ವಾಹನ ಚಲಾವಣೆ ಕಲಿತು ಸ್ವ-ಉದ್ಯೋಗ ಮಾಡಲು ಇಚ್ಛೆ ಹೊಂದಿರುವವರಿಗೆ ಸಿಹಿ ಸುದ್ದಿ. ತಾವು ಚಾಲಕರಾಗಿ ಸ್ವತಃ ಕಾರು, ಇತರೆ ವಾಹನ ಸೇವೆ ಒದಗಿಸಲು ಅಥವಾ ಚಾಲಕ ವೃತ್ತಿ ಜೀವನ ನಡೆಸಲು ಬಯಸುವ ಫಲಾನುಭವಿಗಳಿಗೆ ಇದೊಂದು ಸುರ್ವಣವಕಾಶ. ನೀವು ಮುಂದೆ ಬಸ್ ಚಾಲಕರ ವೃತ್ತಿಯನ್ನು ಪಡೆಯಬಹುದು. (Karnataka Free Driving Training) ಇಲ್ಲಿದೆ ಮಾಹಿತಿ ಓದಿ.
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಯೋಜನೆ ಅಡಿಯಲ್ಲಿ ಪರಿಶಿಷ್ಟ ವರ್ಗಕ್ಕೆ ಸೇರಿದ ಎಲ್ಲಾ ಸಮುದಾಯದ ಅಭ್ಯರ್ಥಿಗಳಿಗೆ ಉಚಿತವಾಗಿ ಲಘು ಮತ್ತು ಭಾರಿ ವಾಹನ ಚಾಲನ ತರಬೇತಿ ನೀಡಲು ಪ್ರಾದೇಶಿಕ ಸಾರಿಗೆ ಕಛೇರಿಯಿಂದ ಚಾಲನ ಅನುಜ್ಞಾಪತ್ರ ಹಾಗೂ ಬ್ಯಾಡ್ಜ್ ನೀಡುವ ಕಾರ್ಯಕ್ರಮವನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿರುತ್ತದೆ.
ಯುವನಿಧಿ ಯೋಜನೆ; ನಿರುದ್ಯೋಗಿಗಳಿಗೆ ಮಾಸಿಕ 3,000 ರೂ.
Karnataka Free Driving Training ಕನಿಷ್ಠ ಅರ್ಹತೆ ಹಾಗೂ ಬೇಕಾಗುವ ದಾಖಲೆಗಳು.
ಲಘು ವಾಹನ ಚಾಲನಾ ತರಬೇತಿ (ಕಾರ್ /ಜೀಪ್).
ಕನಿಷ್ಠ 18 ವರ್ಷ ವಯೋಮಿತಿ ತುಂಬಿರಬೇಕು ಹಾಗೂ ಗರಿಷ್ಠ 45 ವರ್ಷ.
ಜನ್ಮ ದಿನಾಂಕದ ಬಗ್ಗೆ ಜನನ ಪ್ರಮಾಣಪತ್ರ ಅಥವಾ ಎಸ್.ಎಸ್.ಎಲ್.ಸಿ, ಅಂಕಪಟ್ಟಿ ಅಥವಾ ಶಾಲಾ ವರ್ಗಾವಣಾ ಪ್ರಮಾಣಪತ್ರ ಅಥವಾ ನೋಟರಿಯಿಂದ ಪ್ರಮಾಣ ಪತ್ರ.
ಆಧಾರ್ ಕಾರ್ಡ್ ಹಾಗೂ ಜಾತಿ ಮತ್ತು ಆದಾಯ ಪ್ರಮಾಣಪತ್ರ.
ಪಾಸ್ ಪೋರ್ಟ್ ಅಳತೆಯ ಭಾವಚಿತ್ರ-5.
ಭಾರಿ ವಾಹನ ಚಾಲನಾ ತರಬೇತಿ (ಬಸ್)
ಕನಿಷ್ಠ 20 ವರ್ಷಗಳ ವಯೋಮಿತಿ ಪೂರೈಸಿರಬೇಕು ಹಾಗೂ ಗರಿಷ್ಠ 45 ವರ್ಷ.
ಲಘು ವಾಹನ ಚಾಲನಾ ಅನುಜ್ಞಾಪತ್ರ ಪಡೆದು ಒಂದು ವರ್ಷ ಪೂರ್ಣಗೊಳಿಸಿರಬೇಕು.
ಜನ್ಮ ದಿನಾಂಕದ ಬಗ್ಗೆ ಜನನ ಪ್ರಮಾಣಪತ್ರ ಅಥವಾ ಎಸ್.ಎಸ್.ಎಲ್.ಸಿ, ಅಂಕಪಟ್ಟಿ ಅಥವಾ ಶಾಲಾ ವರ್ಗಾವಣಾ ಪ್ರಮಾಣಪತ್ರ ಅಥವಾ ನೋಟರಿಯಿಂದ ಪ್ರಮಾಣ ಪತ್ರ.
ಆಧಾರ್ ಕಾರ್ಡ್ ಹಾಗೂ ಜಾತಿ ಮತ್ತು ಆದಾಯ ಪ್ರಮಾಣಪತ್ರ.
ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ 5.
ಅರ್ಹ ಎಸ್.ಟಿ ಅಭ್ಯರ್ಥಿಗಳಿಗೆ ಲಘು ಹಾಗೂ ಭಾರಿ ವಾಹನ ಚಾಲನಾ ತರಬೇತಿ (30 ದಿನಗಳು) ಮತ್ತು ತರಬೇತಿಯ ಅವಧಿಯಲ್ಲಿ ವಸತಿ ಮತ್ತು ಊಟೋಪಚಾರದ ವ್ಯವಸ್ಥೆಯನ್ನು ಉಚಿತವಾಗಿ ನೀಡಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ:
ಆಸಕ್ತಿ ಇರುವ ಪರಿಶಿಷ್ಟ ಪಂಗಡದ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳು ತಮ್ಮ ಮೂಲ ದಾಖಲೆ ಹಾಗೂ 02 ಸೆಟ್ ಜೆರಾಕ್ಸ್ ಪ್ರತಿಗಳೊಂದಿಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ, ಶಾಂತಿನಗರ ಬಸ್ ನಿಲ್ದಾಣ, ಬೆಂಗಳೂರು- 560027 31-07-2023 ರ ವರೆಗೆ ಹೆಸರು ನೋಂದಾಯಿಸಿ ಕೊಳ್ಳಬಹುದಾಗಿರುತ್ತದೆ.
Karnataka Free Driving Training ಪ್ರಮುಖ ದಿನಾಂಕಗಳು:
ಪ್ರಕಟಣೆ ಹೊರಡಿಸಿದ ದಿನಾಂಕ: 31-05-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 31-07-2023
ಪ್ರಮುಖ ಲಿಂಕ್’ಗಳು:
ಪ್ರಕಟಣೆ: ಡೌನ್‌ಲೋಡ್
ಅಧಿಕೃತ ವೆಬ್‌ಸೈಟ್: www.mybmtc.in