ಎಲ್ಲರಿಗೂ ನಮಸ್ಕಾರ, ನೀವು ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬೇಕೆ? ಹಾಗಿದ್ದರೆ ಇಲ್ಲಿದೆ ನಿಮಗೆ ಗುಡ್ ನ್ಯೂಸ್, ಕರ್ನಾಟಕ ಸರ್ಕಾರವು ಶೈಕ್ಷಣಿಕ ಪ್ರೋತ್ಸಾಹಕ್ಕಾಗಿ ವಿದ್ಯಾರ್ಥಿಗಳಿಗೆ ಶಿಷ್ಯವೇತನ (Raita Vidya Nidhi Scholarship) ವನ್ನು ನೀಡುತ್ತಿದೆ. ಅರ್ಹ ವಿದ್ಯಾರ್ಥಿಗಳು ಆನ್’ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಕೋರ್ಸ್’ಗಳಿಗೆ ಅನುಸಾರ 11,000 ರೂ. ವರೆಗೆ ಸರ್ಕಾರವು ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ. ಅರ್ಹ ವಿದ್ಯಾರ್ಥಿಗಳು ಇದರ ಲಾಭ ಪಡೆದುಕೊಳ್ಳಬಹುದು. ರೈತರ ಮಕ್ಕಳ ಹೆಚ್ಚಿನ ಹಾಗೂ ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿಸಲು ರೈತ ವಿದ್ಯಾನಿಧಿ ಶಿಷ್ಯವೇತನ (Scholarship) ಯೋಜನೆಯನ್ನು ಜಾರಿಗೆ ತರಲಾಗಿದೆ.
ರೈತರ ಮಕ್ಕಳ ಹೆಚ್ಚಿನ ಹಾಗೂ ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿಸಲು ಹೊಸ ಶಿಷ್ಯವೇತನ (Scholarship) ಯೋಜನೆಯನ್ನು ಜಾರಿಗೆ ತರುವ ಬಗ್ಗೆ ಚರ್ಚಿಸಲಾಯಿತು. ಅದರಂತೆ, ರೈತರ ಮಕ್ಕಳ ಹೆಚ್ಚಿನ ಹಾಗೂ ಉನ್ನತ ಶಿಕ್ಷಣಕ್ಕೆ ಒತ್ತುಕೊಡಲು ಮತ್ತು ಪ್ರೋತ್ಸಾಹಿಸಲು ಶಿಷ್ಯ ವೇತನ (Scholoarship) ಯೋಜನೆಯನ್ನು ಜಾರಿಗೆ ತರಲಾಗಿದೆ.
ಎಸ್.ಎಸ್.ಎಲ್.ಸಿ ಅಥವಾ 10ನೇ ತರಗತಿ ನಂತರದ ಕೋರ್ಸ್‌ಗಳಲ್ಲಿ ಕರ್ನಾಟಕ ರಾಜ್ಯದ ಯಾವುದೇ ಭಾಗದಲ್ಲಿರುವ, ಅಧಿಕೃತವಾಗಿ ನೋಂದಣಿಯಾಗಿರುವ ಶಿಕ್ಷಣ ಸಂಸ್ಥೆಗಳು/ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಕೋರ್ಸ್‌ಗಳವರೆಗೆ ಪ್ರವೇಶವನ್ನು ಪಡೆದಿರುವ ಕರ್ನಾಟಕ ರಾಜ್ಯದ ರೈತರ ಎಲ್ಲಾ ಮಕ್ಕಳ ಬ್ಯಾಂಕ್‌ಗಳ ಖಾತೆಗಳಿಗೆ ನೇರ ನಗದು ವರ್ಗಾವಣೆ (Direct Benefit Transfer – DBT) ಪದ್ಧತಿಯ ಮೂಲಕ ಶಿಷ್ಯವೇತನದ ಹಣದ ಮೊತ್ತವನ್ನು ವಾರ್ಷಿಕ ಶಿಷ್ಯವೇತನ (Scholarship) ರೂಪದಲ್ಲಿ ಒದಗಿಸಲು ಮತ್ತು ಪಾವತಿಸಲಾಗುತ್ತದೆ.
Raita Vidya Nidhi Scholarship 2024
ಕೋರ್ಸ್ ನ ಹೆಸರು / ಕೋರ್ಸ್ ನ ವಿಧಗಳು | ಹುಡುಗರು / ಪುರುಷರು | ಹುಡುಗಿಯರು / ಅನ್ಯ ಲಿಂಗದವರು |
ಪದವಿಯ ಮುಂಚೆ ಪಿ.ಯು.ಸಿ / ಐ.ಟಿ.ಐ/ ಡಿಪ್ಲೋಮಾ | 2,500 ರೂ. | 3,000 ರೂ. |
ಎಲ್ಲಾ ಬಿ.ಎ/ ಬಿ.ಎಸ್.ಸಿ/ ಬಿ.ಕಾಂ, 20; ಎಂ.ಬಿ.ಬಿ.ಎಸ್/ ಬಿ.ಇ/ ಬಿ.ಟೆಕ್ ಮತ್ತು ವೃತ್ತಿಪರ ಕೋರ್ಸ್ ಗಳನ್ನು ಹೊರತುಪಡಿಸಿ. | 5,000 ರೂ. | 5,500 ರೂ. |
ಎಲ್.ಎಲ್.ಬಿ/ ಪ್ಯಾರ ಮೆಡಿಕಲ್ / ಬಿ.ಫಾರ್ಮ್/ ನರ್ಸಿಂಗ್, ಇತ್ಯಾದಿ.. ವೃತ್ತಿಪರ ಕೋರ್ಸ್ ಗಳು | 7,500 ರೂ. | 8,000 ರೂ. |
ಎಂ.ಬಿ.ಬಿ.ಎಸ್/ ಬಿ.ಇ/ ಬಿ.ಟೆಕ್ ಮತ್ತು ಎಲ್ಲಾ ಸ್ನಾತಕೋತ್ತರ ಕೋರ್ಸ್ ಗಳು | 10,000 ರೂ. | 11,000 ರೂ. |
ಅರ್ಜಿ ಸಲ್ಲಿಸುವುದು ಹೇಗೆ: ವಿದ್ಯಾನಿಧಿ ಪಡೆಯಲು ವಿದ್ಯಾರ್ಥಿಗಳು ಪೋಷಕರ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದಲ್ಲಿ ಫೆಬ್ರವರಿ 29 ರೊಳಗೆ ಸಲ್ಲಿಸಬೇಕು. ಪೋಷಕರ ಆದಾಯವು 2.50 ಲಕ್ಷಕ್ಕಿಂತ ಕಡಿಮೆ ಇರಬೇಕು ಎಂದು ಕೃಷಿ ಇಲಾಖೆ ತಿಳಿಸಿದೆ.
ರೈತರ ಮಕ್ಕಳು ರಾಜ್ಯದ ಇತರೆ ಯಾವುದೇ (SC/ST/OBC/Minority) ಶಿಷ್ಯವೇತನವನ್ನು ಪಡೆಯಲು ಆಗದಿದ್ದಲ್ಲಿ, ರೈತರ ಮಕ್ಕಳ ಶೀಷ್ಯವೇತನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.
Raita Vidya Nidhi Scholarship 2024 Application
ಅರ್ಜಿ ಸಲ್ಲಿಕೆ ಲಿಂಕ್: Apply ಮಾಡಿ
ಅಧಿಕೃತ ವೆಬ್‌ಸೈಟ್: ssp.postmatric.karnataka.gov.in
ಇತರೆ ಮಾಹಿತಿಗಳನ್ನು ಓದಿ
Scholarship: ಶುಲ್ಕ ಮರುಪಾವತಿ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಆಹ್ವಾನ