ರೇಷನ್‌ ಕಾರ್ಡ್‌ ತಿದ್ದುಪಡಿ, ಹೆಸರು ಸೇರ್ಪಡೆ ಅವಧಿ ವಿಸ್ತರಣೆ | How To Change Name In Ration Card Karnataka 2023 @ ahara.kar.nic.in

ನಿಮ್ಮ ರೇಷನ್‌ ಕಾರ್ಡ್‌ನಲ್ಲಿ ಯಜಮಾನಿಯ ಸ್ಥಾನವನ್ನು ಅತ್ತೆಯಿಂದ ಸೊಸೆಗೆ ಅಥವಾ ಸೊಸೆಯಿಂದ ಅತ್ತೆಗೆ ವರ್ಗಾಯಿಸಬೇಕೇ? ಹಾಗಿದ್ದರೆ ಇಲ್ಲಿದೆ ನಿಮಗೆ ಗುಡ್‌ ನ್ಯೂಸ್.‌ ಗೃಹಲಕ್ಷ್ಮಿ ಯೋಜನೆಯ ಲಾಭ ಪಡೆಯಲು ಕುಟುಂಬದ ಯಜಮಾನಿಯ ಸ್ಥಾನ ಬದಲಾಯಿಸುವ (How To Change Name In Ration Card) ಮಾಹಿತಿ ಮತ್ತು ಇತರೆ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ಓದಿ ಹಾಗೂ ಸರ್ಕಾರಿ ಯೋಜನೆಗಳ ಸೌಲಭ್ಯ ಪಡೆಯಿರಿ.

ರೇಷನ್‌ ಕಾರ್ಡ್‌ನಲ್ಲಿ ತಿದ್ದುಪಡಿ ಹಾಗೂ ಸೇರ್ಪಡೆಗೆ ಅವಕಾಶ

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಪಡಿತರ ಚೀಟಿಯಲ್ಲಿ ತಿದ್ದುಪಡಿ ಅಥವಾ ಸೇರ್ಪಡೆಗೆ ಅವಕಾಶ ನೀಡಿದ್ದು, ಗೃಹ ಲಕ್ಷ್ಮಿಯೋಜನೆಯ ಲಾಭ ಪಡೆಯಲು ಕುಟುಂಬದ ಯಜಮಾನಿಯ ಸ್ಥಾನ ಬದಲಾಯಿಸುವ ಅವಶ್ಯಕತೆ ಇದ್ದಲ್ಲಿ ಅರ್ಜಿ ಸಲ್ಲಿಸಬಹುದು.

Remove Name From Ration Card Online Karnataka, Ration Card Amendment Online @ ahara.kar.nic.in

ಯಾವ ಸಂದರ್ಭಗಳಲ್ಲಿ ಬದಲಾಯಿಸಬಹುದು

  1. ಯಜಮಾನಿಯ ಸ್ಥಾನದಲ್ಲಿರುವ ಮಹಿಳೆ ನಿಧನರಾಗಿದ್ದರೆ.
  2. ಪಡಿತರ ಚೀಟಿಯಲ್ಲಿ ಪುರುಷ ಕುಟುಂಬದ ಮುಖ್ಯಸ್ಥನಾಗಿದ್ದರೆ.
  3. ಯಜಮಾನಿಯ ಸ್ಥಾನವನ್ನು ಅತ್ತೆಯಿಂದ ಸೊಸೆಗೆ ಅಥವಾ ಸೊಸೆಯಿಂದ ಅತ್ತೆಗೆ ವರ್ಗಾಯಿಸಬೇಕಾಗಿದ್ದರೆ.

ಸೂಚನೆಗಳು:

  1. ಗೃಹಲಕ್ಷ್ಮಿ ಯೋಜನೆಗೆ ಇದುವರೆಗೂ ನೋಂದಾಯಿಸದೇ ಇರುವವರು ಯಜಮಾನಿಯ ಬದಲಾವಣೆ ಮಾಡಿಕೊಳ್ಳಬಹುದು.
  2. ಗೃಹಲಕ್ಷ್ಮಿ ಯೋಜನೆಯಡಿ ಈಗಾಗಲೇ ನೋಂದಾಯಿಸಿ ಯಜಮಾನಿಯ ಬದಲಾವಣೆಗೆ ಅರ್ಜಿ ಸಲ್ಲಿಸಿದಲ್ಲಿ, ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಈ ಅರ್ಜಿ ಇತ್ಯರ್ಥಗೊಳ್ಳುವವರೆಗೂ ಗೃಹಲಕ್ಷ್ಮಿ ಯೋಜನೆಯ ಲಾಭ ತಡೆಹಿಡಿಯಲಾಗುತ್ತದೆ.

ನೀವು ಈಗಾಗಲೇ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದರೆ ಯಜಮಾನಿಯ ಸ್ಥಾನವನ್ನು ಬದಲಾವಣೆಗೆ ಅರ್ಜಿ ಸಲ್ಲಿಸಿದರೆ ಅರ್ಜಿ ಇತ್ಯರ್ಥಗೊಳ್ಳುವವರೆಗೂ ಗೃಹಲಕ್ಷ್ಮಿ ಯೋಜನೆಯ ಲಾಭ ತಡೆಹಿಡಿಯಲಾಗುತ್ತದೆ. ಆದ್ದರಿಂದ ಯೋಚಿಸಿ ತಿದ್ದುಪಡಿ ಮಾಡಲು ಅರ್ಜಿ ಸಲ್ಲಿಸಿ.

ತಿದ್ದುಪಡಿ ದಿನಾಂಕ ವಿಸ್ತರಣೆ:
ರೇಷನ್‌ ಕಾರ್ಡ್‌ತಿದ್ದುಪಡಿ ಹಾಗೂ ಸೇರ್ಪಡೆ ಮಾಡಲು ‘ಸೋಮವಾರದವರೆಗೆ ಮಾತ್ರ ಅವಕಾಶ ನೀಡಿದ್ದರು ಆದರೆ ಇವಾಗ ಸಾರ್ವಜನಿಕರ ಒತ್ತಾಯದ ಮೇರೆಗೆ ತಿದ್ದುಪಡಿ, ಸೇರ್ಪಡೆ ಮಾಡುವ ಅವಧಿಯನ್ನು ಮತ್ತಷ್ಟು ದಿನಗಳವರೆಗೆ ವಿಸ್ತರಣ ಮಾಡಲಾಗುವುದು. ಆನ್‌ಲೈನ್‌ ಅಥವಾ ಹತ್ತಿರದ ನ್ಯಾಯಬೆಲೆ ಅಂಗಡಿಗಳಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿ, ವಿಳಾಸ ಬದಲಾವಣೆಯ ಸೇವೆ ಪಡೆಯಬಹುದು,” ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಸಾರ್ವಜನಿಕ ವಿತರಣೆ (ವಿಜಿಲೆನ್ಸ್‌) ಹೆಚ್ಚುವರಿ ನಿರ್ದೇಶಕ ಜ್ಞಾನೇಂದ್ರಕುಮಾರ್‌ ಗಂಗ್ವಾರ್‌ ಅವರು ಮಾಹಿತಿ ನೀಡಿದ್ದಾರೆ.

How To Change Name In Ration Card

ಹಾಲಿ ಇರುವ ಪಡಿತರ ಚೀಟಿಯಲ್ಲಿನ ಯಾವುದೇ ಮಾಹಿತಿ ಬದಲಾವಣೆ (Karnataka Ration Card Correction) ಹಾಗೂ ಸದಸ್ಯರ ಸೇರ್ಪಡೆಗಾಗಿ ಈ ಕೇಳಗಿನ ಕಾರ್ಯವಿಧಾನವನ್ನು ಅನುಸರಿಸಬೇಕು.

  • ಹತ್ತಿರದ ಯಾವುದೇ ಬಯೋ-ಫೋಟೋ (ಗ್ರಾಮ ಒನ್‌, ಕರ್ನಾಟಕ ಒನ್‌, ಬೆಂಗಳೂರು ಒನ್‌, CSC ಕೇಂದ್ರ ಅಥವಾ ಇತರೆ ಮಾನ್ಯತೆ ಪಡೆದ ಕೇಂದ್ರ) ಸೇವಾ ಕೇಂದ್ರಕ್ಕೆ ಹೋಗಿ ನಿಮ್ಮ ರೇಷನ್‌ ಕಾರ್ಡ್‌ನ ಸ್ಥಿತಿಯನ್ನು ಪರಿಶೀಲಿಸಿ (ಗ್ರಾಮಾಂತರ ಪ್ರದೇಶದವರು ಅವರ ಗ್ರಾಮ ಪಂಚಾಯಿತಿ ಕಛೇರಿಗೆ ಹೋಗುವುದು).
  • ನಿಮ್ಮ ಪಡಿತರ ಚೀಟಿ ಚಾಲ್ತಿಯಲ್ಲಿದ್ದಲ್ಲಿ ತಮಗೆ ಈ ಕೆಳಗಿನ ಯಾವುದೇ ಬದಲಾವಣೆಗೆ (How To Change Name In Ration Card) ಅವಕಾಶವಿದೆ.
  • ವಿಳಾಸ ಬದಲಾವಣೆ, ಸದಸ್ಯರ ಹೆಸರು ಸೇರ್ಪಡೆ/ಬೇರ್ಪಡೆ, ಫೋಟೋ ಮತ್ತು ಬಯೋಮೆಟ್ರಿಕ್ ಸೇರಿಸುವುದು, ಸದಸ್ಯರ ವಿವರದಲ್ಲಿ ಯಾವುದೇ ತಿದ್ದುಪಡಿ ಇವುಗಳ ಅಗತ್ಯವಿದ್ದಲ್ಲಿ
  • ತಾವು ಈಗ ವಾಸಿಸುವ ಮನೆಯ ಇತ್ತೀಚಿನ ವಿದ್ಯುತ್ ಬಿಲ್ಲು ಮತ್ತು ಅಗತ್ಯ ಬದಲಾವಣೆಗಾಗಿ ಹೋಲಿಕೆ ದಾಖಲೆಗಳೊಂದಿಗೆ ಸೇವಾ ಕೇಂದ್ರದಲ್ಲಿಯೇ ಬದಲಾವಣೆಗಳನ್ನು ಮಾಡಿಸಿಕೊಂಡು ಕಂಪ್ಯೂಟರ್ ಮುದ್ರಿತ ಸ್ವೀಕೃತಿಯನ್ನು ಪಡೆಯಿರಿ.
  • ಈ ರೀತಿ ಬದಲಾಯಿಸುವಾಗ ನಿಮ್ಮ ಪಡಿತರ ಚೀಟಿ “ತಾತ್ಕಾಲಿಕವೇ ಅಥವಾ “ಖಾಯಂ” ಪಡಿತರ ಚೀಟಿಯೇ ಎಂದು ತಿಳಿದುಕೊಳ್ಳಿ.
  • ಖಾಯಂ ಪಡಿತರ ಚೀಟಿಯಾಗಿದ್ದಲ್ಲಿ ತಿದ್ದುಪಡಿಗಳ ನಂತರ ಸೇವಾ ಕೇಂದ್ರದಲ್ಲಿ ಪಡೆದ ಸ್ವೀಕೃತಿ ಮತ್ತು ಹಾಲಿ ಪಡಿತರ ಚೀಟಿಯೊಂದಿಗೆ ಆಹಾರ ಕಛೇರಿಗೆ ಕುಟುಂಬದ ಮುಖ್ಯಸ್ಥರು ಹೋಗಿ ಪರಿಷ್ಕೃತ ಪಡಿತರ ಚೀಟಿ ಪಡೆಯಿರಿ.
  • ತಾತ್ಕಾಲಿಕ ಪಡಿತರ ಚೀಟಿಯಾಗಿದ್ದಲ್ಲಿ, ಆಹಾರ ಕಛೇರಿಯಿಂದಲೇ ಪಡಿತರ ಚೀಟಿ ಪಡೆದುಕೊಳ್ಳಲು ತಿಳಿಸಿ ನಿಮಗೆ ಎಸ್.ಎಮ್.ಎಸ್. ಮೂಲಕ ಸಂದೇಶ ಬರುವವರೆಗೂ ಕಾಯುವುದು.
  • ತಾತ್ಕಾಲಿಕ ಪಡಿತರ ಚೀಟಿ ಹೊಂದಿರುವವರು ಖಾಯಂ ಪಡಿತರ ಚೀಟಿ ಪಡೆಯಲು SMS ಸಂದೇಶ ಬಂದ ನಂತರ ಕುಟುಂಬದ ಮುಖ್ಯಸ್ಥರು ಮಾತ್ರ ಈಗ ನಿಮ್ಮ ಬಳಿ ಇರುವ ಪಡಿತರ ಚೀಟಿಯೊಂದಿಗೆ ಕಛೇರಿಗೆ ಹೋಗಿ, ನಿಮ್ಮ ಬಯೋಮೆಟ್ರಿಕ್ ಹೊಂದಾಣಿಕೆ ಮಾಡಿ, ಈಗಿನ ಪಡಿತರ ಚೀಟಿ ವಾಪಸು ನೀಡಿ, ಹೊಸ ಪಡಿತರ ಚೀಟಿ ಶುಲ್ಕ ರೂ.20 ಪಾವತಿಸಿ ಹೊಸ ಪರಿಸ್ಕೃತ ಪಡಿತರ ಚೀಟಿ ಪಡೆಯುವಿರಿ.
  • ನಿಮ್ಮ ಪಡಿತರ ಚೀಟಿ ರದ್ದಾಗಿದ್ದಲ್ಲಿ, ಯಾವುದೇ ಬದಲಾವಣೆಗೆ ಅವಕಾಶವಿಲ್ಲ., ನೀವು ಹೊಸ ಪ.ಚೀ.ಗಾಗಿ ಆನ್ ಲೈನ್ ಅರ್ಜಿ ಸಲ್ಲಿಸಬೇಕು.

ನಿಮ್ಮ ಕುಟುಂಬವು ಈಗಿರುವ ತಾಲ್ಲೂಕು/ವಲಯದಿಂದ ಬೇರೆ ತಾಲ್ಲೂಕು/ವಲಯಕ್ಕೆ ವರ್ಗಾವಣೆಯಾಗಬೇಕಿದ್ದಲ್ಲಿ ಪಡಿತರ ಚೀಟಿಯನ್ನು ವರ್ಗಾಯಿಸುವ ವಿಧಾನ:

  • ನಿಮ್ಮದು ಹಾಲಿ ಚಾಲ್ತಿಯಲ್ಲಿರುವ ಪಡಿತರ ಚೀಟಿಯಾಗಿರಬೇಕು.
  • ನಿಮ್ಮ ಪಡಿತರ ಚೀಟಿ ವಿತರಣೆಯಾಗಿರುವ ಆಹಾರ ಕಛೇರಿಗೆ ಭೇಟಿ ನೀಡಿ, ಹಾಲಿ ಪಡಿತರ ಚೀಟಿಯೊಂದಿಗೆ ವರ್ಗಾವಣೆಗಾಗಿ ಕೋರಿಕೆ ಸಲ್ಲಿಸಿ, ಆನ್ ಲೈನ್ ವರ್ಗಾವಣೆ ಸ್ಥಳದಲ್ಲೇ ಮಾಡಿಸಿ, ಸರೆಂಡರ್ ಸರ್ಟಿಫಿಕೇಟ್ ಪಡೆಯಿರಿ. ವರ್ಗಾವಣೆಯಾಗಿ ಹೋಗುವ ತಾಲ್ಲೂಕು ಮತ್ತು ಜಿಲ್ಲೆಯ ಹೆಸರನ್ನು ತಪ್ಪಿಲ್ಲದೇ ತಿಳಿಸುವುದು ಕಡ್ಡಾಯ.
  • ಸರೆಂಡರ್ ಸರ್ಟಿಫಿಕೇಟ್ ನೊಂದಿಗೆ ನೀವೀಗ ವಾಸವಿರುವ ಹೊಸ ತಾಲ್ಲೂಕು/ವಲಯ ವ್ಯಾಪ್ತಿಯ ಯಾವುದೇ “ಸೇವಾಕೇಂದ್ರ”ಕ್ಕೆ ಹೋಗಿ, ನಿಮ್ಮ ಮೊಬೈಲ್ ನಂಬರ್, ಮನೆಯ ವಿದ್ಯುತ್ ಆರ್.ಆರ್. ನಂಬರ್, ಅಡಿಗ ಅನಿಲ ವಿವರಗಳೊಂದಿಗೆ ನಿಮ್ಮ ರೇಷನ್‌ ಕಾರ್ಡ್‌ಯ ವಿವರ ತೆರೆದು, ಅದರಲ್ಲಿ ಈಗಿನ ವಿಳಾಸ, ಕುಟುಂಬದ ಸದಸ್ಯರ ವಿವರ, ಫೋಟೋ,ಬಯೋಮೆಟ್ರಿಕ್, ಇತ್ಯಾದಿ ವಿವರಗಳನ್ನು ಪರಿಶೀಲಿಸಿ, ಅಗತ್ಯವಿದ್ದಲ್ಲಿ ತಿದ್ದುಪಡಿಗಳನ್ನು ಮಾಡಿಸಿ ಆನ್ ಲೈನ್ ಅಪ್ ಲೋಡ್ ಮಾಡಿಸಿ. ಹಾಗೂ ಈ ಬಗ್ಗೆ ಕಂಪ್ಯೂಟರ್ ಮುದ್ರಿತ ಸ್ವೀಕೃತಿ ಪಡೆಯಿರಿ.
  • ಸ್ವೀಕೃತಿಯೊಂದಿಗೆ ಸಂಬಂಧಪಟ್ಟ ಅಹಾರ ಕಛೇರಿಗೆ ಭೇಟಿ ನೀಡಿ, ಹೊಸ ರೇಷನ್‌ ಕಾರ್ಡ್‌ ಪಡೆಯಿರಿ.

ವಿಶೇಷ ಸೂಚನೆ:
1) ಹೊರ ರಾಜ್ಯದಿಂದ ಸರೆಂಡರ್ ಅಥವಾ ಡಿಲಿಷನ್ ಪತ್ರ ಪಡೆದವರು ಹೊಸ ಪಡಿತರ ಚೀಟಿಗಾಗಿ ಆನ್ ಅರ್ಜಿಯನ್ನೇ ಸಲ್ಲಿಸಬೇಕು.
2) ಪಡಿತರ ಚೀಟಿದಾರರ ಬಳಿ ಇರುವುದು ತಾತ್ಕಾಲಿಕ ಪಡಿತರ ಚೀಟಿ ಆಗಿದ್ದಲ್ಲಿ, ಅದನ್ನು ಖಾಯಂ ಗೊಳಿಸಿದ ನಂತರವೇ ವರ್ಗಾವಣೆ ಮಾಡಿಕೊಳ್ಳಲು ಅವಕಾಶವಿರುತ್ತದೆ.

ಆಹಾರ ಇಲಾಖೆ ಅಧಿಕೃತ ವೆಬ್‌ಸೈಟ್:‌ ahara.kar.nic.in

ಕೊನೆಯ ಮಾತು: Karnataka Ration Card Correction ಮಾಡುವ ಈ ಮಾಹಿತಿ ನಿಮಗೆ ಉಪಯೋಗವಾಗಿದೆ ಎಂದು ಭಾವಿಸುತ್ತೇವೆ. ನಿಮ್ಮ ಅನಿಸಿಕೆಯನ್ನು ಕೆಮೇಂಟ್ ಮಾಡಿ. ಸರ್ಕಾರಿ ಯೋಜನೆಗಳ ಮಾಹಿತಿ ಪಡೆಯಲು ನಮ್ಮ ವಾಟ್ಸ್ಆಪ್ ಗ್ರುಪ್’ಗೆ Join ಆಗಿರಿ ಅಥವಾ ನಮ್ಮ ವೆಬ್’ಸೈಟ್’ನ್ನು Subscribe ಮಾಡಿಕೊಳ್ಳಿ.

ಸರ್ಕಾರ ಇತರೆ ಯೋಜನೆಗಳು

ಉಚಿತ ಹೊಲಿಗೆ ಯಂತ್ರ ಯೋಜನೆ, ಆನ್‌ಲೈನ್‌ ಅರ್ಜಿ ಆಹ್ವಾನ

ಅನ್ನಭಾಗ್ಯ ಯೋಜನೆ: DBT Status ಚೆಕ್‌ ಮಾಡಿ

Written By Verified Author
Manjunath Pujari - Founder & Editor-in-Chief of KannadaSiri.in

Manjunath Pujari

Founder & Editor-in-Chief, KannadaSiri.in

10+ Years Exp
6,000+ Articles
B.A. RCU Belagavi

Kannada journalist from Belagavi with over 10 years of experience across print and digital media. Writes on government schemes, jobs, education, scholarships, technology, automobiles, and agriculture - making complex official information simple for everyday Kannada readers.

Leave a Comment