2019 ನೇ ಸಾಲಿನ ರಾಜ್ಯದ ವಿವಿಧ ಇಲಾಖೆಗಳಲ್ಲಿನ ದ್ವಿತೀಯ ದರ್ಜೆ ಸಹಾಯಕರು/ಕಿರಿಯ ಸಹಾಯಕರು 1323 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಮೂಲ ದಾಖಲೆಗಳ ಪರಿಶೀಲನೆಯ (SDA Document Verification Time and Date 2022) ವೇಳಾಪಟ್ಟಿಯನ್ನು KPSC ಯು ಪ್ರಕಟಿಸಿದೆ.
SDA ಉಳಿಕೆ ಮೂಲ ವೃಂದದ 1122 ಮತ್ತು ಹೈ.ಕ 201 ಹುದ್ದೆಗಳ ನೇಮಕಾತಿಯ ಮೂಲ ದಾಖಲೆಗಳ ಪರಿಶೀಲನೆಗೆ ಅರ್ಹರಾದ ಅಭ್ಯರ್ಥಿಗಳ ಹೆಸರು ಮತ್ತು ನೋಂದಣಿ ಸಂಖ್ಯೆಯನ್ನು ಒಳಗೊಂಡ ಅರ್ಹತಾ ಪಟ್ಟಿಯನ್ನು ದಿನಾಂಕ 26-08-2022 ರಂದು ಪ್ರಕಟಿಸಲಾಗಿತ್ತು.
ಸದರಿ ಹುದ್ದೆಗಳ ದಾಖಲೆಗಳ ಪರಿಶೀಲನೆಗೆ ಅರ್ಹರಾದ ಅಭ್ಯರ್ಥಿಗಳು ಆಯೋಗದ ಕೇಂದ್ರ ಕಛೇರಿ ಬೆಂಗಳೂರು ಹಾಗೂ ಪ್ರಾಂತೀಯ ವಿಭಾಗಗಳಾದ ಮೈಸೂರು, ಕಲಬುರಗಿ, ಬೆಳಗಾವಿ ಮತ್ತು ಶಿವಮೊಗ್ಗಕ್ಕೆ ಆಹ್ವಾನಿಸಲಾಗಿದೆ.
ದಿ. 19-09-2022 ರಿಂದ ದಿ 01-10-2022 ರವರೆಗೆ (ದಿ.24-09-2022 & 25-09-2022ರ ಸಾರ್ವತ್ರಿಕ ರಜಾ ದಿನಗಳನ್ನು ಹೊರತುಪಡಿಸಿ) ದ್ವಿತೀಯ ದರ್ಜೆ ಸಹಾಯಕರು ಹುದ್ದೆಗಳ ಮೂಲ ದಾಖಲೆಗಳ ಪರಿಶೀಲನೆ ನಡೆಸಲು ದಿನಾಂಕಗಳನ್ನು ನಿಗದಿಪಡಿಸಲಾಗಿದೆ ಎಂದು KPSC ಯು ಮಾಹಿತಿ ನೀಡಿದೆ.
ಮೂಲ ದಾಖಲೆ ಪರಿಶೀಲನೆಯ ದಿನಾಂಕ, ಸಮಯ ಮತ್ತು ವಿಳಾಸವನ್ನು ಒಳಗೊಂಡಂತೆ ವಿಭಾಗಾವಾರು ಅರ್ಹತಾ ಪಟ್ಟಿಯನ್ನು ಆಯೋಗದ ಅಂತರ್ಜಾಲದಲ್ಲಿ ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಲಾಗಿದೆ ಎಂದು ಕೆಪಿಎಸ್ʼಸಿ ತಿಳಿಸಿದೆ.
ದಾಖಲಾತಿ ಪರಿಶೀಲನೆ ವೇಳಾಪಟ್ಟಿಯನ್ನು ಡೌನ್‌ಲೋಡ್ ಮಾಡಿಕೊಳ್ಳಿ
SDA Document Verification Time and Date 2022
