ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಖಾಲಿ ಇದ್ದ ಚಾಲಕ ಮತ್ತು ಚಾಲಕ-ಕಂ-ನಿರ್ವಾಹಕ ಹುದ್ದೆಗಳ ನೇರ ನೇಮಕಾತಿಗೆ (2020 ರ ನೇಮಕಾತಿ) ಸಂಬಂಧಿಸಿದಂತೆ ಚಾಲನಾ ಪರೀಕ್ಷೆಯ ಕರಪತ್ರ (KKRTC Recruitment 2023 Hall Ticket) ಬಿಡುಗಡೆ ಮಾಡಲಾಗಿದೆ ಎಂದು ಕಕರಸಾ ನಿಗಮ ತಿಳಿಸಿದೆ.
ಈ ಹುದ್ದೆಗಳ ನೇರ ನೇಮಕಾತಿಗೆ ಅರ್ಜಿ ಸಲ್ಲಿಸಿ, ಮೂಲ ದಾಖಲಾತಿಗಳ ಪರಿಶೀಲನೆಯಲ್ಲಿ ಚಾಲನಾ ಪರೀಕ್ಷೆಗೆ ಅರ್ಹರಾಗಿರುವ ಅಭ್ಯರ್ಥಿಗಳಿಗೆ ಮಾತ್ರ ದಿನಾಂಕ 03-07-2023 ರಿಂದ ಚಾಲನಾ ಪರೀಕ್ಷೆಯನ್ನು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಪ್ರಾದೇಶಿಕ ತರಬೇತಿ ಕೇಂದ್ರ ಹುಮನಾಬಾದನಲ್ಲಿ ಆರಂಭಿಸಲಾಗುತ್ತಿದೆ.
KSRTC: ಡ್ರೈವರ್, ಕಂಡಕ್ಟರ್ ಹುದ್ದೆಗಳ ನೇಮಕಾತಿ 2023
ಅರ್ಹ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ದಿನಾಂಕ 27-06-2023 ರಿಂದ ನಿಗಮದ ವೆಬ್ ವಿಳಾಸ: krtcjobs.karnataka.gov.in/drivingtest ಕ್ಕೆ ಭೇಟಿ ನೀಡಿ ತಮ್ಮ ಕರಪತ್ರಗಳನ್ನು ಡೌನಲೋಡ್ ಮಾಡಿಕೊಂಡು, ಕರೆ ಪತ್ರದಲ್ಲಿ ನಮೂದಿಸಲಾದ ದಿನಾಂಕದಂದು ತಪ್ಪದೇ ಪರೀಕ್ಷಾ ಸ್ಥಳದಲ್ಲಿ ಹಾಜರಿರಲು ಸೂಚಿಸಲಾಗಿದೆ.
ಅಲ್ಲದೆ ನಿಗಮದ ಸಹಾಯವಾಣಿ ಸಂಖ್ಯೆ 6366374977 / 08472-227687 ಗಳಿಗೂ ದಿನಾಂಕ 26-06-2023 ರಿಂದ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ ಎಂದು ವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.
KKRTC Recruitment 2023 Call Letter ಪ್ರಮುಖ ಲಿಂಕ್’ಗಳು:
KKRTC Driving Test Call Letter 2023: ಡೌನ್‌ಲೋಡ್
ಅಭ್ಯರ್ಥಿಗಳು ಗಮನಕ್ಕೆ: ಡೌನ್‌ಲೋಡ್
ಅಧಿಕೃತ ವೆಬ್‌ಸೈಟ್: kkrtc.karnataka.gov.in