ಕರ್ನಾಟಕ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮೀ ಯೋಜನೆಯಲ್ಲಿ ಯಾವುದೇ ರೀತಿಯ ಅವ್ಯವಹಾರ, ಅಕ್ರಮ (Gruha Lakshmi Scheme Apply Scam) ವನ್ನು ಸರಕಾರ ಸಹಿಸುವುದಿಲ್ಲ. ಅಂತವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವುದಕ್ಕೂ ಹಿಂಜರಿಯುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಎಚ್ಚರಿಕೆ ನೀಡಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಶೂರ್ಪಾಲಿ ಗ್ರಾಮದ ಗ್ರಾಮ ಒನ್ ಸಿಬ್ಬಂದಿ ಗೃಹ ಲಕ್ಷ್ಮೀ ಯೋಜನೆಯ ಅರ್ಜಿ ಸಲ್ಲಿಸಲು ಹಣ ಪಡೆಯುತ್ತಿರುವ ಕುರಿತು ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಗ್ರಾಮ ಒನ್ (Grama One) ಸಿಬ್ಬಂದಿಯ ಲಾಗಿನ್ ಐಡಿ ರದ್ದುಗೊಳಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವೆ ಹೆಬ್ಬಾಳಕರ್ ಟ್ವಿಟ್ ಮಾಡಿದ್ದಾರೆ.
ಹಣ ಪಡೆದ ಗ್ರಾಮ್ ಒನ್ ಸಿಬ್ಬಂದಿಗಳನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದರು. ಈ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿತ್ತಿದಂತೆ, ವಿಡಿಯೋ ಆಧರಿಸಿ ಗ್ರಾಮ್ ಒನ್ ಸಿಬ್ಬಂದಿಯ ಲಾಗಿನ್ ಐಡಿ ರದ್ದುಪಡಿಸಲಾಗಿದೆ.
ಎಲ್ಲಿಯಾದ್ರ ಹಣ ಪಡೆಯುವುದು ಕಂಡುಬಂದರೆ ಗ್ರಾಮ ಲೆಕ್ಕಾಧಿಕಾರಿಗಳು, ಪಿಡಿಒಗಳು, ತಹಶೀಲ್ದಾರರು ಮತ್ತು ಜಿಲ್ಲಾಧಿಕಾರಿಗಳ ಗಮನಕ್ಕೆ ತನ್ನಿ ಹಾಗೂ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಎಂದರು.
Gruha Lakshmi Scheme Apply Scam
ಗೃಹಲಕ್ಷ್ಮಿ ಯೋಜನೆಯ ಅರ್ಜಿ ನೋಂದಾಯಿಸಲು ಯಾರು ದುಡ್ಡು ಕೊಡಬೇಕಿಲ್ಲ. 1 ರೂಪಾಯಿ ಖರ್ಚಿಲ್ಲದೆ ಮಹಿಳೆಯರಿಗೆ ಹಣ ನೀಡಬೇಕೆನ್ನುವುದು ಸರ್ಕಾರದ ಉದ್ದೇಶವಾಗಿದೆ. ಹಾಗಾಗಿ ಗ್ರಾಮ ಓನ್ ಕರ್ನಾಟಕ ಒನ್, ಬೆಂಗಳೂರು ಒನ್ ಮತ್ತು ಬಾಪೂಜಿ ಸೇವಾ ಕೇಂದ್ರಗಳಿಗೆ ಸರ್ಕಾರವೇ ಸೇವಾ ಶುಲ್ಕ ಎಂದು ಪ್ರತಿಯೊಂದು ಅರ್ಜಿಗೆ 12 ರೂ. ನೀಡಲು ನಿರ್ಧರಿಸಿದೆ. ಹಾಗಾಗಿ ಯಾರಾದರೂ ದುಡ್ಡು ಕೋಡಿ ಎಂದು ಕೇಳಿದರು ಕೊಡಬೇಡಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮಾಹಿತಿ ನೀಡಿದ್ದಾರೆ.
ಇನ್ನು ಅನೇಕ ಗ್ರಾಮಗಳಲ್ಲಿ ಹಣ ಪಡೆದು (Gruha Lakshmi Scheme Apply Scam) ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಸುತ್ತಿರುವ ದೂರುಗಳು ಕೇಳಿಬರುತ್ತಿವೆ. ಒಂದು ಅರ್ಜಿಗೆ 50 ರೂ., 80 ರೂ., ಹೀಗೆ ಮನಬಂದಂತೆ ಜನರಿಂದ ದುಡ್ಡು ಪೀಕುತ್ತಿದ್ದಾರೆ.
ಗ್ರಾಮ ಒನ್ ಸಿಬ್ಬಂದಿಗಳು ಹಳ್ಳಿ ಜನರಿಗೆ ಹಣ ಕೊಟ್ಟರೆ ಮಾತ್ರ ಅರ್ಜಿ ಸಲ್ಲಿಸುತ್ತವೆ. ಇಲ್ಲ ನಿಮಗೆ ಯಾರು ಫ್ರೀಯಾಗಿ ಅರ್ಜಿ ಸಲ್ಲಿಸುತ್ತಾರೆ ಅಲ್ಲಿ ಹೋಗಿ ಅರ್ಜಿ ಸಲ್ಲಿಸಿ ಎಂದು ಹೇಳಿ ಹಳ್ಳಿ ಜನರಿರಿಂದ ಹಣ ಪಡೆಯುತ್ತಿದ್ದಾರೆ. ನಾವು ದುಡ್ಡು ಪಡೆಯುತ್ತಿರುವುದನ್ನು ಯಾರಿಗಾದ್ರು ಹೇಳಿದರೆ ನಿಮ್ಮ ಅರ್ಜಿ ಸಲ್ಲಿಸಲ್ಲ ಎನ್ನುತ್ತಿದ್ದಾರೆ ಎಂಬ ದೂರುಗಳು ಜನರಿಂದ ಬರುತ್ತಿವೆ. ಆದ್ದರಿಂದ ಸರ್ಕಾರ ಆದಷ್ಟು ಇದರತ್ತ ಗಮನ ಹರಿಸಬೇಕು ಎಂದು ಸರ್ವಜನಿಕರ ಒತ್ತಾಯವಾಗಿದೆ.
ಸರ್ಕಾರ ಇತರೆ ಯೋಜನೆಗಳು
ನಿಮ್ಮ ಬ್ಯಾಂಕ್ ಖಾತೆಗೆ ಆಧಾರ ಲಿಂಕ್ ಆಗಿದೆಯಾ? ಚೆಕ್ ಮಾಡಿ