ಬ್ಲೂ ಸ್ಟಾರ್ 1,00,000 ರೂ. ವಿದ್ಯಾರ್ಥಿವೇತನ 2025 | Blue Star Scholarship 2025 Apply Online @ buddy4study.com

ಎಲ್ಲರಿಗೂ ನಮಸ್ಕಾರ, ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್, ಬ್ಲೂ ಸ್ಟಾರ್ ಫೌಂಡೇಶನ್‌ನ ವತಿಯಿಂದ ಮೋಹನ್ ಟಿ ಅಡ್ವಾಣಿ ಶತಮಾನೋತ್ಸವ ವಿದ್ಯಾರ್ಥಿವೇತನವನ್ನು ನೀಡುತ್ತಿದ್ದಾರೆ. ಅರ್ಹ ಮತ್ತು ಆಸಕ್ತ ವಿದ್ಯಾರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ನೀವು ಕೂಡ ಅರ್ಜಿ ಸಲ್ಲಿಸಿ ಇದರ ಉಪಯೋಗವನ್ನು ಪಡೆದುಕೊಳ್ಳಬಹುದು.

ಭಾರತದಾದ್ಯಂತ ಆಯ್ದ ಖಾಸಗಿ ಅಥವಾ ಸರ್ಕಾರಿ ಕಾಲೇಜುಗಳಲ್ಲಿ ವಾಸ್ತುಶಿಲ್ಪ ಮತ್ತು ಎಂಜಿನಿಯರಿಂಗ್‌ನಲ್ಲಿ ಪದವಿ ಅಥವಾ ಡಿಪ್ಲೊಮಾ ಕಾರ್ಯಕ್ರಮಕ್ಕೆ ದಾಖಲಾದ ಪ್ರಥಮ ಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು.

ಎಂಜಿನಿಯರಿಂಗ್ ಮತ್ತು Architecture ವಿದ್ಯಾರ್ಥಿಗಳಿಗೆ ಪ್ರಯೋಜನಗಳು:
ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ 1,00,000 ಅಥವಾ ವಾರ್ಷಿಕ ಶುಲ್ಕದ 75% (ಯಾವುದು ಕಡಿಮೆಯೋ ಅದು).

ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಪ್ರಯೋಜನಗಳು:
40,000 ರೂ. ಅಥವಾ ವಾರ್ಷಿಕ ಶುಲ್ಕದ 90% (ಯಾವುದು ಕಡಿಮೆಯೋ ಅದು)

Blue Star Scholarship 2025 ಅರ್ಹತೆಗಳು:

  • ಸಿವಿಲ್ ಎಂಜಿನಿಯರಿಂಗ್ ಹೊರತುಪಡಿಸಿ, ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್, ಮೆಕ್ಯಾನಿಕಲ್ ಎಂಜಿನಿಯರಿಂಗ್, ಮಾಹಿತಿ ತಂತ್ರಜ್ಞಾನ (ಐಟಿ), ಕಂಪ್ಯೂಟರ್ ಸೈನ್ಸ್ (ಸಿಎಸ್) ಮತ್ತು ಸಂಬಂಧಿತ STEM ಕ್ಷೇತ್ರಗಳಂತಹ ವಾಸ್ತುಶಿಲ್ಪ ಅಥವಾ ಎಂಜಿನಿಯರಿಂಗ್‌ನಲ್ಲಿ ಪದವಿ ಕಾರ್ಯಕ್ರಮಕ್ಕೆ ದಾಖಲಾದ ಮೊದಲ ಮತ್ತು ಎರಡನೇ ವರ್ಷದ ವಿದ್ಯಾರ್ಥಿಗಳು.
  • ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ 10 ಮತ್ತು 12 ನೇ ತರಗತಿಯಲ್ಲಿ 80% ಅಂಕಗಳನ್ನು ಪಡೆದಿರಬೇಕು.
  • ಎರಡನೇ ವರ್ಷದ ವಿದ್ಯಾರ್ಥಿಗಳಿಗೆ 12 ನೇ ತರಗತಿಯಲ್ಲಿ 80% ಅಂಕಗಳು ಮತ್ತು 1 ನೇ ವರ್ಷದಲ್ಲಿ 75% ಅಂಕಗಳನ್ನು ಪಡೆದಿರಬೇಕು.
  • 50% ಮಹಿಳೆಯರಿಗೆ ಆದ್ಯತೆ ನೀಡುತ್ತಾರೆ. ಹಾಗೂ ಹೆಣ್ಣು ಮಕ್ಕಳ ಶಿಕ್ಷಣವನ್ನು ಪ್ರೋತ್ಸಾಹಿಸುವುದು.
  • ಬ್ಲೂ ಸ್ಟಾರ್ ಫೌಂಡೇಶನ್ ಅನುಮೋದಿಸಿದ ಸರಿಸುಮಾರು 40-50 ಕಾಲೇಜುಗಳ ಪಟ್ಟಿಯಿಂದ ಕಾಲೇಜುಗಳಲ್ಲಿ ದಾಖಲಾದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
  • ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯವು 6 ಲಕ್ಷ ಕ್ಕಿಂತ ಕಡಿಮೆಯಿರಬೇಕು. (ಪಶ್ಚಿಮ ವಲಯದ ಕಾಲೇಜುಗಳನ್ನು ಹೊರತುಪಡಿಸಿ, ಅಗತ್ಯವಿದ್ದರೆ, ಇದನ್ನು 10 ಲಕ್ಷಕ್ಕೆ ಹೆಚ್ಚಿಸಬಹುದು).
  • ಬಡ್ಡಿ4ಸ್ಟಡಿ, ಬ್ಲೂ ಸ್ಟಾರ್ ಮತ್ತು ಬ್ಲೂ ಸ್ಟಾರ್ ಫೌಂಡೇಶನ್ ಉದ್ಯೋಗಿಗಳ ಮಕ್ಕಳು ಅರ್ಹರಲ್ಲ.

Blue Star Scholarship 2025 ಅಗತ್ಯ ದಾಖಲೆಗಳು:

  • ಆಧಾರ್ ಕಾರ್ಡ್
  • Architecture ಅಥವಾ ಎಂಜಿನಿಯರಿಂಗ್ ಕೋರ್ಸ್‌ಗಳಲ್ಲಿ ಪದವಿ ಅಥವಾ ಡಿಪ್ಲೊಮಾ ಕೋರ್ಸ್ ಗೆ ದಾಖಲಾತಿಗಾಗಿ ಪ್ರವೇಶ ಪುರಾವೆ
  • ಶುಲ್ಕ ಪಾವತಿ ರಶೀದಿ
  • ಹಿಂದಿನ ವರ್ಷದ ಅಂಕಪಟ್ಟಿ
  • ಕುಟುಂಬದ ಆದಾಯದ ಪುರಾವೆ
  • ಇತರೆ ದಾಖಲೆಗಳು

Blue Star Scholarship 2025 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 15-07-2025

ಪ್ರಮುಖ ಲಿಂಕ್ ಗಳು:
ಅರ್ಜಿ ಸಲ್ಲಿಕೆ ಲಿಂಕ್:‌ ಅರ್ಜಿ ಸಲ್ಲಿಸಿ
ಅಧಿಕೃತ ವೆಬ್‌ಸೈಟ್‌: buddy4study.com

Prize Money Scholarship 2025

Airtel ವಿದ್ಯಾರ್ಥಿವೇತನ 2025, ಅರ್ಜಿ ಸಲ್ಲಿಸಿ

Written By Verified Author
Manjunath Pujari - Founder & Editor-in-Chief of KannadaSiri.in

Manjunath Pujari

Founder & Editor-in-Chief, KannadaSiri.in

10+ Years Exp
6,000+ Articles
B.A. RCU Belagavi

Kannada journalist from Belagavi with over 10 years of experience across print and digital media. Writes on government schemes, jobs, education, scholarships, technology, automobiles, and agriculture - making complex official information simple for everyday Kannada readers.

Leave a Comment