KEA Result 2024: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೇಮಕಾತಿ ಪರಿಷ್ಕೃತ ಫಲಿತಾಂಶ ಪ್ರಕಟ

Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವಿವಿಧ ನಿಗಮಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಪರೀಕ್ಷೆಯನ್ನು ನಡೆಸಲಾಗಿತ್ತು. ಇದೀಗ ಪರಿಷ್ಕೃತ ಫಲಿತಾಂಶ (KEA Result 2024) ವನ್ನು KEA ಪ್ರಕಟಿಸಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಅಕ್ಟೋಬರ್ 28 2023 ರಿಂದ ನವೆಂಬರ್ 25 2023 ರವರೆಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲಾಗಿತ್ತು. ಒಟ್ಟು 684 ಹುದ್ದೆಗಳಿಗೆ ಸಂಬಂಧಿಸಿದಂತೆ ಪರಿಷ್ಕೃತ ಅಂಕ ಪಟ್ಟಿ ಪ್ರಕಟಿಸಲಾಗಿದೆ.

ಮೊದಲು ಏಪ್ರಿಲ್ 22ರಂದು ತಾತ್ಕಾಲಿಕ ಅಂಕ ಪಟ್ಟಿಯನ್ನ ಪ್ರಕಟಿಸಲಾಗಿತ್ತು ಈ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಈವರೆಗೆ ಬಂದಿರುವ ಆಕ್ಷೇಪಣೆಗಳನ್ನು ಪರೀಶೀಲಿಸಿ ನಂತರ ಪರಿಷ್ಕೃತ ಅಂಕ ಪಟ್ಟಿಯನ್ನು (KEA Result 2024) ಪ್ರಕಟಸಿಲಾಗಿದೆ. ಒಟ್ಟು ಐದು ನಿಗಮಗಳ ನೇಮಕಾತಿಗೆ ಪರೀಕ್ಷೆ ನಡೆಸಲಾಗಿತ್ತು.

ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ 386 ಹುದ್ದೆಗಳು. ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ 186 ಹುದ್ದೆಗಳು ಹಾಗೂ ಎಂಎಸ್ಐಎಲ್ ಯ 72 ಹುದ್ದೆಗಳು, ಕಿಯೋನಿಕ್ಸ್ 26 ಹುದ್ದೆಗಳು ಹಾಗೂ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ 14 ಹುದ್ದೆಗಳಿಗೆ ಸೇರಿದಂತೆ ವಿವಿಧ ಇಲಾಖೆಯ ಒಟ್ಟು 684 ಹುದ್ದೆಗಳಿಗೆ ಪರೀಕ್ಷೆ ನಡೆಸಲಾಗಿತ್ತು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ತಿಳಿಸಿದೆ.

KEA Result 2024: Revised Provisional Score List Download

ಪರಿಷ್ಕೃತ ತಾತ್ಕಾಲಿಕ ಅಂಕಪಟ್ಟಿ ಪ್ರಕಟಣೆ: ಡೌನ್‌ಲೋಡ್‌
ತಡೆಹಿಡಿಯಲಾದ ಪಟ್ಟಿ: ಡೌನ್‌ಲೋಡ್‌

ಸದರಿ ಪರಿಷ್ಕೃತ ತಾತ್ಕಾಲಿಕ ಅಂಕಪಟ್ಟಿಗೆ ಆಕ್ಷೇಪಣೆಗಳಿದ್ದಲ್ಲಿ [email protected] ಗೆ ಇ-ಮೇಲ್ ಮೂಲಕ ದಿನಾಂಕ 14-06-2024 ರ ಮಧ್ಯಾಹ್ನ 12.00 ಒಳಗಾಗಿ ಸಲ್ಲಿಸಬಹುದು ಎಂದು KEA ತಿಳಿಸಿದೆ.

Telegram Group Join Now
WhatsApp Group Join Now

Leave a Comment

error: Content is protected !!