ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ನಲ್ಲಿನ ಹುದ್ದೆಗಳ ಕೈಗೊಳ್ಳಲಾಗುತ್ತಿರುವ ಮೂಲ ದಾಖಲಾತಿಗಳ ಪರಿಶೀಲನಾ ಪ್ರಕ್ರಿಯೆಗೆ ಕರ್ನಾಟಕ ಉಚ್ಛನ್ಯಾಯಾಲಯ ತಡೆಯಾಜ್ಞೆ (High Court Stay For KPTCL Recruitment 2023) ನೀಡಿದೆ.
ಆನ್ʼಲೈನ್ ಮೂಲಕ ದಾಖಲಾತಿ ಪರಿಶೀಲನಾ ಪ್ರಕ್ರಿಯೆಯನ್ನು 14-03-2023 ರಿಂದ 20-03-2023 ರ ವರೆಗೆ ಅವಕಾಶ ನೀಡಲಾಗಿತ್ತು. ಆದರೆ ಹೈಕೋರ್ಟ್ ನಿಂದ ತಡೆಯಾಜ್ಞೆ ನೀಡಲಾಗಿದೆ.
High Court Stay For KPTCL Recruitment 2023
KPTCL ನಲ್ಲಿನ ಸಹಾಯಕ ಅಭಿಯಂತರರು / Assistant Engineer (Electrical) ಹುದ್ದೆಗಳ ನೇಮಕಾತಿಗೆ ಹೈಕೋರ್ಟ್ ತಡೆ (Stay) ನೀಡಿದೆ. ಈ ಹಿನ್ನೆಲೆಯಲ್ಲಿ ಆನ್ ಲೈನ್ ಮೂಲಕ ದಾಖಲಾತಿ (Document) ಸಲ್ಲಿಸುವ ಪ್ರಕ್ರಿಯೆಯನ್ನು ಮುಂದಿನ ಆದೇಶದವರೆಗೂ ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ.
KPTCL ಅಧಿಕೃತ ವೆಬ್‌ಸೈಟ್‌ನಲ್ಲಿ ಹೀಗೆ ಮಾಹಿತಿ ನೀಡಲಾಗಿದೆ. “ಮಾನ್ಯ ಕರ್ನಾಟಕ ಉಚ್ಛನ್ಯಾಯಾಲಯವು ದಿನಾಂಕ 15.03.2023 ರಂದು ರಿಟ್ ಅರ್ಜಿ ಸಂಖ್ಯೆ 4979/2023 ರಲ್ಲಿ ನೀಡಿರುವ ಮಧ್ಯಂತರ ಆದೇಶದಲ್ಲಿ, ಕವಿಪ್ರನಿನಿಯಲ್ಲಿ ಸಹಾಯಕ ಇಂಜಿನಿಯರ್ (ವಿದ್ಯುತ್) ಸ್ಥಳೀಯ ವೃಂದ ಮತ್ತು ಮಿಕ್ಕುಳಿದ ವೃಂದದ ಹುದ್ದೆಗಳ ಭರ್ತಿಗಾಗಿ ದಿನಾಂಕ 01-03-2023 ರ ಅಧಿಸೂಚನೆಯನ್ವಯ ಕೈಗೊಳ್ಳಲಾಗುತ್ತಿರುವ ಮೂಲ ದಾಖಲಾತಿಗಳ ಪರಿಶೀಲನಾ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಿರುವ ಹಿನ್ನಲೆಯಲ್ಲಿ, ಆನ್ʼಲೈನ್ ಮೂಲಕ ದಾಖಲಾತಿ ಸಲ್ಲಿಸುವ ಪ್ರಕ್ರಿಯೆಯನ್ನು ಮುಂದಿನ ಆದೇಶದವರೆಗೂ ತಡೆಹಿಡಿಯಲಾಗಿದೆ.” Download
ಅಭ್ಯರ್ಥಿಗಳು ತಮ್ಮ Documents ನ್ನು KPTCL ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್ ಲೋಡ್ ಮಾಡಲು 14-03-2023 ರಿಂದ 20-03-2023 ರ ವರೆಗೆ ಅವಕಾಶ ನೀಡಲಾಗಿತ್ತು.
ಉದ್ಯೋಗ ಮಾಹಿತಿಗಳನ್ನು ಓದಿ
ಪೊಲೀಸ್ ಕಾನ್ಸ್‌ಟೇಬಲ್ ಲಿಖಿತ ಪರೀಕ್ಷೆ ದಿನಾಂಕ
ಬೆಂಗಳೂರು ಮೆಟ್ರೋ ಭರ್ಜರಿ ನೇಮಕಾತಿ 2023