ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಖಾಲಿ ಇರುವ ಪೌರಕಾರ್ಮಿಕರು (ಗ್ರೂಪ್-ಡಿ) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (BBMP Recruitment 2024) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
BBMP Recruitment 2024 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)
ವೇತನ ಶ್ರೇಣಿ: 17,000 ರೂ. ರಿಂದ 28,950 ರೂ.
ಹುದ್ದೆಗಳ ಸಂಖ್ಯೆ: 11,307
ಉದ್ಯೋಗ ಸ್ಥಳ: All India
ಹುದ್ದೆಗಳ ವಿವರ:
ಉಳಿಕೆ ಮೂಲ ವೃಂದ – 10402
ಕಲ್ಯಾಣ-ಕರ್ನಾಟಕ ವೃಂದ – 905
ಒಟ್ಟು ಹುದ್ದೆಗಳು: 11,307
ವೇತನ ಶ್ರೇಣಿ:
ಪೌರಕಾರ್ಮಿಕರು (ಗ್ರೂಪ್-ಡಿ) – 17,000 ರೂ. ರಿಂದ 28,950 ರೂ.
ವಯೋಮಿತಿ:
BBMP ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಗರಿಷ್ಠ 55 ವರ್ಷ ಮೀರಿರಬಾರದು.
ಅರ್ಜಿ ಸಲ್ಲಿಸುವ ವಿಧಾನ:
ಸಂಬಂಧಪಟ್ಟ ಪಾಲಿಕೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು (ಘನತ್ಯಾಜ್ಯ ನಿರ್ವಹಣೆ) ಇವರ ಕಛೇರಿಗೆ ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 5.30 ಗಂಟೆಯೊಳಗೆ ಸಲ್ಲಿಸಬೇಕು.
BBMP Recruitment 2024 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 15-03-2024
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 15-05-2024
ಪ್ರಮುಖ ಲಿಂಕ್’ಗಳು:
ಅರ್ಜಿ ಸಲ್ಲಿಕೆ ವಿಸ್ತರಣೆ: ಡೌನ್’ಲೋಡ್
ಅಧಿಸೂಚನೆ: ಡೌನ್’ಲೋಡ್
ಅರ್ಜಿ ನಮೂನೆ: ಡೌನ್‌ಲೋಡ್
ಅಧಿಕೃತ ವೆಬ್ ಸೈಟ್: bbmp.gov.in
ಇತರೆ ಮಾಹಿತಿಗಳನ್ನು ಓದಿ: