ಎಲ್ಲರಿಗೂ ನಮಸ್ಕಾರ, ಕರ್ನಾಟಕದಲ್ಲಿ ಈಗಾಗಲೇ ಏಪ್ರಿಲ್ 26 ರಂದು ಮೊದಲ ಹಂತದ ಚುನಾವಣೆ ಮುಗಿದಿದೆ ಹಾಗೂ ಮೇ 7 ರಂದು 2ನೇ ಹಂತದ ಲೋಕಸಭಾ ಚುನಾವಣೆ ನಡೆಯಲಿದ್ದು, ಅದಕ್ಕಾಗಿ ನಿಮ್ಮ ಹೆಸರು ಮತದಾರ ಪಟ್ಟಿಯಲ್ಲಿ ಇದೆಯಾ ಎಂಬುದನ್ನು ತಿಳಿಯುವುದು ಉತ್ತಮ. ಈ ಲೇಖನದಲ್ಲಿ Voter List Download ಮಾಡುವುದು ಹೇಗೆ ಎಂದು ತಿಳಿಸಲಾಗಿದೆ ಓದಿ.
ಹೌದು ಸ್ನೇಹಿತರೇ, ನಿಮ್ಮ ಹತ್ತಿರ Voter ID Card ಇದ್ದರೂ ಕೆಲವೊಮ್ಮೆ ಯಾವುದೋ ತಪ್ಪಿನಿಂದ Voter List ನಿಮ್ಮ ಹೆಸರು ಇರುವುದಿಲ್ಲ. ಅದನ್ನು ತಿಳಿಯಲು ನಿಮ್ಮ ಗ್ರಾಮದ Voter List Download ಮಾಡಿಕೊಂಡು ಖಚಿತ ಪಡಿಸಿಕೊಳ್ಳುವುದು ಒಳ್ಳೆಯದು.
Karnataka Voter List Download 2024:
ಮತದಾರ ಪಟ್ಟಿಯನ್ನು ಯಾವ ರೀತಿ ಡೌನ್‌ಲೋಡ್ ಮಾಡುವುದು ಎಂಬುದನ್ನು ಇಲ್ಲಿ ಸುಲಭ ವಿಧಾನದ ಮೂಲಕ ತಿಳಿಸಲಾಗಿದೆ. ಅದನ್ನು ಅನುಸಲಿರಿಸಿ Voter List ಪಡೆಯಬಹುದು.
- Step-1: ಮೊದಲಿಗೆ ಕೇಳಗೆ ನೀಡಲಾಗಿರುವ VOTERS’ SERVICE PORTAL ಲಿಂಕ್ ಮೇಲೆ ಕ್ಲಿಕ್ ಮಾಡಿ.
- Step-2: ನಿಮ್ಮ ಜಿಲ್ಲೆ, ನಿಮ್ಮ ವಿಧಾನಸಭಾ ಕ್ಷೇತ್ರವನ್ನು ಹಾಗೂ ಭಾಷೆಯನ್ನು ಆಯ್ಕೆ ಮಾಡಿ ನಂತರ Captcha ಭರ್ತಿ ಮಾಡಿ.
- Step-3: ನಂತರ ಅಲ್ಲಿ ನಿಮ್ಮ ವಿಧಾನಸಭಾ ಕ್ಷೇತ್ರದ ಮತದಾರ ಪಟ್ಟಿಗಳು ಲಭ್ಯವಾಗುತ್ತವೆ. ನಿಮ್ಮ ಮತಗಟ್ಟೆಯ ಸಂಖ್ಯೆ ಮತ್ತು ಹೆಸರು ಗುರುತಿಸಿ ಮತದಾರ ಪಟ್ಟಿ ಡೌನ್‌ಲೋಡ್ ಮಾಡಿಕೊಳ್ಳಬಹುದು.
- Step-4: ನೀವು ಡೌನ್‌ಲೋಡ್ ಮಾಡಿಕೊಂಡ Voter List ನಲ್ಲಿ ನಿಮ್ಮ ಹೆಸರು ಇದೆಯಾ ಎಂಬುದನ್ನು ಖಚಿತಪಡಿಸಿಕೊಳ್ಳಿ.
Voter List 2024 Link:
ಮತದಾರರ ಸೇವಾ ಪೋರ್ಟಲ್ ಲಿಂಕ್: ಡೌನ್‌ಲೋಡ್
ಅಧಿಕೃತ ವೆಬ್‌ಸೈಟ್ ಲಿಂಕ್: voters.eci.gov.in
ಇತರೆ ಮಾಹಿತಿಗಳನ್ನು ಓದಿ:
ಗೃಹಲಕ್ಷ್ಮಿ DBT Status Check ಮಾಡಿ, 2000 ರೂ. ಬಂತಾ ನೋಡಿ