ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇದ್ದ ಪ್ರಥಮ ದರ್ಜೆ ಸಹಾಯಕರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಹೆಚ್ಚುವರಿ ಆಯ್ಕೆಪಟ್ಟಿಯನ್ನು ಕರ್ನಾಟಕ ಲೋಕ ಸೇವಾ ಆಯೋಗವು (FDA Additional list 2023) 28-03-2023 ರಂದು ಪ್ರಕಟಿಸಿದೆ.
ಪ್ರಥಮ ದರ್ಜೆ ಸಹಾಯಕರ ಒಟ್ಟು 960 (810 ಉ.ಮೂ.ವೃ + 150ಹೈ.ಕ) ಹುದ್ದೆಗಳಿಗೆ ಆಯೋಗವು ದಿನಾಂಕ: 01-09-2017 ರಂದು ಮತ್ತು ಸೇರ್ಪಡೆ ಅಧಿಸೂಚನೆ ದಿನಾಂಕ: 24-11-2017 ರಲ್ಲಿ ಅಧಿಸೂಚಿಸಲಾಗಿತ್ತು. ನಂತರ ದಿನಾಂಕ: 02-06-2020 ರಂದು ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿತ್ತು.
KPSC ಯು ಕರ್ನಾಟಕ ನಾಗರೀಕ ಸೇವೆಗಳ (ಲಿಪಿಕ ಹುದ್ದೆಗಳ ನೇಮಕಾತಿ) ನಿಯಮಗಳು 1978 ರನ್ವಯ ಉಳಿಕೆ ಮೂಲ ವೃಂದ ಹಾಗೂ ಹೈದರಾಬಾದ್-ಕರ್ನಾಟಕ ವೃಂದದ ಹುದ್ದೆಗಳಿಗೆ ಶೇಕಾಡ 10% ರಷ್ಟು ಹೆಚ್ಚುವರಿ ಪಟ್ಟಿಯನ್ನು ಸಿದ್ಧಪಡಿಸಿ ಕೆಳಕಂಡಂತೆ ಅಭ್ಯರ್ಥಿಗಳ ಮಾಹಿತಿಗಾಗಿ ಈ ಮೂಲಕ ಪ್ರಕಟಿಸಿದೆ ಎಂದು ತಿಳಿಸಲಾಗಿದೆ.
FDA Additional list 2023
FDA ಹುದ್ದೆಗಳ ಹೆಚ್ಚುವರಿ ಆಯ್ಕೆಪಟ್ಟಿ PDF: ಡೌನ್’ಲೋಡ್
ಉದ್ಯೋಗ ಮಾಹಿತಿಗಳನ್ನು ಓದಿ
ಕೃಷಿ ಇಲಾಖೆ ಭರ್ಜರಿ ನೇಮಕಾತಿ 2023
ಸಹಾಯಕ ಪ್ರಾಧ್ಯಾಪಕರ ನೇಮಕಾತಿ 2023