಾಗಿ ಚಲನ್ ಪ್ರತಿಯನ್ನು ಸಂಬಂಧಿಸಿದ ನೋಡಲ್ ಸೆಂಟರ್‌ನಲ್ಲಿ ಸಲ್ಲಿಸಿ ಪ್ರವೇಶಾತಿ ಪತ್ರವನ್ನು (Admission Slip) ಪಡೆಯಬಹುದು.
B.ed Selection List 2023-24
ಸೀಟು ಹಂಚಿಕೆಯ ಮೊದಲ ಪಟ್ಟಿಯನ್ನು ಇಲಾಖೆಯ ವೆಬ್‌ಸೈಟ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು. www.schooleducation.karnataka.gov.in
ವಿ.ಸೂ : ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಅಭ್ಯರ್ಥಿಗಳಿಗೆ ವೈಯಕ್ತಿಕವಾಗಿ ಮಾಹಿತಿ ನೀಡಲಾಗುವುದಿಲ್ಲ ಎಂದು ಇಲಾಖೆಯು ಪ್ರಕಟನೆಯಲ್ಲಿ ತಿಳಿಸಿದೆ.
ಇತರೆ ಮಾಹಿತಿಗಳನ್ನು ಓದಿ
ಅನ್ನಭಾಗ್ಯ ಯೋಜನೆಯ DBT Status Check ಮಾಡಿ