ಎಲ್ಲರಿಗೂ ನಮಸ್ಕಾರ, ಕರ್ನಾಟಕ ಸರ್ಕಾರವು ಅನೇಕ ಕಲ್ಯಾಣ ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತಲೆ ಇರುತ್ತದೆ. ಅದರಂತೆ ವಿದ್ಯಾರ್ಥಿಗಳಿಗಾಗಿ ಕಲಿಕಾ ಭಾಗ್ಯ ಯೋಜನೆ (Kalika Bhagya Scholarship) ಜಾರಿ ಮಾಡಲಾಗಿದೆ.
ಕಲಿಕಾ ಭಾಗ್ಯ ಯೋಜನೆಯ ಬಗ್ಗೆ ಈ ಲೇಖನದಲ್ಲಿ ಮಾಹಿತಿ ನೀಡಲಿದ್ದು, ಈ ಯೋಜನೆಗೆ ಯಾರು ಅರ್ಹರು, ಏಷ್ಟು ಶೈಕ್ಷಣಿಕ ಸಹಾಯಧನ ನೀಡಲಾಗುತ್ತದೆ ಎಂಬ ವಿವರ ಈ ಕೇಳಗೆ ನೀಡಲಾಗಿದೆ.
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಈ ವಿದ್ಯಾರ್ಥಿವೇತನವನ್ನು ನೀಡಲಾಗುತ್ತಿದೆ. ಅರ್ಹ ಫಲಾನುಭವಿಗಳು ಇದರ ಲಾಭ ಪಡೆಯಬಹುದು. ಈ ಯೋಜನೆಯು ನೊಂದಾಯಿತ ಕಾರ್ಮಿಕರ ಇಬ್ಬರು ಮಕ್ಕಳಿಗೆ ಮಾತ್ರ ನೀಡಲಾಗುತ್ತದೆ.
ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಧನ ಸಹಾಯ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಆಹ್ವಾನ
Kalika Bhagya Scholarship ಮಾಹಿತಿ:
3 ರಿಂದ 5 ವರ್ಷದ ನರ್ಸರಿ ಮಕ್ಕಳಿಗೆ | 5,000 ರೂ. |
1 ರಿಂದ 4 ನೇ ತರಗತಿಯ ವಿದ್ಯಾರ್ಥಿಗಳಿಗೆ | 5,000 ರೂ. |
5 ರಿಂದ 8 ನೇ ತರಗತಿಯ ವಿದ್ಯಾರ್ಥಿಗಳಿಗೆ | 8,000 ರೂ. |
9 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳಿಗೆ | 12,000 ರೂ. |
ಪ್ರಥಮ ಅಥವಾ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ | 15,000 ರೂ. |
ಪಾಲಿಟೆಕ್ನಿಕ್/ ಡಿಪ್ಲೊಮಾ/ ITI ವಿದ್ಯಾರ್ಥಿಗಳಿಗೆ | 20,000 ರೂ. |
ಬಿಎಸ್ಸಿ ನರ್ಸಿಂಗ್/ ಜಿಎನ್’ಎಮ್/ ಎಎನ್’ಎಮ್/ ಪ್ಯಾರಾ ಮೆಡಿಕಲ್ ಕೋರ್ಸ್ ವಿದ್ಯಾರ್ಥಿಗಳಿಗೆ | 40,000 ರೂ. |
ಡಿ.ಎಡ್ ವಿದ್ಯಾರ್ಥಿಗಳಿಗೆ | 25,000 ರೂ. |
ಬಿ.ಎಡ್ ವಿದ್ಯಾರ್ಥಿಗಳಿಗೆ | 35,000 ರೂ. |
ಪದವಿ ಪ್ರತಿ ವರ್ಷಕ್ಕೆ (ಯಾವುದೇ ಪದವಿ) | 25,000 ರೂ. |
LLB, LLM ವಿದ್ಯಾರ್ಥಿಗಳಿಗೆ | 30,000 ರೂ. |
ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ | 35,000 ರೂ. |
BE/ ಬಿ.ಟೆಕ್ ಸಂಬಂದಿಸಿದ ಯುಜಿ ಕೋರ್ಸ್ ಸದರಿ 2 ವರ್ಷ ಅವಧಿಗೆ ಒಳಪಟ್ಟು | 50,000 ರೂ. |
ಎಮ್.ಟೆಕ್ / ಎಮ್.ಇ (ಇದಕ್ಕೆ ಸಂಬಂದ ಪಟ್ಟ ಸಮಾನಾಂತರ ಸ್ನಾತಕೋತ್ತರ ಕೋರ್ಸ್) | 60,000 ರೂ. |
ಎಮ್’ಡಿ ಅಭ್ಯರ್ಥಿಗಳಿಗೆ | 75,000 ರೂ. |
ಪಿಹೆಚ್ ಡಿ / ಎಮ್. ಫಿಲ್ | 25,000 ರೂ. |
ಐಐಟಿ/ ಐಐಐಟಿ/ ಐಐಎಮ್/ ಎನ್’ಐಟಿ/ ಐಐಎಸ್ಇಆರ್/ ಎಐಐಎಮ್ಎಸ್/ ಎನ್ಎಲ್’ಯೂ ಮತ್ತು ಭಾರತ ಸರ್ಕಾರದ ಮಾನ್ಯತೆ ಪಡೆದ ಕೋರ್ಸ’ಗಳು | ಪಾವತಿಸಿದ ಭೋದನಾ ಶುಲ್ಕ. |
ಈ ಮಾಹಿತಿಗಳನ್ನು ಓದಿ:
ಬೆಳೆ ಪರಿಹಾರ ಹಣ ಜಮಾ, ನಿಮ್ಮ ಖಾತೆಗೆ ಬಂತಾ ನೋಡಿ
I have admission time please help me this is scholarship