ಗೃಹಲಕ್ಷ್ಮೀ: ಈ ಕಂತಿನ 2 ಸಾವಿರ ರೂ. ಜಮಾ ಆಗಿದೆ, ನಿಮಗೆ ಬಂತಾ..? | Gruhalakshmi 8th Installment Amount Credited Check Online

Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, ರಾಜ್ಯ ಸರ್ಕಾರದ ಮಹತ್ವಾಕಾಂಶೆಯ ಗೃಹಲಕ್ಷ್ಮೀ ಯೋಜನೆಯ 8 ನೇ ಕಂತಿನ 2 ಸಾವಿರ ರೂ. ಜಮಾ (Gruhalakshmi 8th Installment Amount) ಆಗಿರುವ ಬಗ್ಗೆ ಈ ಲೇಖನದಲ್ಲಿ ಮಾಹಿತಿ ಒದಗಿಸಲಾಗಿದೆ ಓದಿರಿ.

ಮಹಿಳೆಯರ ಆರ್ಥಿಕ ಸಬಲೀಕರಣದ ದೃಷ್ಠಯಿಂದ ಜಾರಿಗೆ ತರಲಾಗಿರುವ ಗೃಹಲಕ್ಷ್ಮೀ ಯೋಜನೆಯ ಅಡಿಯಲ್ಲಿ ಪ್ರತಿ ತಿಂಗಳು 2,000 ರೂ. ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ವರ್ಗಾವಣೆ ಮಾಡಲಾಗುತ್ತಿದೆ. 8 ನೇ ಕಂತಿನ ದುಡ್ಡು ಜಮಾ ಆಗಿರುವ ಮಾಹಿತಿ ಇಲ್ಲಿದೆ.

Gruhalakshmi 8th Installment Amount:

2023 ರ ಆಗಸ್ಟ 30 ರಿಂದ ಜಾರಿಯಲ್ಲಿರುವ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿದ ಅರ್ಹ ಗೃಹಲಕ್ಷ್ಮೀಯರ ಖಾತೆಗಳಿಗೆ 7 ನೇ ಕಂತಿನ 2 ಸಾವಿರ ರೂಪಾಯಿ ಈಗಾಗಲೇ ಜಮಾ ಮಾಡಲಾಗಿದ್ದು, ಜಿಲ್ಲಾವಾರು 8 ನೇ ಕಂತಿನ ಹಣ ಇವತ್ತು (11-04-2024) ಜಮಾ ಆಗಿದೆ.

ರಾಜ್ಯ ಸರ್ಕಾರದಿಂದ ಈ ಹಿಂದೆ ಹೋರಡಿಸಲಾದ ಆದೇಶದಂತೆ ಗೃಹಲಕ್ಷ್ಮೀ ಯೋಜನೆಯ ಹಣವನ್ನು ಪ್ರತಿ ತಿಂಗಳ ದಿನಾಂಕ 20 ರೊಳಗಾಗಿ ಮನೆ ಯಜಮಾನಿಯರ ಬ್ಯಾಂಕ್‌ ಖಾತೆಗಳಿಗೆ GruhaLakshmi DBT ಮೂಲಕ ವರ್ಗಾವಣೆ ಮಾಡುವಂತೆ ತಿಳಿಸಲಾಗಿತ್ತು. ಅದರಂತೆ 8 ನೇ ಕಂತಿನ ಹಣ ಸಂದಾಯ ಮಾಡಲಾಗಿದೆ. ನಿಮ್ಮ ಬ್ಯಾಂಕ್‌ ಖಾತೆಗೆ ಲಿಂಕ್‌ ಆಗಿರುವ ಮೊಬೈಲ್‌ ನಂಬರ್‌ SMS ಬಂದಿರಬಹುದು ನೋಡಿ.

ಅರ್ಹ ಮನೆ ಯಜಮಾನಿಯರಿಗೆ ಬ್ಯಾಂಕ್‌ ಖಾತೆಗೆ 8 ಕಂತುಗಳ ಒಟ್ಟು 16 ಸಾವಿರ ರೂ. ಹಣ ಜಮಾ ಆಗಿದ್ದು, ಇದು ಬಡ ಜನರಿಗೆ ಅನುಕೂಲವಾಗಿದೆ.

ನಿಮ್ಮ ಬ್ಯಾಂಕ್‌ ಖಾತೆಗೆ ಹಣ ಬರದೆ ಇದ್ದಲ್ಲಿ ಹತ್ತಿರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿ ನಿಮ್ಮ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು. ಗೃಹಲಕ್ಷ್ಮಿ DBT Status Check ಮಾಡಲು ಇಲ್ಲಿ ಕ್ಲಿಕ್‌ ಮಾಡಿ

ಇತರೆ ಮಾಹಿತಿಗಳನ್ನು ಓದಿ:

ಅನ್ನಭಾಗ್ಯ ಯೋಜನೆ: DBT Status Check ಮಾಡಿ

ಉಚಿತ ಹೊಲಿಗೆ ಯಂತ್ರ ಯೋಜನೆ 2024

Telegram Group Join Now
WhatsApp Group Join Now

Leave a Comment

error: Content is protected !!