ಎಲ್ಲರಿಗೂ ನಮಸ್ಕಾರ, ಕನ್ನಡಸಿರಿ.in ಸ್ವಾಗತ ನಾವು ಇಂದಿನ ಲೇಖನದಲ್ಲಿ ಸರ್ಕಾರದಿಂದ ಉಚಿತವಾಗಿ ನೀಡಲಾಗುವ ವಿವಿಧ ಉಪಕರಣಗಳಿಗಾಗಿ (Free Improved Tool Kits) ಅರ್ಜಿ ಸಲ್ಲಿಸಿರುವ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಈ ಯೋಜನೆಗೆ ಅರ್ಹತೆ ಹೊಂದಿರುವ ಫಲಾನುಭವಿಗಳು ಇಲಾಖೆ ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಹತೆ, ವಯೋಮಿತಿ, ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ, ಅರ್ಜಿ ಸಲ್ಲಿಕೆ ವಿಧಾನ ಮತ್ತು ಇತರೆ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ.
Free Improved Tool Kits For Rural Artisans:
ಗ್ರಾಮೀಣ ಮತ್ತು ಚಿಕ್ಕ ಉದ್ಯಮ ವಿಭಾಗ, ಜಿಲ್ಲಾ ಪಂಚಾಯತ ಕಛೇರಿಯಿಂದ 2023- 24 ನೇ ಸಾಲಿನಲ್ಲಿ ಜಿಲ್ಲಾ ವಲಯ ಯೋಜನೆಯಡಿ ಅರ್ಹ ಗ್ರಾಮೀಣ ಪ್ರದೇಶದ ಬಡಗಿತನ, ಗೌಂಡಿ ಕ್ಷೌರಿಕ ಮತ್ತು ಧೋಬಿ ವೃತ್ತಿಯ ಕುಶಲಕರ್ಮಿಗಳಿಂದ ಉಚಿತವಾಗಿ ಉಪಕರಣಗಳನ್ನು ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
ವಯೋಮಿತಿ:
18 ರಿಂದ 55 ವರ್ಷ ವಯೋಮಿತಿ ಫಲಾನುಭವಿಗಳು ಅರ್ಜಿ ಸಲ್ಲಿಸಬಹುದು.
ಯಾರು ಅರ್ಜಿ ಸಲ್ಲಿಸಬಹುದು..?:
ಉಚಿತವಾಗಿ ಉಪಕರಣಗಳನ್ನು ಪಡೆಯಲು ವಿಜಯಪುರ ಜಿಲ್ಲೆಯ ಗ್ರಾಮೀಣ ಪ್ರದೇಶದ ಗೌಂಡಿ ಕ್ಷೌರಿಕ, ಬಡಗಿ ಮತ್ತು ಧೋಬಿ ವೃತ್ತಿಯ ಕುಶಲಕರ್ಮಿಗಳು ಅರ್ಜಿ ಹಾಕಬಹುದು. (ಇತರೆ ಜಿಲ್ಲೆಯ ಮಾಹಿತಿಯನ್ನು ಶೀಘ್ರದಲ್ಲೆ ನೀಡಲಾಗುವುದು)
Free Tool Kits ಅರ್ಜಿ ಸಲ್ಲಿಸುವ ವಿಧಾನ:
ಕೆಳಗೆ ನೀಡಿರುವ ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು ಅಥವಾ ಕಛೇರಿಗೆ ಭೇಟಿ ನೀಡಿ ಅರ್ಜಿ ನಮೂನೆಯನ್ನು ಪಡೆದುಕೊಳ್ಳುವುದು. ನಂತರ ಅದನ್ನು ಭರ್ತಿ ಮಾಡಿದ ಅವಶ್ಯಕ ದಾಕಲಾತಿಗಳನ್ನು ಲಗತ್ತಿಸಿ ಕಛೇರಿಗೆ ಖುದ್ದಾಗಿ ಇಲ್ಲವೇ ಪೊಸ್ಟ ಮುಖಾಂತರ ಸಲ್ಲಿಸಬಹುದಾಗಿದೆ.
Free Improved Tool Kits ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ: 31-12-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 01-02-2024 ಸಾಯಂಕಾಲ 5.30 ವರೆಗೆ
ಅರ್ಜಿ ಸಲ್ಲಿಸಲು ಕಛೇರಿ ವಿಳಾಸ:
ಉಪನಿರ್ದೇಶಕರ ರವರ ಕಛೇರಿ
ಗ್ರಾಮೀಣ ಮತ್ತು ಚಿಕ್ಕ ಉದ್ಯಮ ವಿಭಾಗ,
ಜಿಲ್ಲಾ ಕೈಗಾರಿಕಾ ಕೇಂದ್ರ ಆವರಣ
ಸ್ಟೇಶನ್ ಬ್ಯಾಕ್ ರೋಡ, ಶಿಕಾರಖಾನೆ ವಿಜಯಪುರ-586104
ಹೆಚ್ಚಿನ ಮಾಹಿತಿಗಾಗಿ:
1) ಉಪನಿರ್ದೇಶಕರ ಕಛೇರಿಗೆ ದೂರವಾಣಿ ಸಂಖ್ಯೆ : 08352-254851,
2) ಕೈಗಾರಿಕಾ ವಿಸ್ತರಣಾಧಿಕಾರಿಗಳು ವಿಜಯಪುರ/ಸಿಂದಗಿ/ಇಂಡಿ ಮೊಬೈಲ್ ಸಂಖ್ಯೆ : 9972162222
3) ಮುದ್ದೇಬಿಹಾಳ/ಬಾಗೇವಾಡಿ ಮೊಬೈಲ್ ಸಂಖ್ಯೆ : 9945779798 ಸಂಪರ್ಕಿಸಬುಹುದಾಗಿದೆ.
Free Tool Kits ಪ್ರಮುಖ ಲಿಂಕ್’ಗಳು:
ಅಧಿಸೂಚನೆ ಮತ್ತು ಅರ್ಜಿ ನಮೂನೆ: ಡೌನ್‌ಲೋಡ್
ಅಧಿಕೃತ ವೆಬ್‌ಸೈಟ್: vijayapura.nic.in
ಇತರೆ ಮಾಹಿತಿಗಳನ್ನು ಓದಿ