ಕರ್ನಾಟಕ ಸರ್ಕಾರ ಪಂಚ ಗ್ಯಾರಂಟಿಗಳಲ್ಲಿ ಪ್ರಮುಖವಾಗಿರುವ ಗೃಹಲಕ್ಷ್ಮಿ ಯೋಜನೆಯ (Gruhalakshmi Amount Not Received) ಹಣ ನಿಮ್ಮ ಬ್ಯಾಂಕ್ ಖಾತೆಗೆ ಇನ್ನೂ ಬಂದಿಲ್ಲವೇ? ಯಾಕೆ ದುಡ್ಡು ಜಮಾ ಆಗಿಲ್ಲ, ಹಣ ಬರದೆ ಇದ್ದರೆ ಏನು ಮಾಡಬೇಕು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.
ಗೃಹಲಕ್ಷ್ಮಿ ಯೋಜನೆಗೆ ಇಲ್ಲಿಯವರೆಗೆ 1 ಕೋಟಿ 15 ಲಕ್ಷಕ್ಕೂ ಅಧಿಕ ಮನೆ ಯಜಮಾನಿಯರು ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿ 92 ಲಕ್ಷ ಫಲಾನುಭವಿಗಳಿಗೆ ಮೊದಲ ಕಂತಿನ ಹಣ ಜಮಾ ಮಾಡಲಾಗಿದೆ. ಎಲ್ಲ ದಾಖಲೆಗಳು ಸರಿ ಇರುವವರ ಬ್ಯಾಂಕ್ ಖಾತೆಗಳಿಗೆ ದುಡ್ಡು ಬಂದಿದೆ. 2 ನೇ ಕಂತಿನ ಹಣವನ್ನು ಹಂತ ಹಂತವಾಗಿ ವರ್ಗಾವಣೆ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.
Gruhalakshmi Amount Not Received ಮಾಹಿತಿ:
ಮೈಸೂರಿನಲ್ಲಿ ಆಗಸ್ಟ್ 30 ರಂದು ಗೃಹಲಕ್ಷ್ಮೀ ಯೋಜನೆಗೆ ಅಧಿಕೃತ ಚಾಲನೆ ನೀಡಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ 2000 ರಂತೆ ವರ್ಗಾವಣೆ ಮಾಡಲಾಗಿತ್ತು. ಆದರೆ ಅನೇಕ ಜನರ ಬ್ಯಾಂಕ್ ಖಾತೆ ಸಮಸ್ಯೆ ಮತ್ತು ಇತರೆ ದೋಷಗಳಿಂದ ಹಣ ಜಮಾ ಆಗಿಲ್ಲ. ಯಾಕೆ ಹಣ ನಿಮಗೆ ಬಂದಿಲ್ಲ ಎಂಬುದನ್ನು ಈ ಕೇಳಗಿನ ಕಾರಣಗಳು ಇರಬಹುದು ಒಮ್ಮೆ ಪರಿಶೀಲಿಸಿಕೊಳ್ಳಿ.
1) 92 ಲಕ್ಷ ಫಲಾನುಭವಿಗಳಿಗೆ ಹಣ ಜಮಾ..!
ಗೃಹಲಕ್ಷ್ಮಿ ಯೋಜನೆಯ ಅರ್ಹ 92 ಲಕ್ಷ ಫಲಾನುಭವಿಗಳಿಗೆ ಹಣ ಜಮಾ ಆಗಿರುವ ಬಗ್ಗೆ ಮಾಹಿತಿ ಲಭ್ಯವಿದೆ. ಆದರೆ ಇನ್ನೂ 18 ಲಕ್ಷದಷ್ಟು ಮನೆ ಯಜಮಾನಿಯರ ಖಾತೆಗೆ ಹಣ ಬಂದಿಲ್ಲ. ಆಗಸ್ಟ್ ತಿಂಗಳಲ್ಲಿ 8-9 ಲಕ್ಷ ಗೃಹಿಣಿಯರು ಅರ್ಜಿ ಸಲ್ಲಿಕೆ ಮಾಡಿದ್ದರು ಆದ್ದರಿಂದ ಅವರಿಗೂ ಹಣ ಬಂದಿಲ್ಲ.
2) ನಿಮ್ಮ ಮಾಹಿತಿ ಸರಿ ಇದೇಯೆ? ಪರಿಶೀಲಿಸಿ:
ದುಡ್ಡು ಜಮಾ ಆಗದೆ ಇರಲು ಪ್ರಮುಖ ಕಾರಣ ಗೃಹಲಕ್ಷ್ಮಿ ಅರ್ಜಿ ಸಲ್ಲಿಸುವಾಗ ರೇಷನ್ ಕಾರ್ಡ್, ಬ್ಯಾಂಕ್ ಖಾತೆ ಮತ್ತು ಆಧಾರ್ ಕಾರ್ಡ್‌ನಲ್ಲಿ ಫಲಾನುಭವಿಗಳ ಹೆಸರು ಮತ್ತು ಇತರೆ ಮಾಹಿತಿ ಒಂದೇ ಆಗಿರಬೇಕು. ರೇಷನ್ ಕಾರ್ಡ್ ಒಂದು ಹೆಸರು ಬ್ಯಾಂಕ್ ಖಾತೆಯಲ್ಲಿ ಮತ್ತೊಂದು ರೀತಿ ಹೆಸರು ಇದ್ದರೆ ಹಣ ಜಮಾ ಆಗಿಲ್ಲವೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
6 ಲಕ್ಷಕ್ಕೂ ಅಧಿಕ ಫಲಾನುಭವಿಗಳ ಬ್ಯಾಂಕ್ ಖಾತೆಯಲ್ಲಿರುವ ಮಾಹಿತಿ ಹಾಗೂ ಅರ್ಜಿ ಸಲ್ಲಿಸುವಾಗ ನೀಡಿರುವ ಮಾಹಿತಿಯಲ್ಲಿ ವ್ಯತ್ಯಾಸ ಇರುವದು ಕಂಡು ಬಂದಿದೆಯಂತೆ. ಮನೆ ಯಜಮಾನಿಯ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳಿದ್ದಲ್ಲಿ ಅದರಲ್ಲಿ ಆಧಾರ್ ಕಾರ್ಡ್ಗೆ ಯಾವ ಬ್ಯಾಂಕ್ ಲಿಂಕ್ ಆಗಿದೆ ಎಂಬುದನ್ನು ನೀವು ಚೆಕ್ ಮಾಡಿಕೊಳ್ಳಬೇಕು. ಚೆಕ್ ಮಾಡುವ ವಿಧಾನ
ಉದಾ: ಬ್ಯಾಂಕ್ ಖಾತೆಯಲ್ಲಿ Laxmi ಇದೆ ಮತ್ತು ರೇಷನ್ ಕಾರ್ಡ್ Lakshmi ಇದ್ದರೆ ಈ ರೀತಿ ವ್ಯತ್ಯಾಸವಾದರೆ ನಿಮ್ಮ ಖಾತೆಗೆ ದುಡ್ಡು ಜಮಾ ಆಗುವುದಿಲ್ಲ. ಹೀಗೆ ಏನಾದರೂ ಸಮಸ್ಯೆ ಇದ್ದರೆ ಪರಿಶೀಲಿಸಿ ಸರಿ ಮಾಡಿಕೊಳ್ಳಬೇಕಾಗುತ್ತದೆ.
3) Gruhalakshmi DBT Status Check ಮಾಡಿಕೊಳ್ಳಿ:
ಗೃಹಲಕ್ಷ್ಮೀ ಯೋಜನೆಯ ದುಡ್ಡು ನಿಮಗೆ ಯಾಕೆ ಬಂದಿಲ್ಲ ಎಂಬುದನ್ನು ತಿಳಿಯಲು Gruha Lakshmi DBT Status Check ಮಾಡಿಕೊಳ್ಳಬಹುದು. ವೆಬ್‌ಸೈಟ್‌ನಲ್ಲಿ ಅರ್ಜಿ ಸ್ಥತಿ ತಿಳಿಯಲು ಸಾಧ್ಯವಾಗದೇ ಇದ್ದರೆ ನಿಮ್ಮ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್‌ಗೆ ಭೇಟಿ ನೀಡಿ DBT Status Check ಮಾಡಿಸಿ.
4) ಬ್ಯಾಂಕ್‌ಗೆ ಭೇಟಿ ನೀಡಿ ಪರಿಶೀಲಿಸಿ:
ನಿಮ್ಮ ಊರಿನ ಜನರಿಗೆ ಗೃಹಲಕ್ಷ್ಮೀ ಯೋಜನೆಯ ಹಣ ಜಮಾ ಆಗಿದ್ದರೆ ನಿಮಗೆ ಹಣ (Gruhalakshmi Amount Not Received) ಬಂದಿಲ್ಲವಾದರೆ ಕೆಲವೊಮ್ಮೆ ತಾಂತ್ರಿಕ ದೋಷದಿಂದ SMS ಬಂದಿರುವುದಿಲ್ಲ ನಿಮ್ಮ ಖಾತೆ ಇರುವ ಬ್ಯಾಂಕ್‌ಗೆ ಭೇಟಿ ನೀಡಿ ಪರಿಶೀಲಿಸಿ. ನಿಮ್ಮ ಆಧಾರ್‌ಗೆ ಯಾವ ಬ್ಯಾಂಕ್ ಖಾತೆ ಜೋಡಣೆಯಾಗಿದೆ ಎಂದುಬುದನ್ನು ತಿಳಿಯಿರಿ ಮತ್ತು ಆ ಬ್ಯಾಂಕ್ ಖಾತೆಯಲ್ಲಿ ಹಣ ಜಮಾ ಆಗಿದೆಯೇ ಎಂಬುದನ್ನು ಖಚಿತ ಪಡಿಸಿಕೊಳ್ಳಿ ಎನ್ನುತ್ತಾರೆ ಅಧಿಕಾರಿಗಳು. ಮೊದಲ ಕಂತಿನ ಹಣ ನಿಮಗೆ ಬಂದಿದ್ದರೆ ಚಿಂತೆ ಮಾಡಬೇಡಿ ಕೆಲವು ದಿನ ತಡ ಆದರೆ 2ನೇ ಕಂತಿನ ಹಣ ಬರುತ್ತದೆ.
5) ಹಣ ಜಮಾ ಆಗದಿದ್ದರೆ ಯಾರನ್ನು ಭೇಟಿ ಆಗಬೇಕು?
ಗೃಹಲಕ್ಷ್ಮಿ ಯೋಜನೆಯ 2 ಸಾವಿರ ರೂಪಾಯಿ ನಿಮ್ಮ ಖಾತೆಗೆ ಜಮಾ ಆಗಿಲ್ಲವಾದರೆ ನಿಮ್ಮ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು.
ಇತರೆ ಯೋಜನೆಗಳು
ವಿದ್ಯಾರ್ಥಿಗಳಿಗೆ 20,000 ರೂ. ಪ್ರೋತ್ಸಾಹ ಧನ ಸಹಾಯಕ್ಕಾಗಿ ಅರ್ಜಿ ಆಹ್ವಾನ