ಅಂತು ಇಂತು ಗೃಹಲಕ್ಷ್ಮೀ 2ನೇ ಕಂತಿನ ಹಣ ಬಂತು | GruhaLakshmi Scheme 2nd Installment Amount

Telegram Group Join Now
WhatsApp Group Join Now

ನಮಸ್ಕಾರ.. ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮೀ ಯೋಜನೆಯ 2ನೇ ಕಂತಿನ ಹಣ (GruhaLakshmi Scheme 2nd Installment Amount) ಮನೆ ಯಜಮಾನಿಯರ ಬ್ಯಾಂಕ್‌ ಖಾತೆಗಳಿಗೆ ಜಮಾ ಆಗುತ್ತಿದೆ. ಬಹು ದಿನಗಳಿಂದ ಗೃಹಲಕ್ಷ್ಮಿಯರು 2ನೇ ಕಂತಿನ ದುಡ್ಡು ಬರುತ್ತದೆ ಎಂದು ಕಾಯುತ್ತಿದ್ದರು ತಾಂತ್ರಿಕ ಕಾರಣದಿಂದಾಗಿ ತಡವಾಗಿತ್ತು.

ಗೃಹಲಕ್ಷ್ಮೀ ಯೋಜನೆಯ ಅರ್ಹ ಫಲಾನುಭವಿಗಳ ಬ್ಯಾಂಕ್‌ ಖಾತೆಗಳಿಗೆ ಹಂತ ಹಂತವಾಗಿ 2ನೇ ಕಂತಿನ ಹಣವನ್ನು GruhaLakshmi DBT ಮೂಲಕ ವರ್ಗಾವಣೆ ಮಾಡಲಾಗುತ್ತಿದೆ.

ಇದನ್ನು ಓದಿ: Today Gold Rate: ಇಂದಿನ ಚಿನ್ನದ ದರ ಎಷ್ಟು ಗೊತ್ತಾ..? 

GruhaLakshmi Scheme 2nd Installment Amount Credited

ಮೊದಲನೇ ಕಂತಿನ ಗೃಹಲಕ್ಷ್ಮೀ ಹಣ ಪಡೆದವರ ಖಾತೆಗೆ ಸೆಪ್ಟೆಂಬರ್‌ ತಿಂಗಳ ಕಂತಿನ ದುಡ್ಡು 26-10-2023 ರಿಂದ ವಿವಿಧ ಜಿಲ್ಲೆಗಳ ಫಲಾನುಭವಿಗಳಿಗೆ ಜಮಾ ಆಗುತ್ತಿದೆ.

Gruha Lakshmi Scheme Amount Credited SMS

ಗೃಹಲಕ್ಷ್ಮೀ ಯೋಜನೆಯಮೊದಲ ಕಂತಿನ 2 ಸಾವಿರ ರೂಪಾಯಿ ಹಣ ಆಗಸ್ಟ್‌ 30 ರಿಂದ ವರ್ಗಾವಣೆ ಮಾಡಲಾಗಿತ್ತು. ಆದರೆ 2 ನೇ ಕಂತಿನ ಹಣ ತಾಂತ್ರಿಕ ಮತ್ತು ಇತರೆ ಕಾರಣದಿಂದ ತಡವಾಗಿ ಜಮಾ ಮಾಡಲಾಗುತ್ತಿದೆ. ತಡವಾಗಿಯಾದರು ಬಂದಿರುವ ಹಣ ದಸರಾ-ದಿಪಾವಳಿ ಹಬ್ಬದ ಸಣ್ಣ ಪುಟ್ಟ ಖರ್ಚುಗಳಿಗೆ ಸಹಕಾರಿಯಾಗಲಿದೆ.

ಈ ಯೋಜನೆಯಡಿ ಕುಟುಂಬದ ಯಜಮಾನಿ ಮಹಿಳೆಯರಿಗೆ ಪ್ರತಿ ತಿಂಗಳು ರೂ. 2,000 ಧನಸಹಾಯ ನೀಡಲಾಗುತ್ತಿದೆ. ರಾಜ್ಯದಲ್ಲಿ 1.16 ಕೋಟಿಗೂ ಅಧಿಕ ಮಹಿಳೆಯರು ಅರ್ಜಿ ಸಲ್ಲಿಸಿದ್ದಾರೆ. 1.08 ಕೋಟಿ ಮಹಿಳೆಯರಿಗೆ ಹಣ ಜಮಾ ಮಾಡಲಾಗಿದ್ದು, ಗೃಹಲಕ್ಷ್ಮೀ ಯೋಜನೆಗಾಗಿ ಸರ್ಕಾರವು ರೂ. 4,449 ಕೋಟಿ ಅನುದಾನ ಬಳಕೆ ಮಾಡಿದೆ.

ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಮಹಿಳಾ ಕಲ್ಯಾಣ ಕಾರ್ಯಕ್ರಮಗಳಿಗಾಗಿ ರೂ.70,427 ಕೋಟಿ ಹಣವನ್ನು ಮೀಸಲಿಡಲಾಗಿದೆ.

ಇತರೆ ಮಾಹಿತಿಗಳನ್ನು ಓದಿ

ಉಚಿತ ಹೊಲಿಗೆ ಯಂತ್ರ ಯೋಜನೆ, ಆನ್‌ಲೈನ್‌ ಅರ್ಜಿ ಆಹ್ವಾನ

ಅನ್ನಭಾಗ್ಯ ಯೋಜನೆ: DBT Status ಚೆಕ್‌ ಮಾಡಿ

ರಾಜ್ಯ ಸರ್ಕಾರದ ವಿದ್ಯಾರ್ಥಿವೇತನ 2023, ಆನ್‌ಲೈನ್‌ ಅರ್ಜಿ ಆಹ್ವಾನ

Telegram Group Join Now
WhatsApp Group Join Now

Leave a Comment

error: Content is protected !!