ಎಲ್ಲರಿಗೂ ನಮಸ್ಕಾರ, ನೀವು ಕೂಡ SBI ಬ್ಯಾಂಕ್ ಗ್ರಾಹಕರಾ..? ಹಾಗಿದ್ದರೇ ನಿಮ್ಮ ಖಾತೆಗೆ ಹೊರೆಯಾಗುವ ಸುದ್ದಿ ಇದಾಗಿದೆ. ಅದು ಏನಂತೀರಾ..? ಈ ಲೇಖನದಲ್ಲಿ SBI Debit Card Charges ಸಂಪೂರ್ಣ ಮಾಹಿತಿ ನೀಡಲಾಗಿದೆ ಓದಿ.
ದೇಶದ ಅತಿ ಹೆಚ್ಚು ಗ್ರಾಹಕರನ್ನು ಹೊಂದಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ Bad News ನೀಡಿದೆ. SBI ATM Card ವಾರ್ಷಿಕ ನಿರ್ವಹಣೆ ಶುಲ್ಕವನ್ನು ಏರಿಕೆ ಮಾಡಲಾಗಿದ್ದು, SBI ಖಾತೆದಾರರಿಗೆ ಹೊರೆ ಹೊರೆಯಾಗಲಿದೆ.
ಭಾರತದ ಬಹುತೇಕರು SBI Debit Card ಹೊಂದಿದ್ದಾರೆ, ಇವತ್ತಿನ ಡಿಜಿಟಲ್ ಯುಗದಲ್ಲಿ ಎಲ್ಲರೂ PhonePe, Google Pay, PayTM ಮುಂತಾದ ಆನ್‌ಲೈನ್ ಸೇವೆಗಳನ್ನು ಬಳಕೆ ಮಾಡುತ್ತಿದ್ದು, PhonePe ಮೂಲಕ ಬ್ಯಾಂಕಿಂಗ್ ವ್ಯವಹಾರ ಮಾಡಲು ಮೊದಲಿಗೆ ಲಾಗಿನ್ ಮಾಡಲು ATM Card ಬೇಕೆ ಬೇಕು.
ಏಪ್ರೀಲ್ 1 ರಿಂದ SBI ಬ್ಯಾಂಕಿನ ವಿವಿಧ Debit Card ಗಳ ವಾರ್ಷಿಕ ನಿರ್ವಹಣೆ ಶುಲ್ಕವನ್ನು 75 ರೂ. ಏರಿಕೆ ಮಾಡಲಾಗಿದ್ದು, ಅವುಗಳ ವಿವರವನ್ನು ಈ ಕೇಳಗಿನಂತೆ ನೀಡಲಾಗಿದೆ.
SBI Debit Card Charges:
Classic, Silver, Global, Contactless ಡೆಬಿಟ್ ಕಾರ್ಡ್‌ಗಳಿಗೆ ಮೊದಲು 125 ರೂ. + GST ಶುಲ್ಕವಿತ್ತು ಆದರೆ ಇದೀಗ 75 ರೂ. ಏರಿಕೆ ಮಾಡಿ 200 ರೂ. + GST ವಾರ್ಷಿಕ ನಿರ್ವಹಣೆ ಶುಲ್ಕ ವಿಧಿಸಲಾಗುತ್ತಿದೆ.
ಅದರಂತೆ Yuva, Gold, Combo Debit Card, My Card (Image Card) ಗಳಿಗೆ 175 ರೂ. + GST ಯಿಂದ 250 ರೂ. + GST ಗೆ ಹೆಚ್ಚಿಸಲಾಗಿದೆ. Platinum Debit Card ಗೆ ಮೊದಲು 250 ರೂ. +GST ಮೊದಲಿದ್ದ ಶುಲ್ಕ, ಈಗ 325 ರೂ. + GST ಶುಲ್ಕವಿದೆ. Pride, Premium Business Debit Card ಗೆ 350 ರೂ. + GST ಯಿಂದ Rs. 425 ರೂ.+ GST ವಾರ್ಷಿಕ ನಿರ್ವಹಣೆ ಶುಲ್ಕ ಚಾರ್ಜ ಮಾಡಲಾಗುತ್ತಿದೆ.

ಇತರೆ ಮಾಹಿತಿಗಳನ್ನು ಓದಿ:
Ration Card Status Karnataka Online 2024