ಕರ್ನಾಟಕ ರತ್ನ ಪವರ್ ಸ್ಟಾರ್ ಡಾ. ಪುನೀತ್ ರಾಜ್‌ಕುಮಾರ್ ಅಭಿನಯದ ಕೊನೆಯ ಚಿತ್ರ “ಗಂಧದ ಗುಡಿ – Gandhada Gudi 2022” ಟ್ರೈಲರ್ ಇಂದು (ಅ.9) ಬಿಡುಗಡೆಯಾಗಿದೆ.
ಅಪ್ಪು ಅವರ ಮಹತ್ವಾಕಾಂಕ್ಷೆಯ ಪಿಆರ್‌ಕೆ ಸಂಸ್ಥೆ ಮತ್ತು Mudskipper ಜಂಟಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಲಾಗಿದ್ದು, ಇಂದು ಬೆಳಗ್ಗೆ ಅಭಿಮಾನಿ ದೇವರುಗಳ ಸಮ್ಮುಖದಲ್ಲಿ ಅಣ್ಣವರ ಕುಟುಂಬದವರು “ಗಂಧದ ಗುಡಿ” ಚಿತ್ರದ ಟ್ರೈಲರ್ ಬಿಡುಗಡೆ ಮಾಡಲಾಗಿದೆ.

ಅಮೋಘವರ್ಷ ನಿರ್ದೇಶನದ ಗಂಧದ ಗುಡಿ ಚಿತ್ರವು ರಾಜ್ಯದ ವನ್ಯ-ಜೀವಿ ಸಂಪತ್ತು ಹಾಗೂ ಪ್ರಕೃತಿ ಸೌಂದರ್ಯವನ್ನು ಅಕ್ಟೋಬರ್ 28 ರಂದು ತೆರೆಗೆ ಬರಲಿದೆ.
‘ಇಲ್ಲಿ ಏನಾದರೂ ಬೇರೆ ತರ ಪಕ್ಷಿ ತೋರ್ಸೋಕೆ ಕರ್ಕೊಂಡು ಬಂದಿದ್ದೀರಾ ಸಮುದ್ರದ ಹತ್ರ’ ಎಂದು ಜೀಪ್‌ನಲ್ಲಿ ಅಪ್ಪು ಕುಳಿತುಕೊಂಡು ಮಾತನಾಡುತ್ತಿರುವ ಸೀನ್ ಮೂಲಕ ಟ್ರೈಲರ್ ಆರಂಭವಾಗುತ್ತದೆ. ‘ಇಲ್ಲ ಇಲ್ಲೊಂದು ಸ್ಪೆಷಲ್ ಐಲ್ಯಾಂಡ್ ಇದೆ’ ಎಂದು ಅಮೋಘ್ ಹೇಳಿದಾಗ ಅಪ್ಪು ತುಂಬಾನೇ ಖುಷಿಯಿಂದ ‘ಓ ಜುರಾಸಿಕ್ ಪಾರ್ಕ್’ ಎಂದು ಹೇಳುತ್ತಾರೆ.
ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಪಿಆರ್‌ಕೆ ಸಂಸ್ಥೆ ಮತ್ತು mudsipper ಕೂಡಿ ನಿರ್ಮಾಣ ಮಾಡಿರುವ ಗಂಧದ ಗುಡಿ ಚಿತ್ರದ ಟ್ರೈಲರ್ ನೋಡಿ ಅಭಿಮಾನಿಗಳು ಭಾವುಕರಾಗಿದ್ದು, ಅಪ್ಪುವರನ್ನು ತೆರೆ ಮೇಲೆ ನೋಡುತ್ತಿರುವು ಸಂತೋಷ ಒಂದೇಡೆಯಾದರೆ ಅವರ ನಮ್ಮೋಂದಿಗೆ ಇಲ್ಲ ಅನ್ನೊದು ದುಃಖ.
ಡಾ. ರಾಜ್‌ಕುಮಾರ್ ಅವರ ಹುಟ್ಟೂರು ಗಾಜನೂರನ್ನು ಜನರಿಗೆ ಪರಿಚಯಿಸಿಕೊಟ್ಟಿದ್ದು ಟ್ರೈಲರ್‌ನ ಮತ್ತೊಂದು ವಿಶೇಷತೆ. ‘ನಮ್ಮ ಊರಿನ ಪಕ್ಕ ಇಷ್ಟು ದೊಡ್ಡ ಬೆಟ್ಟ ಇದೆ ಅಂತ ನನಗೆ ಗೊತ್ತಿರಲಿಲ್ಲ’ ಎಂದು ಹೇಳಿದ್ದಾರೆ. ಪ್ರತಿ ಸಲ ಊರಿಗೆ ಹೋದಾಗಲೂ ಅಪ್ಪು ದೊಡ್ಡ ಆಲದ ಮರಕ್ಕೆ ಭೇಟಿ ನೀಡುತ್ತಾರೆ ಆ ಮರವನ್ನು ಕೂಡ ತೋರಿಸಲಾಗಿದೆ.
Gandhada Gudi 2022 Film Trailer Released
ಡಾ. ಪುನೀತ್ ರಾಜ್‌ಕುಮಾರ್ ಅವರ ಕೊನೆಯ ಚಿತ್ರ “ಗಂಧದ ಗುಡಿ” ಟ್ರೈಲರ್ ಯುಟ್ಯೂಬ್ ನಲ್ಲಿ ಕೂಡ ಬಿಡುಗಡೆ ಮಾಡಲಾಗಿದೆ. ಒಂದೇ ಗಂಟೆಯಲ್ಲಿ 5 ಲಕ್ಷಕ್ಕೂ ಅಧಿಕ ಜನ ವಿಕ್ಷೀಸಿದ್ದಾರೆ.