ಸರ್ಕಾರಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇಲ್ಲದೆ ಭರ್ಜರಿ ಅವಕಾಶ. ಆದಾಯ ತೆರಿಗೆ ಇಲಾಖೆಯಲ್ಲಿ ಖಾಲಿ ಇರುವ ಇನ್ ಕಮ್ ಟ್ಯಾಕ್ಸ್ ಆಫೀಸರ್, ಟ್ಯಾಕ್ಸ್ ಅಸಿಸ್ಟೆಂಟ್, ಹಾಗೂ ಮಲ್ಟಿ ಟಾಸ್ಕಿಂಗ್ ಸ್ಟಾಪ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು (Income Tax Recruitment) ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
ಬ್ಯಾಂಕ್ ಆಫ್ ಬರೋಡಾ ಹೊಸ ನೇಮಕಾತಿ 2023
Income Tax Recruitment 2023 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಆದಾಯ ತೆರಿಗೆ ಇಲಾಖೆ
ಒಟ್ಟು ಹುದ್ದೆಗಳು: 71 ಹುದ್ದೆಗಳು
ವೇತನ ಶ್ರೇಣಿ: ಹುದ್ದೆಗಳಿಗೆ ಅನುಸಾರ ವೇತನ ನೀಡಲಾಗುವುದು.
ಅರ್ಜಿ ಸಲ್ಲಿಕೆ ಆರಂಭ: 06-02-2023
ವಿದ್ಯಾರ್ಹತೆ:
ಇನ್ ಕಮ್ ಟ್ಯಾಕ್ಸ್ ಆಫೀಸರ್: ಪದವಿ
ಟ್ಯಾಕ್ಸ್ ಅಸಿಸ್ಟೆಂಟ್: ಪದವಿ
ಮಲ್ಟಿ ಟಾಸ್ಕಿಂಗ್ ಸ್ಟಾಪ್: 10 ನೇ ತರಗತಿ
ವಯೋಮಿತಿ:
ಇನ್ಕಮ್ ಟ್ಯಾಕ್ಸ್ ಆಫೀಸರ್: 30 ವರ್ಷ ಮೀರಿರಬಾರದು
ಟ್ಯಾಕ್ಸ್ ಅಸಿಸ್ಟೆಂಟ್: ಕನಿಷ್ಠ 18 ವರ್ಷ ಹಾಗೂ ಗರಿಷ್ಠ 27 ವರ್ಷ ಮೀರಿರಬಾರದು.
ಮಲ್ಟಿ ಟಾಸ್ಕಿಂಗ್ ಸ್ಟಾಪ್: ಕನಿಷ್ಠ 18 ವರ್ಷ ಹಾಗೂ ಗರಿಷ್ಠ 25 ವರ್ಷ ಮೀರಿರಬಾರದು.
ವೇತನ ಶ್ರೇಣಿ:
ಇನ್ ಕಮ್ ಟ್ಯಾಕ್ಸ್ ಆಫೀಸರ್: 44,900 ರಿಂದ 1,42,400 ರೂ
ಟ್ಯಾಕ್ಸ್ ಅಸಿಸ್ಟೆಂಟ್: 25,500 ರಿಂದ 81,100 ರೂ
ಮಲ್ಟಿ ಟಾಸ್ಕಿಂಗ್ ಸ್ಟಾಪ್: 18,000 ರಿಂದ 56,900 ರೂ
ಅರ್ಜಿ ಶುಲ್ಕ:
ಸಾಮಾನ್ಯ ವರ್ಗ ಹಾಗೂ ಇತರೆ ವರ್ಗಗಳಿಗೆ 100 ರೂ
SC/ST/PWBD/ EX- Servicesman ಶುಲ್ಕ ಇಲ್ಲ.
Income Tax Recruitment 2023 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಕೆ ಆರಂಭ ದಿನಾಂಕ: 06-02-2023
ಅರ್ಜಿ ಸಲ್ಲಕೆ ಕೊನೆಯ ದಿನಾಂಕ: 24-03-2023
ಸೂಚನೆ: (The meritorious sportsperson will be considered for appointment based on the following criteria)
ಪ್ರಮುಖ ಲಿಂಕ್ ಗಳು:
ಅಧಿಸೂಚನೆ: ಡೌನ್‌ಲೋಡ್
ಅಧಿಕೃತ ವೆಬ್‌ಸೈಟ್: incometaxbengaluru.org
ಸ್ನೇಹಿತರೇ.. ಈ ನಮ್ಮ ಲೇಖನ Income Tax Recruitment 2023 ವು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇನೆ. ಇದೇ ರೀತಿಯ ಉದ್ಯೋಗ ಮಾಹಿತಿಗಾಗಿ ನಮ್ಮ ವಾಟ್ಸ್ ಆಪ್ ಮತ್ತು ಟೆಲಿಗ್ರಾಮ್ ಗ್ರುಪ್ ಸೇರಿರಿ. ನಾವು ಹೋಸ ಹೋಸ ಮಾಹಿತಿಯನ್ನು ನೀಡುತ್ತೇವೆ. ಧನ್ಯವಾದಗಳು..
Income Tax Recruitment 2023 FAQ
-
ಆದಾಯ ತೆರಿಗೆ ಇಲಾಖೆ ನೇಮಕಾತಿಯ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ?
ಆದಾಯ ತೆರಿಗೆ ಇಲಾಖೆ ನೇಮಕಾತಿ 2023 ಯ ಅರ್ಜಿ ಸಲ್ಲಿಕೆಯ ಅವಧಿಯು 2023 ರ ಫೆ. 6 ರಿಂದ ಮಾರ್ಚ್ 24 ರವರೆಗೆ ಅವಕಾಶ ಇರುತ್ತದೆ.
-
ಇನ್ ಕಮ್ ಟ್ಯಾಕ್ಸ್ ಆಫೀಸರ್ ಹುದ್ದೆಯ ಸಂಬಳ ಎಷ್ಟು?
ಆದಾಯ ತೆರಿಗೆ ಅಧಿಕಾರಿ ಹುದ್ದೆಯ ವೇತನವು 44,900 ರಿಂದ 1,42,400 ರೂ ಇರುತ್ತದೆ.
-
ಇನ್ ಕಮ್ ಟ್ಯಾಕ್ಸ್ ಆಫೀಸರ್ ಹುದ್ದೆಯ ವಿದ್ಯಾರ್ಹತೆ ಏನು?
ಆದಾಯ ತೆರಿಗೆ ಇಲಾಖೆಯಲ್ಲಿನ ಇನ್ ಕಮ್ ಟ್ಯಾಕ್ಸ್ ಆಫೀಸರ್ ಹುದ್ದೆಗೆ ಅರ್ಜಿ ಸಲ್ಲಿಸಲು ಪದವಿ ಓದಿರಬೇಕು