SSC Stenographer Exam 2022 Notification: ಸ್ಟಾಫ್ ಸೆಲೆಕ್ಷನ್ ಕಮಿಷನ್ ಇತ್ತಿಚೆಗೆ ಸ್ಟೆನೋಗ್ರಾಫರ್ ಗ್ರೇಡ್ ಸಿ, ಡಿ ಹುದ್ದೆಗಳ ನೇಮಕಾತಿಗೆ 2022ನೇ ಸಾಲಿನ ಪರೀಕ್ಷಾ ಅಧಿಸೂಚನೆಯನ್ನು ಪ್ರಕಟಿಸಿದೆ.
ಸಿಬ್ಬಂದಿ ನೇಮಕಾತಿ ಆಯೋಗದ ಸ್ಟೆನೋಗ್ರಾಫರ್ ಗ್ರೇಡ್ ಸಿ ಮತ್ತು ಡಿ ಹುದ್ದೆಗಳನ್ನು ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು, ಸಚಿವಾಲಯಗಳು ಮತ್ತು ಸಂಯೋಜಿತ ವಿವಿಧ ಸಂಸ್ಥೆಗಳಲ್ಲಿ ಭರ್ತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದು, ಸೆಪ್ಟೆಂಬರ್ 05, 2022 ರವರೆಗೆ ಆನ್‌ಲೈನ್ ರಿಜಿಸ್ಟ್ರೇಷನ್‌ಗೆ ಅವಕಾಶ ನೀಡಲಾಗಿದೆ. ದಯವಿಟ್ಟು ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಓದಿ.
ವಿದ್ಯಾರ್ಹತೆ:
SSC ಸ್ಟೆನೋಗ್ರಾಫರ್ ಗ್ರೇಡ್ ಸಿ ಮತ್ತು ಡಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ದ್ವಿತೀಯ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
ವಯೋಮಿತಿ ಅರ್ಹತೆಗಳು:
ಸ್ಟೆನೋಗ್ರಾಫರ್ ಗ್ರೂಪ್ ‘ಸಿ’ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಕನಿಷ್ಠ 18 ವರ್ಷ, ಗರಿಷ್ಠ 30 ವರ್ಷ ವಯೋಮಿತಿಯನ್ನು ನಿಗದಿ ಮಾಡಲಾಗಿದೆ.
ಸ್ಟೆನೋಗ್ರಾಫರ್ ಗ್ರೂಪ್ ‘ಡಿ’ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಕನಿಷ್ಠ 18 ವರ್ಷ, ಗರಿಷ್ಠ 27 ವರ್ಷ ವಯೋಮಿತಿಯನ್ನು ನಿಗದಿ ಮಾಡಲಾಗಿದೆ.
ವಯೋಮಿತಿ ಸಡಿಲಿಕೆ:
- ಪ.ಜಾ, ಪ.ಪಂ: 5 ವರ್ಷ
- ಒಬಿಸಿ: 3 ವರ್ಷ
- ವಿಕಲಚೇತನ (Unreserved): 10 ವರ್ಷ
- ವಿಕಲಚೇತನ (ಪ.ಜಾ, ಪ.ಪಂ): 13 ವರ್ಷ
- ವಿಕಲಚೇತನ (ಒಬಿಸಿ): 15 ವರ್ಷ
ಅರ್ಜಿ ಶುಲ್ಕ:
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ರೂ.100 ಇರುತ್ತದೆ. ಇತರೆ ವರ್ಗದ ಅಭ್ಯರ್ಥಿಗಳಿಗೆ ಅಪ್ಲಿಕೇಶನ್ ಫೀ ವಿನಾಯಿತಿ ನೀಡಲಾಗಿದೆ. ಅರ್ಜಿ ಶುಲ್ಕವನ್ನು ಆನ್‌ಲೈನ್ ಅಥವಾ ಚಲನ ಮೂಲಕವು ಪಾವತಿಸಬುಹುದು.
ನೇಮಕಾತಿಯ ಪ್ರಮುಖ ದಿನಾಂಕಗಳು
- ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭಿಕ ದಿನಾಂಕ : 20-08-2022
- ಆನ್‌ಲೈನ್ ಅರ್ಜಿ ಸಲ್ಲಿಕೆಯ ಕಡೆಯ ದಿನಾಂಕ : 05-09-2022 ರ ರಾತ್ರಿ 11 ಗಂಟೆವರೆಗೆ.
- ಆನ್‌ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಲು ಕೊನೆ ದಿನಾಂಕ : 06-09-2022 ರ ರಾತ್ರಿ 11 ಗಂಟೆವರೆಗೆ.
- ಅರ್ಜಿ ಶುಲ್ಕ ಆಫ್‌ಲೈನ್ ಚಲನ್ ಜೆನೆರೇಟ್ ಮಾಡಲು ಕೊನೆ ದಿನಾಂಕ : 05-09-2022 ರ ರಾತ್ರಿ 11 ಗಂಟೆವರೆಗೆ.
- ಚಲನ್ ಮೂಲಕ ಅರ್ಜಿ ಶುಲ್ಕ ಪಾವತಿಗೆ ಕೊನೆ ದಿನಾಂಕ : 06-09-2022
- ಅರ್ಜಿ, ಅರ್ಜಿ ಶುಲ್ಕ ಮಾಹಿತಿ ತಿದ್ದುಪಡಿಗೆ ವಿಂಡೊ ಓಪನ್ : 07-09-2022
- ಕಂಪ್ಯೂಟರ್ ಆಧಾರಿತ ಪರೀಕ್ಷೆ ದಿನಾಂಕ : ನವೆಂಬರ್ 2022
Stenographer Exam 2022 Notification ಪ್ರಮುಖ ಲಿಂಕ್ʼಗಳು
ಅಧಿಕೃತ ಅಧಿಸೂಚನೆ | Download |
ಆನ್‌ಲೈನ್ ಅರ್ಜಿ | Apply ಮಾಡಿ |
ಅಧಿಕೃತ ವೆಬ್ʼಸೈಟ್ | ssc.nic.in |