ಗೃಹಲಕ್ಷ್ಮೀ 3ನೇ ಕಂತಿನ ಹಣ ಈ ದಿನಾಂಕದೊಳಗೆ ಜಮೆ | Gruhalakshmi Scheme Amount Credit Date

Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ.. ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮೀ ಯೋಜನೆಯ 3ನೇ ಕಂತಿನ ಹಣ (Gruhalakshmi Scheme Amount Credit Date) ಮತ್ತು ಇನ್ನೂ ಮುಂದಿನ ಎಲ್ಲ ಕಂತಿನ ಹಣವನ್ನು ಒಂದು ನಿಗದಿತ ದಿನಾಂಕದೊಳಗೆ ಮನೆ ಯಜಮಾನಿಯರ ಬ್ಯಾಂಕ್‌ ಖಾತೆಗಳಿಗೆ ಜಮಾ ಮಾಡಲು ಸರ್ಕಾರ ಮುಂದಾಗಿದೆ.

ತಾಂತ್ರಿಕ ಕಾರಣದಿಂದಾಗಿ ಗೃಹಲಕ್ಷ್ಮಿ ಯೋಜನೆಯ 2ನೇ ಕಂತಿನ ದುಡ್ಡು ವರ್ಗಾವಣೆ ಮಾಡಲು ತಡವಾಗಿತ್ತು. ಸೆಪ್ಟೆಂಬರ್‌ ತಿಂಗಳ ಹಣವನ್ನು ಅಕ್ಟೋಬರ್‌ ಕೊನೆಯ ವಾರದಲ್ಲಿ ಹಂತ ಹಂತವಾಗಿ GruhaLakshmi DBT ಮೂಲಕ ವರ್ಗಾವಣೆ ಮಾಡಿದ್ದಾರೆ.

Gruhalakshmi Scheme Amount Credit Date

2 ನೇ ಕಂತಿನ ಹಣ ಜಮೆಯಾಗಿರುವ SMS

ಗೃಹಲಕ್ಷ್ಮೀ ಯೋಜನೆಯ 3ನೇ ಕಂತಿನ ಹಣ (GruhaLakshmi Scheme 3rd Installment) ಮತ್ತು ಇನ್ನೂ ಮುಂದಿನ ಎಲ್ಲ ಕಂತಿನ 2 ಸಾವಿರ ರೂಪಾಯಿ ಹಣ ವರ್ಗಾವಣೆ ಮಾಡಲು ಹಣಕಾಸು ಇಲಾಖೆಯಿಂದ ಹಸಿರು ನಿಶಾನೆ ದೊರೆತಿದ್ದು, ಪ್ರತಿ ತಿಂಗಳ ದಿನಾಂಕ 20ರೊಳಗಾಗಿ ಮನೆ ಯಜಮಾನಿಯರ ಖಾತೆಗೆ ಹಣ ಜಮಾ ಮಾಡಲು ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗಿದೆ.

ಅದರಂತೆ ಅನ್ನಭಾಗ್ಯ ಯೋಜನೆಯ ಹಣವನ್ನು ಪ್ರತಿ ತಿಂಗಳ ದಿನಾಂಕ 20 ರೊಳಗೆ ವರ್ಗಾವಣೆ ಮಾಡಲಾಗುವುದು ಎಂದು ಸರ್ಕಾರ ತಿಳಿಸಿದೆ. ಸಾಮಾಜಿಕ ಭದ್ರತಾ ಪಿಂಚಣಿ ಹಣವನ್ನು ದಿನಾಂಕ 5 ರೊಳಗೆ ಜಮಾ ಮಾಡಲಿದ್ದಾರೆ. ಈ ರೀತಿಯ ಸರ್ಕಾರದ ಕ್ರಮದಿಂದಾಗಿ ಫಲಾನುಭವಿಗಳ ಗೊಂದಲ ಬಗೆಹರಿಯಲಿದೆ.

ಇತರೆ ಮಾಹಿತಿಗಳನ್ನು ಓದಿ

ಗೃಹಲಕ್ಷ್ಮೀ ಯೋಜನೆಯ 4ನೇ ಕಂತಿನ ಹಣ ಜಮಾ

ಗೃಹಲಕ್ಷ್ಮಿ ಯೋಜನೆ 3 ನೇ ಕಂತಿನ 2,000 ರೂ. ಹಣ ಜಮಾ

ಉಚಿತ ಹೊಲಿಗೆ ಯಂತ್ರ ಯೋಜನೆ, ಆನ್‌ಲೈನ್‌ ಅರ್ಜಿ ಆಹ್ವಾನ

ರಾಜ್ಯ ಸರ್ಕಾರದ ವಿದ್ಯಾರ್ಥಿವೇತನ 2023, ಆನ್‌ಲೈನ್‌ ಅರ್ಜಿ ಆಹ್ವಾನ

Telegram Group Join Now
WhatsApp Group Join Now

Leave a Comment

error: Content is protected !!