ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ (KSFC) ಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (KSFC Recruitment 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
SDA, FDA, ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
SBI ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ
KSFC Recruitment 2023 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ (KSFC)
ವೇತನ ಶ್ರೇಣಿ: 52,650 ರಿಂದ 97,100 ರೂ.
ಹುದ್ದೆಗಳ ಸಂಖ್ಯೆ: 41
ಉದ್ಯೋಗ ಸ್ಥಳ: ಬೆಂಗಳೂರು
ಶೈಕ್ಷಣಿಕ ಅರ್ಹತೆ:
ಉಪ ವ್ಯವಸ್ಥಾಪಕರು (ತಾಂತ್ರಿಕ) – ಪದವಿ
ಉಪ ವ್ಯವಸ್ಥಾಪಕರು (ಕಾನೂನು) – ಕಾನೂನಿನಲ್ಲಿ ಪದವಿ
ಉಪ ವ್ಯವಸ್ಥಾಪಕರು (ಹಣಕಾಸು ಮತ್ತು ಖಾತೆಗಳು) – ACA, ICWA, MBA, M.Com, CFA, PGDMA
ಹುದ್ದೆಗಳ ವಿವರ:
ಉಪ ವ್ಯವಸ್ಥಾಪಕರು (ತಾಂತ್ರಿಕ) – 11
ಉಪ ವ್ಯವಸ್ಥಾಪಕರು (ಕಾನೂನು) – 18
ಉಪ ವ್ಯವಸ್ಥಾಪಕರು (ಹಣಕಾಸು ಮತ್ತು ಖಾತೆಗಳು) – 12
ವಯೋಮಿತಿ:
ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ (KSFC) ಅಧಿಸೂಚನೆ ಪ್ರಕಾರ ಅಭ್ಯರ್ಥಿಯು ಕನಿಷ್ಠ 25 ವರ್ಷ ಹಾಗೂ ಗರಿಷ್ಠ 35 ವರ್ಷ ಮೀರಿರಬಾರದು.
ಅರ್ಜಿ ಶುಲ್ಕ
SC/ST ಅಭ್ಯರ್ಥಿಗಳಿಗೆ:1500 ರೂ.
Cat-I/Cat-2A/Cat-2B/Cat-3A & Cat-3B ಅಭ್ಯರ್ಥಿಗಳಿಗೆ: 2000 ರೂ.
ಪಾವತಿಸುವ ವಿಧಾನ: ಡಿಮ್ಯಾಂಡ್ ಡ್ರಾಫ್ಟ್
ಅರ್ಜಿ ಸಲ್ಲಿಸುವ ವಿಧಾನ:
ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ Managing Director, KSFC Head Office, KSFC Bhavana, No.1/1, Thimmaiah Road, Bengaluru-560052 ಇವರಿಗೆ 07-07-2023 ರ ಮೊದಲು ಕಳುಹಿಸಬೇಕು.
KSFC Recruitment 2023 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 14-06-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 07-07-2023
ಪ್ರಮುಖ ಲಿಂಕ್ ಗಳು:
ಅಧಿಸೂಚನೆ: ಡೌನ್‌ಲೋಡ್
ಅರ್ಜಿ ನಮೂನೆ: ಡೌನ್’ಲೋಡ್
KSFC ಅಧಿಕೃತ ವೆಬ್’ಸೈಟ್: https //ksfc.karnataka.gov.in