ಉಚಿತ ಹೊಲಿಗೆ ಯಂತ್ರ ಯೋಜನೆ 2025: ಅರ್ಹರಿಂದ ಅರ್ಜಿ ಆಹ್ವಾನ | Free Sewing Machine Scheme Online Application 2025 Karnataka

ಎಲ್ಲರಿಗೂ ನಮಸ್ಕಾರ, ಸರ್ಕಾರದಿಂದ ಗುಡ್ ನ್ಯೂಸ್, ನೀವು ಕೂಡಾ ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಜಿ ಸಲ್ಲಿಸಬೇಕೆ..? Free Sewing Machine Scheme 2025 ಯೋಜನೆಗೆ ಅರ್ಜಿ ಸಲ್ಲಿಸಲು ಯಾವ ದಾಖಲೆಗಳು ಬೇಕಾಗುತ್ತವೆ..? ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ ಸೇರಿದಂತೆ ಹೆಚ್ಚಿನ ಮಾಹಿತಿಯನ್ನು ನೀಡಲಾಗಿದೆ ಓದಿರಿ.

ದಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ ಹಿಂದುಳಿದ ವರ್ಗಗಳ ಬಡ ಕುಟುಂಬದವರಿಗೆ ಹೊಲಿಗೆ ಯಂತ್ರಗಳನ್ನು ವಿತರಿಸುವ ಯೋಜನೆಗೆ ಅರ್ಹರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಈ ಯೋಜನೆಗೆ ಅರ್ಜಿ ಸಲ್ಲಿಸಿ ಇದರ ಪ್ರಯೋಗಗಳನ್ನು ಪಡೆದುಕೊಳ್ಳಬಹುದು.

ಅರ್ಜಿ ಸಲ್ಲಿಸಲು ಬಯಸುವವರು ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿ ಗೆ ಸೇರಿದವರಾಗಿರಬೇಕು. ಹಾಗೂ ಅವರ ಕುಟುಂಬದ ವಾರ್ಷಿಕ ಆದಾಯ ಗ್ರಾಮಾಂತರ ಪ್ರದೇಶದವರಿಗೆ 98,000 ರೂ. ಗಳು ಮತ್ತು ಪಟ್ಟಣ ಪ್ರದೇಶದವರಿಗೆ 1,20,000‌ ರೂ. ಗಳು ಮೀರಿರಬಾರದು.

Free Tailoring Machine ವಯೋಮಿತಿ:
ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಜಿ ಸಲ್ಲಿಸುವ ಅರ್ಜಿದಾರರ ವಯಸ್ಸು ಕನಿಷ್ಠ 18 ಹಾಗೂ ಗರಿಷ್ಠ 55 ವರ್ಷ ಒಳಗಿರಬೇಕು.

ಉಚಿತ ಹೊಲಿಗೆ ಯಂತ್ರ ಯೋಜನೆಗೆ ವಿಶ್ವಕರ್ಮ, ಉಪ್ಪಾರ, ಅಂಬಿಗ, ಸವಿತಾ, ಮಡಿವಾಳ, ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯ, ಒಕ್ಕಲಿಗ, ಲಿಂಗಾಯತ, ಕಾಡುಗೊಲ್ಲ, ಮರಾಠ, ಮತ್ತು ಇದರ ಉಪ ಸಮುದಾಯಗಳಿಗೆ ಸೇರಿದವರಿಂದ ಸದ್ಯಕ್ಕೆ ಅರ್ಜಿ ಆಹ್ವಾನಿಸಿಲ್ಲ.

ಹೊಸ ಉಚಿತ ಹೊಲಿಗೆ ಯಂತ್ರ ಯೋಜನೆ, ಆನ್‌ಲೈನ್‌ ಅರ್ಜಿ ಆಹ್ವಾನ

Free Sewing Machine Scheme 2025 ಅಗತ್ಯ ದಾಖಲೆಗಳು:

  • ಆಧಾರ್ ಕಾರ್ಡ್
  • ಜಾತಿ ಹಾಗೂ ಆದಾಯ ಪ್ರಮಾಣ ಪತ್ರ
  • ಪಾಸ್‌ಪೋರ್ಟ್ ಅಳತೆಯ ಫೋಟೋ
  • ಬ್ಯಾಂಕ್ ಪಾಸ್‌ಬುಕ್ ಪ್ರತಿ

Holige Yantra Online Application 2025 ಅರ್ಜಿ ಸಲ್ಲಿಸುವ ವಿಧಾನ:
ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವವರು ಸೇವಾ ಸಿಂಧು ಪೋರ್ಟಲ್ sevasindhu.karnataka.gov.in ಮೂಲಕ ಗ್ರಾಮಒನ್, ಕರ್ನಾಟಕಒನ್ ಅಥವಾ ಬೆಂಗಳೂರುಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ನಿಗಮದ ವೆಬ್‌ಸೈಟ್ dbcdc.karnataka.gov.in ಭೇಟಿ ನೀಡಿ ಮಾಹಿತಿಯನ್ನು ಪಡೆದುಕೊಳ್ಲಕಬಹುದು. ಅಥವಾ ನಿಗಮದ ಸಹಾಯವಾಣಿ ಸಂಖ್ಯೆ: 080-22374832 ಮತ್ತು 8050770004 ಅಥವಾ 8050770005 ಸಂಪರ್ಕಿಸಬಹುದು.

ಹೊಲಿಗೆ ಯಂತ್ರ ಅರ್ಜಿ 2025 last date:
ಅರ್ಜಿ ಸಲ್ಲಿಕೆ ಕೊನೆಯ ದಿನ: 30-06-2025

Free Sewing Machine Scheme ಪ್ರಮುಖ ಲಿಂಕ್’ಗಳು:
ಪ್ರಕಟಣೆ
: ಡೌನ್‌ಲೋಡ್
Online Application: Apply ಮಾಡಿ
ಅಧಿಕೃತ ವೆಬ್‌ಸೈಟ್:‌ dbcdc.karnataka.gov.in, sevasindhu.karnataka.gov.in

PM Kisan 20th installment 2025

ಕೃಷಿ ಯಂತ್ರೋಪಕರಣಗಳಿಗೆ ಸಹಾಯಧನ; ರೈತರಿಂದ ಅರ್ಜಿ ಆಹ್ವಾನ

PM ಉಜ್ವಲ ಯೋಜನೆ: ಉಚಿತ ಎಲ್.ಪಿ.ಜಿ ಗ್ಯಾಸ್ ಸಿಲಿಂಡರ್ ಅರ್ಜಿ

Written By Verified Author
Manjunath Pujari - Founder & Editor-in-Chief of KannadaSiri.in

Manjunath Pujari

Founder & Editor-in-Chief, KannadaSiri.in

10+ Years Exp
6,000+ Articles
B.A. RCU Belagavi

Kannada journalist from Belagavi with over 10 years of experience across print and digital media. Writes on government schemes, jobs, education, scholarships, technology, automobiles, and agriculture - making complex official information simple for everyday Kannada readers.

Leave a Comment