2024ರ ಲೋಕಸಭೆ ಚುನಾವಣೆಗೆ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳ ಎರಡನೇ ಪಟ್ಟಿ (BJP 2nd List Karnataka) ಯನ್ನು ಬಿಡುಗಡೆ ಮಾಡಿದ್ದಾರೆ. ಕರ್ನಾಟಕದಿಂದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೇರಿದಂತೆ ಒಟ್ಟು 20 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗಿದೆ.
ಕರ್ನಾಟಕದಿಂದ ಆಯ್ಕೆಯಾಗಿದ್ದ ಹಾಲಿ 8 ಸಂಸದರು ಟಿಕೆಟ್ ವಂಚಿತರಾಗಿದ್ದಾರೆ. ಮೈಸೂರು ಕ್ಷೇತ್ರದಿಂದ ಸಂಸದ ಪ್ರತಾಪ್ ಸಿಂಹ ಬದಲಿಗೆ ಯದುವೀದ್ ಒಡೆಯರ್ ಅವರಿಗೆ ಟಿಕೆಟ್ ನೀಡಲಾಗಿದೆ.
ಈ ಪಟ್ಟಿಯಲ್ಲಿ ಬೆಂಗಳೂರು ದಕ್ಷಿಣದಿಂದ ಬಿಜೆಪಿಯ ಯುವ ಘಟಕದ ಅಧ್ಯಕ್ಷ ತೇಜಸ್ವಿ ಸೂರ್ಯ, ಹಾವೇರಿಯಿಂದ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕಣಕ್ಕಿಳಿಸಲಾಗಿದೆ. ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ ಅವರ ಪುತ್ರ ಬಿವೈ ರಾಘವೇಂದ್ರ ಶಿವಮೊಗ್ಗದಿಂದ ಸ್ಪರ್ಧಿಸಲಿದ್ದಾರೆ.
BJP 2nd List Karnataka ಯಾರಿಗೆ ಟಿಕೆಟ್:
- ಚಿಕ್ಕೋಡಿ – ಅಣ್ಣಾಸಾಹೇಬ್ ಜೊಲ್ಲೆ,
- ಬಾಗಲಕೋಟೆ – ಪಿಸಿ ಗಡ್ಡಿ ಗೌಡರ್,
- ಬಿಜಾಪುರ – ರಮೇಶ್ ಜಿಗಜಿಣಗಿ,
- ಕಲುಬರಗಿ – ಉಮೇಶ್ ಜಿ. ಜಾಧವ್,
- ಬೀದರ್ – ಭಗವಂತ್ ಖೂಬಾ,
- ಕೊಪ್ಪಳ – ಬಸವರಾಜ್ ಕವಟೂರು,
- ಬಳ್ಳಾರಿ – ಬಿ. ಶ್ರೀರಾಮುಲು,
- ಹಾವೇರಿ – ಬಸವರಾಜ್ ಬೊಮ್ಮಾಯಿ,
- ಧಾರವಾಡ – ಪ್ರಹ್ಲಾದ್ ಜೋಶಿ,
- ದಾವಣಗೆರೆ – ಗಾಯತ್ರಿ ಸಿದ್ದೇಶ್ವರ,
- ಶಿವಮೊಗ್ಗ – ಬಿ.ವೈ. ರಾಘವೇಂದ್ರ,
- ಉಡುಪಿ ಹಾಗೂ ಚಿಕ್ಕಮಗಳೂರು – ಕೋಟಾ ಶ್ರೀನಿವಾಸ ಪೂಜಾರಿ,
- ದಕ್ಷಿಣ ಕನ್ನಡ – ಕ್ಯಾಪ್ಟನ್ ಬ್ರಿಜೇಶ್ ಚೌಟಾ, (Brijesh Chowta)
- ತುಮಕೂರು – ವಿ. ಸೋಮಣ್ಣ,
- ಮೈಸೂರು – ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್,
- ಚಾಮರಾಜನಗರ – ಎಸ್. ಬಾಲರಾಜ್,
- ಬೆಂಗಳೂರು ಗ್ರಾಮಾಂತರ – ಡಾ. ಸಿ.ಎನ್. ಮಂಜುನಾಥ್,
- ಬೆಂಗಳೂರು ಉತ್ತರ – ಶೋಭಾ ಕರಂದ್ಲಾಜೆ,
- ಬೆಂಗಳೂರು ಕೇಂದ್ರ – ಪಿ.ಸಿ. ಮೋಹನ್,
- ಬೆಂಗಳೂರು ದಕ್ಷಿಣ – ತೇಜಸ್ವಿ ಸೂರ್ಯ.
ಇತರೆ ಮಾಹಿತಿಗಳನ್ನು ಓದಿ:
ಕೃಷಿ ಭಾಗ್ಯ ಯೋಜನೆ: ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ
ರೇಷನ್ ಕಾರ್ಡ್ ರದ್ದು: ಹೊಸ ಪಟ್ಟಿ ಬಿಡುಗಡೆ