ಎಲ್ಲರಿಗೂ ಸಮಸ್ಕಾರ, ನೀವು ಸ್ಕಾಲರ್ಶಿಪ್’ಗೆ ಅರ್ಜಿ ಸಲ್ಲಿಸಬೇಕೆ? ಹಾಗಿದ್ದರೆ ಇಲ್ಲಿದೆ ನಿಮಗೆ ಗುಡ್ ನ್ಯೂಸ್. HDFC Parivartan Scholarship ಅರ್ಜಿ ಸಲ್ಲಿಸಲು ಯಾರು ಅರ್ಹರು ಹಾಗೂ ಯಾವ ದಾಖಲೆಗಳು ಬೇಕಾಗುತ್ತವೆ ಎಂಬ ಮಾಹಿತಿ ಈ ಲೇಖನದಲ್ಲಿದೆ ಸರಿಯಾಗಿ ಓದಿ ಅರ್ಹರು ಅರ್ಜಿ ಸಲ್ಲಿಸಬಹುದು.
ಹಿಂದುಳಿದ ವರ್ಗಗಳಿಗೆ ಸೇರಿದ ಪ್ರತಿಭಾವಂತ ವಿದ್ಯಾರ್ಥಿಗಳ ಶೈಕ್ಷಣಿಕ ಸಹಾಯಕ್ಕಾಗಿ ಹಣಕಾಸಿನ ನೆರವು ನೀಡಿ ಅವರಿಗೆ ಶಿಕ್ಷಣದಿಂದ ವಂಚಿತರಾಗದಂತೆ ತಡೆಯಲು HDFC ಬ್ಯಾಂಕ್ ECSS ಕಾರ್ಯಕ್ರಮದ ಅಡಿಯಲ್ಲಿ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ.
HDFC Parivartan Scholarship 2024
ವಿದ್ಯಾರ್ಥಿವೇತನದ ಹೆಸರು | HDFC Bank Parivartan’s ECSS Programme |
ವಿದ್ಯಾರ್ಥಿವೇತನದ ಮೊತ್ತ | 75,000 ರೂ. ವರೆಗೆ |
ವಿದ್ಯಾರ್ಥಿವೇತನ ನೀಡುವ ಸಂಸ್ಥೆ | HDFC Bank |
ಅರ್ಜಿ ಸಲ್ಲಿಕೆ ವಿಧಾನ | ಆನ್‌ಲೈನ್ ಮೂಲಕ |
ಭಾರತದ ಪ್ರಮುಖ ಬ್ಯಾಂಕ್ ಗಳಲ್ಲಿ ಒಂದಾದ HDFC ಬ್ಯಾಂಕ್ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವಾಗಲು ಹಾಗೂ ಹಣದ ಕೊರತೆಯಿಂದ ಶಿಕ್ಷಣವನ್ನು ಮುಂದುವರಿಸಲು ಸಾಧ್ಯಾವಾಗದ ಹಿಂದುಳಿದ ವಿದ್ಯಾರ್ಥಿಗಳಿಗೆ HDFC ECSS ಕಾರ್ಯಕ್ರಮದ ಅಡಿಯಲ್ಲಿ ಪರಿವರ್ತನ್ ಸ್ಕಾಲರ್ಶಿಪ್ ನೀಡುತ್ತಿದ್ದಾರೆ. ವಿದ್ಯಾರ್ಹತೆಗೆ ಅನುಗುಣವಾಗಿ 75,000 ರೂ. ವರೆಗೆ ಹಣದ ಸಹಾಯವನ್ನು ನೀಡಲಾಗುತ್ತದೆ.
HDFC Scholarship For Postgraduate Students 2023-24
ವಿದ್ಯಾರ್ಥಿಗಳು ಭಾರತದ ಮಾನ್ಯತೆ ಪಡೆದ ಕಾಲೇಜುಗಳು ಅಥವಾ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಕೋರ್ಸ್‌ಗಳನ್ನು (ಸಾಮಾನ್ಯ ಕೋರ್ಸ್‌ಗಳು – MCom, MA, ಇತ್ಯಾದಿ ಮತ್ತು ವೃತ್ತಿಪರ ಕೋರ್ಸ್‌ಗಳು – MTech, MBA, ಇತ್ಯಾದಿ) ವ್ಯಾಸಂಗ ಮಾಡುತ್ತರಬೇಕು.
ಸ್ಕಾಲರ್ಶಿಪ್’ನ ಪ್ರಯೋಜನಗಳು:
ಸಾಮಾನ್ಯ ಸ್ನಾತಕೋತ್ತರ ಕೋರ್ಸ್‌ಗಳಿಗೆ: 35,000 ರೂ.
ವೃತ್ತಿಪರ ಸ್ನಾತಕೋತ್ತರ ಕೋರ್ಸ್‌ಗಳಿಗೆ: 75,000 ರೂ.
HDFC Scholarship For Undergraduate Courses Students 2023-24:
ವಿದ್ಯಾರ್ಥಿಗಳು ಭಾರತದಲ್ಲಿನ ಮಾನ್ಯತೆ ಪಡೆದ ಕಾಲೇಜುಗಳು ಅಥವಾ ವಿಶ್ವವಿದ್ಯಾನಿಲಯಗಳಲ್ಲಿ ಪದವಿ ಕೋರ್ಸ್‌ಗಳನ್ನು (ಸಾಮಾನ್ಯ ಕೋರ್ಸ್‌ಗಳು- BCom, BSc, BA, BCA, ಇತ್ಯಾದಿ ಮತ್ತು ವೃತ್ತಿಪರ ಕೋರ್ಸ್‌ಗಳು- BTech, MBBS, LLB, B Arch, ನರ್ಸಿಂಗ್) ವ್ಯಾಸಂಗ ಮಾಡುತ್ತರಬೇಕು.
ಸ್ಕಾಲರ್ಶಿಪ್’ನ ಪ್ರಯೋಜನಗಳು:
ಸಾಮಾನ್ಯ ಪದವಿಪೂರ್ವ ಕೋರ್ಸ್‌ಗಳಿಗೆ: 30,000 ರೂ.
ವೃತ್ತಿಪರ ಪದವಿಪೂರ್ವ ಕೋರ್ಸ್‌ಗಳಿಗೆ: 50,000 ರೂ.
HDFC Parivartan Scholarship For School Students 2023-24:
ವಿದ್ಯಾರ್ಥಿಗಳು ಪ್ರಸ್ತುತ 1 ರಿಂದ 12 ನೇ ತರಗತಿ, ಡಿಪ್ಲೊಮಾ, ಐಟಿಐ ಮತ್ತು ಪಾಲಿಟೆಕ್ನಿಕ್ ಕೋರ್ಸ್‌ಗಳಲ್ಲಿ ಖಾಸಗಿ, ಸರ್ಕಾರಿ ಅಥವಾ ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಓದುತ್ತಿರಬೇಕು.
ಸ್ಕಾಲರ್ಶಿಪ್’ನ ಪ್ರಯೋಜನಗಳು:
1 ರಿಂದ 6 ನೇ ತರಗತಿಗೆ ವಿದ್ಯಾರ್ಥಿಗಳಿಗೆ: 15,000 ರೂ.
7 ರಿಂದ 12 ನೇ ತರಗತಿ, ಡಿಪ್ಲೊಮಾ, ITI ಮತ್ತು ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ: 18,000 ರೂ.
ಅಗತ್ಯ ದಾಖಲೆಗಳು:
- ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ
- ಹಿಂದಿನ ವರ್ಷದ ಅಂಕಪಟ್ಟಿಗಳು (2022-23)
- ಗುರುತಿನ ಪುರಾವೆ (ಆಧಾರ್ ಕಾರ್ಡ್/ವೋಟರ್ ಐಡಿ/ಚಾಲನಾ ಪರವಾನಗಿ)
- ಪ್ರಸ್ತುತ ವರ್ಷದ ಪ್ರವೇಶ ಪುರಾವೆ (ಶುಲ್ಕ ರಸೀದಿ/ಪ್ರವೇಶ ಪತ್ರ/ಸಂಸ್ಥೆಯ ಗುರುತಿನ ಚೀಟಿ/ಬೊನಾಫೈಡ್ ಪ್ರಮಾಣಪತ್ರ) (2023-24)
- ಅರ್ಜಿದಾರರ ಬ್ಯಾಂಕ್ ಪಾಸ್‌ಬುಕ್ ಆಥವಾ Canceled ಚೆಕ್
- ಆದಾಯ ಪುರಾವೆ (ಕೆಳಗೆ ನೀಡಲಾದ ಮೂರು ಪುರಾವೆಗಳಲ್ಲಿ ಯಾವುದಾದರೂ)
- ಕುಟುಂಬ/ವೈಯಕ್ತಿಕ ಬಿಕ್ಕಟ್ಟಿನ ಪುರಾವೆ (ಅನ್ವಯಿಸಿದರೆ)
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ: 31-01-2024
ಪ್ರಮುಖ ಲಿಂಕ್‌ಗಳು:
HDFC Scholarship Apply Online ಲಿಂಕ್: Apply ಮಾಡಿ
ಇತರೆ ಮಾಹಿತಿಗಳನ್ನು ಓದಿ
Scholarship: ಶುಲ್ಕ ಮರುಪಾವತಿ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಆಹ್ವಾನ