ವಸತಿ ಯೋಜನೆ 2023: ಮನೆ ಕಟ್ಟಲು ಸರ್ಕಾರದ ಬಡ್ಡಿ ಸಹಾಯಧನ | Home Loan Subsidy Scheme 2023 By Govt

Telegram Group Join Now
WhatsApp Group Join Now

ಪ್ರತಿಯೊಬ್ಬರಿಗೂ ಸ್ವಂತ ಮನೆ ಇರಬೇಕು ಎಂಬ ಬಯಕೆ ಇರುತ್ತದೆ. ಆದರೆ ಇಂದಿನ ದಿನಮಾನದಲ್ಲಿ ಮನೆ ಕಟ್ಟುವುದು ದೊಡ್ಡ ಸಹಾಸವೇ ಸರಿ. ನಮ್ಮ ದೇಶದಲ್ಲಿ ಎಷ್ಟೋ ಜನರಿಗೆ ಇಂದಿಗೂ ಸ್ವಂತ ಸೂರು ಇಲ್ಲ, ಬಾಡಿಗೆ ಮನೆಯಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ. ಸ್ವಂತ ಮನೆ ಇಲ್ಲದವರಿಗೆ ಕೇಂದ್ರ ಸರ್ಕಾರದ Home Loan Subsidy Scheme ಬಗ್ಗೆ ಈ ಲೇಖನದಲ್ಲಿ ಮಾಹಿತಿ ನೀಡಲಾಗಿದೆ.

2024ರ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತರಲು ಮುಂದಾಗಿದೆ. ಅವುಗಳಲ್ಲಿ ಬಡ್ಡಿ ಸಹಾಯಧನ (Home Loan Interest Subsidy) ನೀಡುವ ಗೃಹ ಸಾಲ ಯೋಜನೆಯು ಒಂದಾಗಿದೆ ಎಂದು ಹೇಳಬಹುದು.

Home Loan Subsidy Scheme 2023

ಮಧ್ಯಮ ವರ್ಗದ ಜನರಿಗೆ ಮನೆ ಕಟ್ಟಲು ಗೃಹ ಸಾಲ (Home Loan) ಮಾಡಿದವರಿಗೆ ಕೇಂದ್ರ ಸರ್ಕಾರ ಗುಡ್‌ ನ್ಯೂಸ್‌ ನೀಡಲು ಮುಂದಾಗಿದೆ. 50 ಲಕ್ಷಕ್ಕಿಂತ ಕಡಿದು ಮೊತ್ತದ ಗೃಹ ಸಾಲವನ್ನು 20 ವರ್ಷಗಳ ಅವಧಿಗೆ ಪಡೆದಿರುವವರು ಪ್ರಸ್ತಾಪಿತ ಯೋಜನೆಗೆ ಅರ್ಹರಾಗಿರುತ್ತಾರೆ ಎಂದು ಮೂಲಗಳು ತಿಳಿಸಿವೆ.

20 ವರ್ಷಗಳ ಅವಧಿಗೆ ರೂ. 50 ಲಕ್ಷ ಗಿಂತ ಕಡಿಮೆ ಇರುವ ಗೃಹ ಸಾಲ ಪಡೆದವರಿಗೆ ಸಬ್ಸಿಡಿ ನೀಡಲು ಸರ್ಕಾರ ಯೋಜನೆ ರೂಪಿಸಿದೆ ಎಂದು ತಿಳಿದು ಬಂದಿದೆ. ಈ ಯೋಜನೆಯಡಿಯಲ್ಲಿ ಒಟ್ಟು ಸಾಲದ 9 ಲಕ್ಷ ರೂ.ವರೆಗಿನ ವಾರ್ಷಿಕ ಶೇ. 3 ರಿಂದ 6.5 ರಷ್ಟು ಬಡ್ಡಿ ಸಬ್ಸಿಡಿಯನ್ನು ನೀಡಲಾಗುತ್ತದೆ.

ನಗರ ಪ್ರದೇಶಗಳಲ್ಲಿ ಸಣ್ಣ ಮನೆಗಳನ್ನು ಕಟ್ಟಲು ಗೃಹ ಸಾಲ ಯೋಜನೆಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಇದಕ್ಕಾಗಿ 60,000 ಕೋಟಿ ರೂ.ಗಳನ್ನು ವ್ಯಯಿಸಲಿದೆ. ಈ ಯೋಜನೆ ಅಡಿಯಲ್ಲಿ ಮುಂದಿನ ಐದು ವರ್ಷಗಳಲ್ಲಿ ಕಡಿಮೆ ಆದಾಯ ಇರುವ 25 ಲಕ್ಷ ಜನರಿಗೆ ಪ್ರಯೋಜನ ಸಿಗಲಿದೆ ಎಂದಿ ತಿಳಿದು ಬಂದಿದೆ.

ಆಗಸ್ಟ್ 15ರಂದು ಪ್ರಧಾನಿ ನರೇಂದ್ರ ಮೋದಿ ಅವರು ಗೃಹ ಸಾಲ ಬಡ್ಡಿ (Home Loan Interest) ಸಹಾಯಧನದ ಬಗ್ಗೆ ಮಾತನಾಡಿದ್ದರು. ಈಗಾಗಲೇ ಈ ಯೋಜನೆಯ ರೂಪುರೇಷೆ ಮಾಡಲಾಗಿದ್ದು, ಅಂತಿಮ ಹಂತಕ್ಕೆ ಬಂದಿದೆ. ಸಂಸತ್‌ ಒಪ್ಪಿಗೆ ನೀಡಿದ ಬಳಿಕ ಈ ಯೋಜನೆ ಜಾರಿಗೆ ಬರಲಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ಮುಂಬರುವ ವರ್ಷಗಳಲ್ಲಿ ಹೊಸ ಯೋಜನೆ ಒಂದನ್ನು ತರುಲಿದ್ದು, ಇದರಿಂದ ನಗರಗಳಲ್ಲಿ ಬಾಡಿಗೆ ಮನೆಗಳಲ್ಲಿರುವ ಅಥವಾ ಕೂಳಗೇರಿಗಳಲ್ಲಿರುವ ಅಥವಾ ಅನಧಿಕೃತ ಕಾಲೊನಿಗಳಲ್ಲಿ ವಾಸ ಮಾಡುತ್ತಿರುವ ಕುಟುಂಬಗಳಿಗೆ ಈ ಯೋಜನೆಯಿಂದ ಲಾಭ ಆಗಲಿದೆ ಎಂದು ಪ್ರಧಾನಿ ಮೋದಿ ಅವರು ಆಗಸ್ಟ್ 15 ರ ಭಾಷಣದಲ್ಲಿ ತಿಳಿಸಿದ್ದರು.

ಈ ಹಿಂದೆ 2017 ರಿಂದ 2022 ರವರೆಗೆ ಕಡಿಮೆ ಆದಾಯ ಇರುವ ನಗರ ಪ್ರದೇಶದಲ್ಲಿ ವಾಸಿಸುತ್ತಿರುವ ಜನರಿಗಾಗಿ ಇದೇ ರೀತಿಯ ಯೋಜನೆಯನ್ನು ಜಾರಿ ಮಾಡಲಾಗಿತ್ತು. ಇದಕ್ಕಾಗಿ 1.227 ಕೋಟಿ ಮನೆಗಳನ್ನು ಮಂಜೂರು ಮಾಡಲಾಗಿತ್ತು.

Home Loan Subsidy Scheme 2023 ಜಾರಿಯಾದರೆ ಕಡಿಮೆ ಆದಾಯ ಇರುವ ಜನರಿಗೆ ಪ್ರಯೋಜನ ಆಗುತ್ತದೆ. ಸರ್ಕಾರ ಆದಷ್ಟು ಬೇಗ ಅನುಷ್ಠಾನ ಮಾಡಲಿ. ಜನರು ತಮ್ಮ ಸ್ವಂತ ಮನೆಗಳಲ್ಲಿ ವಾಸಿಸುವಂತಾಗಲಿ.

ಇತರೆ ಮಾಹಿತಿಗಳನ್ನು ಓದಿ

ಉಚಿತ ಹೊಲಿಗೆ ಯಂತ್ರ ಯೋಜನೆ, ಆನ್‌ಲೈನ್‌ ಅರ್ಜಿ ಆಹ್ವಾನ

ಉಚಿತ ಲ್ಯಾಪ್‌ಟಾಪ್‌ ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ

ಭೂಮಿ ಖರೀದಿಸಲು ಸರ್ಕಾರದಿಂದ 25 ಲಕ್ಷ ರೂ. ಸಬ್ಸಿಡಿ ಮತ್ತು ಸಾಲಸೌಲಭ್ಯ

ರಾಜ್ಯ ಸರ್ಕಾರದ ವಿದ್ಯಾರ್ಥಿವೇತನ 2023, ಆನ್‌ಲೈನ್‌ ಅರ್ಜಿ ಆಹ್ವಾನ

ಗೃಹ ಲಕ್ಷ್ಮಿ ಅರ್ಜಿ Status Check ಮಾಡುವ ವಿಧಾನ

Telegram Group Join Now
WhatsApp Group Join Now

Leave a Comment

error: Content is protected !!