ಬೆಂಗಳೂರು ಮೆಟ್ರೋಪಾಲಿಟನ್ ಟ್ರಾನ್ಸ್‌ಪೋರ್ಟ್ ಕಾರ್ಪೊರೇಷನ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗಾಗಿ ಭರ್ಜರಿ ನೇಮಕಾತಿ ಅಧಿಸೂಚನೆ (BMTC Recruitment 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
BECIL ನಲ್ಲಿ ಉದ್ಯೋಗವಕಾಶ, ಅರ್ಜಿ ಸಲ್ಲಿಸಿ
ಕ್ಲರ್ಕ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
BMTC Recruitment 2023 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಬೆಂಗಳೂರು ಮೆಟ್ರೋಪಾಲಿಟನ್ ಟ್ರಾನ್ಸ್‌ಪೋರ್ಟ್ ಕಾರ್ಪೊರೇಷನ್ (BMTC)
ವೇತನ ಶ್ರೇಣಿ: 6,000 ರಿಂದ 9,000 ರೂ
ಉದ್ಯೋಗ ಸ್ಥಳ: ಬೆಂಗಳೂರು
ಹುದ್ದೆಗಳ ಸಂಖ್ಯೆ: 636
ಹುದ್ದೆಗಳ ವಿವರ:
ಪೂರ್ಣಾವಧಿ ಅಪ್ರೆಂಟಿಸ್ – 550 ಹುದ್ದೆಗಳು
ಡಿಪ್ಲೊಮಾ ಅಪ್ರೆಂಟಿಸ್ – 43 ಹುದ್ದೆಗಳು
ಪದವಿ ಅಪ್ರೆಂಟಿಸ್ – 43 ಹುದ್ದೆಗಳು
ಶೈಕ್ಷಣಿಕ ಅರ್ಹತೆ:
ಪೂರ್ಣಾವಧಿ ಅಪ್ರೆಂಟಿಸ್ – 10 ನೇ ತರಗತಿ, ಐಟಿಐ.
ಡಿಪ್ಲೊಮಾ ಅಪ್ರೆಂಟಿಸ್ – ಡಿಪ್ಲೊಮಾ
ಪದವಿ ಅಪ್ರೆಂಟಿಸ್ – BE.
ವೇತನ ಶ್ರೇಣಿ:
ಪೂರ್ಣಾವಧಿ ಅಪ್ರೆಂಟಿಸ್ – 6,000 ರಿಂದ 7,000 ರೂ
ಡಿಪ್ಲೊಮಾ ಅಪ್ರೆಂಟಿಸ್ – 8,000 ರೂ
ಪದವಿ ಅಪ್ರೆಂಟಿಸ್ – 9,000 ರೂ
ವಯೋಮಿತಿ:
ಬೆಂಗಳೂರು ಮೆಟ್ರೋಪಾಲಿಟನ್ ಟ್ರಾನ್ಸ್‌ಪೋರ್ಟ್ ಕಾರ್ಪೊರೇಷನ್ (BMTC) ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಕನಿಷ್ಠ 16 ವರ್ಷ ಹಾಗೂ ಗರಿಷ್ಠ 30 ವರ್ಷ ಮೀರಿರಬಾರದು.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 21-02-2023
ದಾಖಲಾತಿ ಪರಿಶೀಲನೆ ದಿನಾಂಕ: 15 ಮಾರ್ಚ್ 2023
ಪ್ರಮುಖ ಲಿಂಕ್ ಗಳು:
ಅಧಿಸೂಚನೆ ಮತ್ತು ಅರ್ಜಿ ನಮೂನೆ: ಡೌನ್‌ಲೋಡ್
BMTC Recruitment 2023 ದಾಖಲಾತಿ ಪರಿಶೀಲನೆ:
ದಿನಾಂಕ 15 ಮಾರ್ಚ್ 2023 ರಂದು ಬೆಳಿಗ್ಗೆ 10.30 ಗಂಟೆಯಿಂದ 5 ಗಂಟೆಯೊಳಗಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ಅನೆಕ್ಸ್ ಬಿಲ್ಡಿಂಗ್, ಆಡಳಿತ ಇಲಾಖೆ, 5ನೇ ಮಹಡಿ, ಶಾಂತಿನಗರ ಬಸ್ ನಿಲ್ದಾಣ ಪಕ್ಕ, ಬೆಂಗಳೂರು-560027, ಇಲ್ಲಿ ಖುದ್ದಾಗಿ ಮೂಲ ದಾಖಲಾತಿಗಳ ಪರಿಶೀಲನೆಗೆ ಹಾಜರಾಗಲು ತಿಳಿಸಲಾಗಿದೆ. ಮೂಲ ದಾಖಲಾತಿಗಳ ಒಂದು ಸೆಟ್ ಜೆರಾಕ್ಸ್ ಪ್ರತಿಗಳನ್ನು ಸಹ ತರುವುದು. ಅಪೂರ್ಣ ಅಥವಾ ವಿಳಂಬವಾಗಿ ಸಲ್ಲಿಸುವ ಅರ್ಜಿಗಳನ್ನು ಆಯ್ಕೆಗೆ ಪರಿಗಣಿಸಲಾಗುವುದಿಲ್ಲ.
ಅಗತ್ಯ ದಾಖಲೆಗಳು:
- 02 ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ
- ಎಸ್.ಎಸ್.ಎಲ್.ಸಿ ಅಂಕಪಟ್ಟಿ,
- ಐ.ಟಿ.ಐ ತೇರ್ಗಡೆ ಹೊಂದಿದ್ದಲ್ಲಿ ಅದರ ಮೂಲ ಅಂಕಪಟ್ಟಿ,
- ಡಿಪ್ಲೋಮ ಅಂಕಪಟ್ಟಿಗಳು,
- ಪದವಿ ಅಂಕಪಟ್ಟಿಗಳು,
- ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ,
- ಆಧಾರ್ ಕಾರ್ಡ್, ಆಧಾರ್ ಲಿಂಕ್ ಬ್ಯಾಂಕ್ ಖಾತೆಯ ಪ್ರತಿ,