ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ 96 ವರ್ಷದ ಬ್ರಿಟನ್‌ನ ರಾಣಿ ಎರಡನೇ ಎಲಿಜಬೆತ್ (Britain Queen Elizabeth II) ಅವರು ಇಂದು (ಸೆ. 8 ರಂದು) ನಿಧನರಾಗಿದ್ದಾರೆ. ರಾಣಿಯ ನಿಧನ ಸುದ್ದಿಯನ್ನು ಬಂಕಿಂಗ್ ಹ್ಯಾಮ್ ಅರಮನೆಯವರು ಪ್ರಕಟಿಸಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ಬ್ರಿಟನ್ನಲ್ಲಿ ಶೋಕ ಮನೆ ಮಾಡಿದೆ.

ಇಂದು ಮುಂಜಾನೆಯಿಂದ ರಾಣಿಯ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ವೈದ್ಯಕೀಯ ತಂಡದ ನಿಗಾದಲ್ಲಿದ್ದರು. ರಾಣಿಗೆ ಬ್ರಿಟನ್‌ನ ಬಲ್‌ಮೋರಾಲ್‌ನಲ್ಲಿ ವೈದ್ಯರ ತಂಡ ಚಿಕಿತ್ಸೆ ನೀಡಿತ್ತು. ಆದರೆ, ವೈದ್ಯಕೀಯ ಚಿಕಿತ್ಸೆ ಫಲಿಸದೆ ಗುರುವಾರ ನಿಧನರಾಗಿದ್ದಾರೆ.
ಎರಡನೇ ಎಲಿಜಬೆತ್ ಅವರು 1952 ರಿಂದ ಬ್ರಿಟನ್‌ನ ರಾಣಿಯಾಗಿ ಆಳ್ವಿಕೆ ಮಾಡುತ್ತಿದ್ದರು. ಸತತ 70 ವರ್ಷಗಳ ಕಾಲ ಅಧಿಕಾರ ನಡೆಸಿದರು.
ಬ್ರಿಟನ್‌ನ ರಾಣಿ ಎರಡನೇ ಎಲಿಜಬೆತ್ ಅವರು ನಿಧನಕ್ಕೆ ಹಲವಾರು ದೇಶದ ಗಣ್ಯವ್ಯಕ್ತಿಗಳು ಸಂತಾಪ ಸೂಚಿಸಿದ್ದಾರೆ.