ಬೆಳೆ ಪರಿಹಾರ ಹಣ ಜಮಾ, ನಿಮ್ಮ ಖಾತೆಗೆ ಬಂತಾ ನೋಡಿ | Bele Parihara Karnataka Status Check 2023-24 Online

ಎಲ್ಲರಿಗೂ ನಮಸ್ಕಾರ, ಸರ್ಕಾರದಿಂದ ಬಿಡುಗಡೆ ಮಾಡಲಾಗಿರುವ ರೈತರಿಗೆ ನೀಡಲಾಗಿರುವ ಸಹಾಯಧನದ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಿದ್ದೆವೆ. ನಿಮ್ಮ ಬ್ಯಾಂಕ್‌ ಖಾತೆಗೆ Bele Parihara Karnataka Status 2023-24 ಹಣ ಜಮಾ ಆಗಿದೆಯೇ ಎಂಬುದನ್ನು ನೋಡುವ ಸುಲಭ ವಿಧಾನವನ್ನು ತಿಳಿಸಲಾಗಿದೆ ಓದಿ.

ಬರಗಾಲದ ಕಾರಣದಿಂದ ರೈತರು ಕಂಗಾಲಾಗಿದ್ದು, ಅದಕ್ಕಾಗಿ ರಾಜ್ಯ ಸರ್ಕಾರ ರೈತರಿಗೆ ಬೆಳೆ ಪರಿಹಾರ (Bele Parihara Karnataka 2023-24) ಘೋಷಣೆ ಮಾಡಿದ್ದು, ಅದನ್ನು ರೈತರ ಖಾತೆಗಳಿಗೆ ವರ್ಗಾವಣೆ ಮಾಡಲಾಗುತ್ತಿದೆ.

ಕೇಂದ್ರ ಸರ್ಕಾರದಿಂದ ಸೂಕ್ತ ಸ್ಪಂದನೆ ಸಿಗದ ಕಾರಣ ರೈತರಿಗೆ ಪರಿಹಾರ ನೀಡಲು ರಾಜ್ಯ ಸರ್ಕಾರದಿಂದ ತುರ್ತು ಕ್ರಮ ಕೈಗೊಳ್ಳಲಾಗಿದೆ. ಮೊದಲ ಕಂತಿನಲ್ಲಿ ಅರ್ಹ ಫಲಾನುಭವಿ ರೈತರಿಗೆ 2 ಸಾವಿರ ರೂ.ವರೆಗೆ ಬೆಳೆ ಪರಿಹಾರ ವರ್ಗಾವಣೆ ಮಾಡುವುದಾಗಿ ಸಿಎಂ ಸಿದ್ದರಾಮಯ್ಯನವರು ತಿಳಿಸಿದ್ದರು.

Bele Parihara Karnataka Status Check:

ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಬೆಳೆ ಪರಿಹಾರ ಪೇಮೆಂಟ್ ಸ್ಟೆಟಸ್‌ ಚೆಕ್‌ ಮಾಡುವ ವಿಧಾನವನ್ನು ಈ ಕೇಳಗೆ ನೀಡಲಾಗಿದ್ದು, ನಿಮ್ಮ ಬ್ಯಾಂಕ್‌ ಖಾತೆಗೆ ಜಮಾ ಆಗಿದೆಯೇ ಎಂಬುದನ್ನು ತಿಳಿಯಿರಿ.

Step-1: ಮೊದಲಿಗೆ ಕೇಳಗೆ ನೀಡಲಾಗಿರುವ ಲಿಂಕ್‌ ಮೂಲಕ DBT Karnataka ಅಧಿಕೃತ App ಡೌನ್‌ಲೋಡ್‌ ಮಾಡಿಕೊಳ್ಳಿ.

Bele Parihara Karnataka Status Check Step- (1)

Step-2: DBT Karnataka App ಓಪನ್‌ ಮಾಡಿದ ನಂತರ ಅಲ್ಲಿ Enter Aadhaar Number ಎಂದಿರುವಲ್ಲಿ ಫಲಾನುಭವಿಯ ಆಧಾರ ಸಂಖ್ಯೆಯನ್ನು ಎಂಟರ್‌ ಮಾಡಿ. GET OTP ಬಟನ್ ಮೇಲೆ ಕ್ಲಿಕ್‌ ಮಾಡಿ.

Bele Parihara Karnataka Status Check Step- (3)

Step-3: ಫಲಾನುಭವಿಯ ಆಧಾರ‌ ಕಾರ್ಡ್‌ಗೆ ಲಿಂಕ್‌ ಇರುವ ಮೊಬೈಲ್‌ ನಂಬರ್‌ಗೆ OTP ಬರುತ್ತದೆ. OTP ಎಂಟರ್‌ ಮಾಡಿ. Verify OTP ಬಟನ್‌ ಮೇಲೆ ಕ್ಲಿಕ್‌ ಮಾಡಿ.

Bele Parihara Karnataka Status Check Step- (4)

Step-4: ಫಲಾನುಭವಿಯ ವಯಕ್ತಿಕ ವಿವರ ಕಾಣುತ್ತದೆ. ಅಲ್ಲಿ ಮೊಬೈಲ್ ನಂಬರ್‌ ಎಂಟರ್‌ ಮಾಡಲು ತಿಳಿಸಲಾಗಿರುತ್ತದೆ. ಆಧಾರಗೆ ಲಿಂಕ್‌ ಇರುವ ಮೊಬೈಲ್‌ ನಂಬರ್‌ ನಮೂದಿಸಿ. OK ಬಟನ್‌ ಮೇಲೆ ಕ್ಲಿಕ್‌ ಮಾಡಿ.

Bele Parihara Karnataka Status Check Step- (5)

Step-5: ತದನಂತರ Create mPIN ಎಂದು ತಿಳಿಸಲಾಗುತ್ತದೆ. ಅಲ್ಲಿ ನಿಮ್ಮ ನೆನಪಿನಲ್ಲಿ ಉಳಿಯುವಂತಹ ನಾಲ್ಕು ಅಂಕಿಗಳ mPIN ಎಂಟರ್‌ ಮಾಡಿ. Submit ಬಟನ್‌ ಮೇಲೆ ಕ್ಲಿಕ್‌ ಮಾಡಿ.

Bele Parihara Karnataka Status Check Step- (6)

Step-6: ನಂತರ ಅಲ್ಲಿ Select Beneficiary ಎಂದು ಬರುತ್ತದೆ. ನೀವು Add ಮಾಡಿರುವ ಫಲಾನುಭವಿಯನ್ನು ಆಯ್ಕೆ ಮಾಡಿ.

Bele Parihara Karnataka Status Check Step- (7)

Step-7: ಫಲಾನುಭವಿಯನ್ನು ಆಯ್ಕೆ ಮಾಡಿದ ನಂತರ mPIN ಅನ್ನು ಎಂಟರ್‌ ಮಾಡಿ. LOGIN ಬಟನ್‌ ಮೇಲೆ ಕ್ಲಿಕ್‌ ಮಾಡಿ.

Bele Parihara Karnataka Status Check Step- (9)

Step-8: ನಂತರ Payment Status ಎಂಬ ಆಯ್ಕೆ ಮೇಲೆ ಕ್ಲಿಕ್‌ ಮಾಡಿ.

Bele Parihara Karnataka Status Check Step- (10)

Step-9: ನಿಮಗೆ ದೊರೆತಿರುವ ಸರ್ಕಾರಿ ಯೋಜನೆಗಳ ಮಾಹಿತಿ ಅಲ್ಲಿರುತ್ತದೆ. ಈಗ ನೀವು Input Subsidy For Crop Loss ಎಂಬ ಆಯ್ಕೆ ಕಾಣುತ್ತದೆ ಅದರ ಮೇಲೆ ಕ್ಲಿಕ್‌ ಮಾಡಿ.

Bele Parihara Karnataka Status Check 2023-24

Step-10: ನಿಮ್ಮ ಬ್ಯಾಂಕ್‌ ಖಾತೆಗೆ ರಾಜ್ಯ ಸರ್ಕಾರದಿಂದ ಬೆಳೆ ಹಾನಿಯ 2000 ರೂ. ಜಮಾ ಆಗಿರುವ ಮಾಹಿತಿ ಲಭ್ಯವಾಗುತ್ತದೆ. ನಿಮ್ಮ ಯಾವ ಬ್ಯಾಂಕ್ ಖಾತೆಗೆ‌, ಯಾವ ದಿನಾಂಕದಂದು ಹಣ ವರ್ಗಾವಣೆ ಆಗಿರುತ್ತದೆ ಎಂಬ ವಿವರಗಳನ್ನು ನೀವು ಪರಿಶೀಲನೆ ಮಾಡಿಕೊಳ್ಳಬಹುದು.

Bele Parihara Karnataka Status Check 2023-24 Online

Bele Parihara Karnataka Status Check ಪ್ರಮುಖ ಲಿಂಕ್‌ಗಳು:
DBT Karnataka App Link:‌ Download ಮಾಡಿ

ಉಚಿತ ಹೊಲಿಗೆ ಯಂತ್ರ ಯೋಜನೆ 2024

ಬೆಳೆ ವಿಮೆ ಅರ್ಜಿ Status Check ಮಾಡಿ

ಗೃಹಲಕ್ಷ್ಮಿ DBT Status Check ಮಾಡಿ, 2000 ರೂ. ಬಂತಾ ನೋಡಿ

Written By Verified Author
Manjunath Pujari - Founder & Editor-in-Chief of KannadaSiri.in

Manjunath Pujari

Founder & Editor-in-Chief, KannadaSiri.in

10+ Years Exp
6,000+ Articles
B.A. RCU Belagavi

Kannada journalist from Belagavi with over 10 years of experience across print and digital media. Writes on government schemes, jobs, education, scholarships, technology, automobiles, and agriculture - making complex official information simple for everyday Kannada readers.

Leave a Comment