Tumakuru Anganwadi Worker and Helper Recruitment 2022: ತುಮಕೂರು ಜಿಲ್ಲೆಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಜಿಲ್ಲೆಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ-17, ಮಿನಿ ಅಂಗನವಾಡಿ ಕಾರ್ಯಕರ್ತರು-8 ಹಾಗೂ ಅಂಗನವಾಡಿ ಸಹಾಯಕಿ-116 ಸೇರಿದಂತೆ ಒಟ್ಟು 141 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಆನ್ಲೈನ್ (Online) ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಸದರಿ ಹುದ್ದೆಗಳಿಗೆ ಕಡೆಯ ದಿನಾಂಕ ಸೆಪ್ಟೆಂಬರ್ 27 ರ ಒಳಗಾಗಿ ಆನ್ಲೈನ್ ಅರ್ಜಿ ಸಲ್ಲಿಸಬಹುದು.
ತುಮಕೂರು ಜಿಲ್ಲಾ ಅಂಗನವಾಡಿ ನೇಮಕಾತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಆಯ್ಕೆ ವಿಧಾನ ಹಾಗೂ ಇತರೆ ಮಾಹಿತಿಗಳನ್ನು ಈ ಕೇಳಗೆ ನೀಡಲಾಗಿದೆ.
- ಹುದ್ದೆಗಳ ಹೆಸರು – ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿ
- ಇಲಾಖೆಯ ಹೆಸರು – ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
- ಒಟ್ಟು ಹುದ್ದೆಗಳ ಸಂಖ್ಯೆ – 141
Tumakuru Anganwadi Worker and Helper Recruitment 2022
ಹುದ್ದೆ ಹೆಸರು | ಹುದ್ದೆಗಳ ಸಂಖ್ಯೆ |
ಅಂಗನವಾಡಿ ಕಾರ್ಯಕರ್ತೆ | 17 |
ಮಿನಿ ಅಂಗನವಾಡಿ ಕಾರ್ಯಕರ್ತರು | 8 |
ಅಂಗನವಾಡಿ ಸಹಾಯಕಿ | 116 |
ವಯಸ್ಸಿನ ಅರ್ಹತೆ: ತುಮಕೂರು ಜಿಲ್ಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೇಮಕಾತಿ ಅಧಿಸೂಚನೆಯ ನಿಯಮಾವಳಿಗಳಂತೆ, ಅಭ್ಯರ್ಥಿಯು ಕನಿಷ್ಠ 18 ವರ್ಷ ಪೂರ್ಣಗೊಂಡಿರಬೇಕು ಮತ್ತು ಗರಿಷ್ಠ 35 ವರ್ಷಗಳನ್ನು ಮೀರಿರಬಾರದು.
ವಯೋಮಿತಿ ಸಡಿಲಿಕೆ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತುಮಕೂರು ನೇಮಕಾತಿ ಅಧಿಸೂಚನೆಯ ಪ್ರಕಾರ, ವಿಕಲಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ವಿನಾಯತಿ ನೀಡಲಾಗಿದೆ.
ಆಯ್ಕೆ ಪ್ರಕ್ರಿಯೆ: ಮೆರಿಟ್ ಮತ್ತು ಸಂದರ್ಶನ
ಅರ್ಜಿ ಶುಲ್ಕ: ಅರ್ಜಿ ಶುಲ್ಕ ಇರುವುದಿಲ್ಲ
ನೇಮಕಾತಿಗೆ ಸಂಬಂಧಿಸಿದ ಪ್ರಮುಖ ದಿನಾಂಕಗಳು
ವಿವರಣೆ | ದಿನಾಂಕ |
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ | ದಿ:29-08-2022 ಬೆಳಿಗ್ಗೆ 10.00 ಗಂಟೆಯಿಂದ |
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | ದಿ:27-09-2022 ಸಂಜೆ 5.30 ಗಂಟೆಯವರೆಗೆ |
ಆಯ್ಕೆ ಸಮಿತಿ ಸದಸ್ಯರು ಹಾಗೂ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳಿಂದ ಎನ್.ಐ.ಸಿ ಯಲ್ಲಿ ಸ್ವೀಕರಿಸಲಾದ ಅರ್ಜಿಗಳ ಪರಿಶೀಲನೆ | ದಿ:28-09-2022 ರಿಂದ ದಿ:07-10-2022 ರವರೆಗೆ |
ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಆಯ್ಕೆ ಸಮಿತಿಯಿಂದ ಅನುಮೋದನೆ ಪಡೆಯುವುದು. | ದಿ:10-10-2022 |
ಆಯ್ಕೆಯಾದ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಣೆ ಹಾಗೂ ಸಾರ್ವಜನಿಕ ಆಕ್ಷೇಪಣೆ ಸಲ್ಲಿಸುವಿಕೆ | ದಿ:11-10-2022 ರಿಂದ ದಿ:18-10-2022 |
ಅವಕಾಶ ಆಕ್ಷೇಪಣೆ ಬಂದ ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆ | ದಿ:19-10-2022 |
ದಿನ ಪರಿಶೀಲನೆ ನಂತರ ಆಯ್ಕೆ ಸಮಿತಿಯ ಸಭೆ ನಡೆಸಿ ಅಂತಿಮ ಪಟ್ಟಿಗೆ ಅನುಮೋದನೆ ಪಡೆಯುವುದು. | ದಿ:20-10-2022 |
ಆನ್ಲೈನ್ ಅರ್ಜಿಯೊಂದಿಗೆ ಲಗತ್ತಿಸಬೇಕಾದ ದಾಖಲಾತಿಗಳು
- ಅರ್ಜಿ ನಿಗದಿತ ನಮೂನೆಯಲ್ಲಿ (ಆನ್‌ಲೈನ್)
- ದೃಢೀಕೃತ ಜನನ ಪ್ರಮಾಣ ಪತ್ರ/ಜನ್ಮದಿನಾಂಕ ಇರುವ ಎಸ್.ಎಸ್.ಎಲ್.ಸಿ. ಅಂಕಪಟ್ಟಿ/ಜನ್ಮ ದಿನಾಂಕ ಇರುವ ಶಾಲಾ ಪ್ರಮಾಣ ಪತ್ರ.
- ನಿಗದಿತ ವಿದ್ಯಾರ್ಹತೆಯ ದೃಢೀಕೃತ ಅಂಕಪಟ್ಟಿ,
- ಅಭ್ಯರ್ಥಿಯು ಅದೇ ಗ್ರಾಮದಲ್ಲಿ (ನಗರ ಪ್ರದೇಶವಾಗಿದ್ದಲ್ಲಿ ಅದೇ ವಾರ್ಡ್‌ನಲ್ಲಿ) ವಾಸ್ತವ್ಯವಿರುವ ಬಗ್ಗೆ ತಹಶೀಲ್ದಾರರು/ಉಪ ತಹಶೀಲ್ದಾರರಿಂದ ಪಡೆದ ಮೂರು (03) ವರ್ಷದೊಳಗಿನ ವಾಸಸ್ಥಳ ದೃಢೀಕರಣ ಪತ್ರ,
- ಅಭ್ಯರ್ಥಿಗಳ ಜಾತಿ ಪ್ರಮಾಣ ಪತ್ರ.(ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮಾತ್ರ)
- ವಿಧವೆಯಾಗಿದ್ದಲ್ಲಿ ಪತಿಯ ಮರಣ ಪ್ರಮಾಣ ಪತ್ರ (ವಿಧವಾ ವೇತನದ ದೃಢೀಕರಣವನ್ನು ಪರಿಗಣಿಸುವುದಿಲ್ಲ)
- ಅಭ್ಯರ್ಥಿಯು ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಯಾಗಿದ್ದಲ್ಲಿ ಉಪವಿಭಾಗಾಧಿಕಾರಿಗಳಿಂದ ಪಡೆದ ಪ್ರಮಾಣ ಪತ್ರ,
- ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಅರ್ಜಿ ಸಲ್ಲಿಸುವವರು ಅಂಗವಿಕಲರಾಗಿದ್ದಲ್ಲಿ ದೈಹಿಕ ಅಂಗವೈಕಲ್ಯತೆ ಶೇ.60% ಮೀರದಂತೆ ಇರುವವರು ಅರ್ಜಿ ಸಲ್ಲಿಸಬಹುದು. ಅಂಗವಿಕಲತೆ ಪ್ರಮಾಣ ಪತ್ರ (ಅಂಗವಿಕಲ ವೇತನದ ದೃಢೀಕರಣವನ್ನು ಪರಿಗಣಿಸುವುದಿಲ್ಲ)
- ಅಂಗವಿಕಲ ಅಭ್ಯರ್ಥಿಗಳು ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷದಿಂದ ಗರಿಷ್ಟ 45 ವರ್ಷದ ವಯೋಮಿತಿಯೊಳಗೆ ಇರತಕ್ಕದ್ದು.
- ಅಭ್ಯರ್ಥಿಯು ವಿಚ್ಛೇದಿತರಾಗಿದ್ದಲ್ಲಿ, ವಿಚ್ಚೇದನಾ ಪ್ರಮಾಣ ಪತ್ರ (ನ್ಯಾಯಾಲಯದಿಂದ ಪಡೆದಿರಬೇಕು)
- ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ ನಡೆಸಲ್ಪಟ್ಟ ಮಾಜಿ ದೇವದಾಸಿಯರ ಸಮೀಕ್ಷೆಯ ಪಟ್ಟಿಯಲ್ಲಿರುವ ಮಾಜಿ ದೇವದಾಸಿಯರ ಮಕ್ಕಳು ಅರ್ಜಿ ಸಲ್ಲಿಸಿದಲ್ಲಿ ಈ ಬಗ್ಗೆ ಮಹಿಳಾ ಅಭಿವೃದ್ಧಿ ನಿಗಮದ ಅಧಿಕಾರಿಗಳಿಂದ ಪಡೆದ ಪ್ರಮಾಣ ಪತ್ರ.
- ಅಭ್ಯರ್ಥಿಯು ಪರಿತ್ಯಕ್ಕೆಯಾಗಿದ್ದಲ್ಲಿ, ಪರಿತ್ಯಕ್ಕೆ ಎಂಬ ಬಗ್ಗೆ ಗ್ರಾಮ ಪಂಚಾಯತ್‌ನಿಂದ ಪಡೆದ ಪ್ರಮಾಣ ಪತ್ರ,
- ಅಭ್ಯರ್ಥಿಯ ಇಲಾಖೆಯ ಸುಧಾರಣಾ ಸಂಸ್ಥೆ / ರಾಜ್ಯ ಮಹಿಳಾ ನಿಲಯಗಳ ನಿವಾಸಿಯಾಗಿದ್ದಲ್ಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿಂದ ಪಡೆದ ಪ್ರಮಾಣ ಪತ್ರ, ವಾಸಸ್ಥಳ ದೃಢೀಕರಣ ಪತ್ರ ಕಡ್ಡಾಯ ಇರುವುದಿಲ್ಲ.
- ಅಭ್ಯರ್ಥಿಯು ಯೋಜನಾ ನಿರಾಶ್ರಿತರಾಗಿದ್ದಲ್ಲಿ ತಹಶೀಲ್ದಾರರಿಂದ ಪಡೆದ ಪ್ರಮಾಣ ಪತ್ರ.
ನೇಮಕಾತಿಗೆ ಸಂಬಂಧಿಸಿದ ಪ್ರಮುಖ ಲಿಂಕ್ಗಳು
ಅಧಿಕೃತ ಅಧಿಸೂಚನೆ | Download ಮಾಡಿ |
ಅಧಿಕೃತ ವೆಬ್‌ಸೈಟ್ | Apply ಮಾಡಿ |