SSLC ಫಲಿತಾಂಶ 2024 ಪ್ರಕಟಣೆ ದಿನಾಂಕದ ಮಹತ್ವದ ಮಾಹಿತಿ | SSLC Result‌ 2024 Date In Karnataka Online Link

Telegram Group Join Now
WhatsApp Group Join Now

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ರಿಸಲ್ಟ್ ಗಾಗಿ ಕಾಯುತ್ತಿರುವ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ. SSLC Result‌ 2024 Date ಬಗ್ಗೆ Latest Update ಈ ಲೇಖನದಲ್ಲಿ ನೀಡಲಾಗಿದೆ.

ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ 8 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಹಾಜರಾಗಿದ್ದರು, ಮೇ 8 ರಂದು ಪರೀಕ್ಷೆಯ ಫಲಿತಾಂಶ ಪ್ರಕಟವಾಗುವ ನಿರೀಕ್ಷೆ ಇತ್ತು, ಆದರೆ ತಾಂತ್ರಿಕ ಕಾರಣದಿಂದ ರಿಸಲ್ಟ್ ಬಿಡುಗಡೆ ಮುಂದೂಡಲಾಗಿದೆ ಎಂದು KSEEB ಮೂಲಗಳಿಂದ ತಿಳಿದು ಬಂದಿದೆ.

SSLC Result‌ 2024 Date Latest News:

ಎಸ್‌ಎಸ್‌ಎಲ್‌ಸಿ ಫಲಿತಾಂಶವು ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ಬಹಳ ಮಹತ್ವದ್ದು, ಉನ್ನತ ಶಿಕ್ಷಣ ಪಡೆಯಲು ಈ ಫಲಿತಾಂಶ ಮೆಟ್ಟಿಲಾಗುತ್ತದೆ. ಯಾವ ಕೋರ್ಸ್‌ಗಳಿಗೆ ಸೇರಬೇಕು ಎಂಬೆಲ್ಲ ನಿರ್ಧಾರ ಈ ಅಂಕಗಳ ಮೂಲಕ ನಿರ್ಧಾರವಾಗುತ್ತವೆ. ಎಸ್‌ಎಸ್‌ಎಲ್‌ಸಿ ರಿಸಲ್ಟ್ ಗಾಗಿ ರಾಜ್ಯದಲ್ಲಿ 8 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಕಾಯುತ್ತಿದ್ದು, ಯಾವಾಗ ತಮ್ಮ ಅಂಕಗಳನ್ನು ನೋಡಬಹುದು ಎಂಬ ಕುತೂಹಲವಿದೆ.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು ತಾಂತ್ರಿಕ ಕಾರ್ಯಗಳನ್ನು ಮೇ 8 ರ ರಾತ್ರಿ ಒಳಗಾಗಿ ಪೂರ್ಣಗೊಳಿಸಿದ್ದಲ್ಲಿ ಮೇ 9 ರಂದು ಫಲಿತಾಂಶವನ್ನು ಪ್ರಕಟಿಸಬಹುದು. ಒಂದು ವೇಳೆ ತಾಂತ್ರಿಕ ಕೆಲಸ ಮುಗಿಯದಿದ್ದಲ್ಲಿ SSLC Result‌ 2024 ಅನ್ನು ಮೇ 10 ರಂದು ಬಿಡುಗಡೆಯಾಗಬಹುದು ಮಂಡಳಿಯ ಮೂಲಗಳಿಂದ ತಿಳಿದು ಬಂದಿದೆ. ಹಾಗಾಗಿ ವಿದ್ಯಾರ್ಥಿಗಳು ಇನ್ನೇರಡು ದಿನ ಫಲಿತಾಂಶಕ್ಕಾಗಿ ಕಾಯಬೇಕಾಗಿದೆ.

2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಮಾ.25ರಿಂದ ಏ.6ರ ವರೆಗೆ ನಡೆಸಿರುವುದು ನಿಮಗೆಲ್ಲ ಗೊತ್ತೇ ಇದೆ. ಒಟ್ಟು 2750 ಪರೀಕ್ಷಾ ಕೇಂದ್ರಗಳಲ್ಲಿ 8.69 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರು. ಇದರಲ್ಲಿ 4.41 ಲಕ್ಷ ವಿದ್ಯಾರ್ಥಿಗಳು ಹಾಗೂ 4.28 ಲಕ್ಷ ವಿದ್ಯಾರ್ಥಿನಿಯರು ಇದ್ದಾರೆ.

SSLC ಫಲಿತಾಂಶ 2024 ನಾಳೆ ಪ್ರಕಟ, ಹೀಗೆ ಚೆಕ್‌ ಮಾಡಿ

SSLC Result‌ 2024 Date ಪರಿಷ್ಕೃತ ದಿನಾಂಕ:
ಎಸ್‌ಎಸ್‌ಎಲ್‌ಸಿ ಫಲಿತಾಂಶ ದಿನಾಂಕ: 09-05-2024
ಎಸ್‌ಎಸ್‌ಎಲ್‌ಸಿ ಫಲಿತಾಂಶ ಸಮಯ: ಬೆಳಿಗ್ಗೆ 10.30

Karnataka SSLC Result 2024 Online Link:

ಫಲಿತಾಂಶ ವೆಬ್‌ಸೈಟ್:‌ karresults.nic.in
ಇಲಾಖೆಯ ಅಧಿಕೃತ ವೆಬ್‌ಸೈಟ್:‌ kseeb.kar.nic.in

ಇತರೆ ಮಾಹಿತಿಗಳನ್ನು ಓದಿ:

ಲೇಬರ್‌ ಕಾರ್ಡ್‌ ವಿದ್ಯಾರ್ಥಿವೇತನ: ಡೈರೆಕ್ಟ್‌ ಬ್ಯಾಂಕ್‌ ಖಾತೆಗೆ ಹಣ ಜಮಾ

ದ್ವೀತಿಯ ಪಿಯುಸಿ ಪಾಸಾದವರಿಗೆ 20,000 ರೂಪಾಯಿ ಪ್ರೋತ್ಸಾಹಧನ

Telegram Group Join Now
WhatsApp Group Join Now

Leave a Comment

error: Content is protected !!