ಕರ್ನಾಟಕ ಸರ್ಕಾರದ ವತಿಯಿಂದ ಕಾಶಿ, ಗಯಾ, ಅಯೋಧ್ಯ ಮತ್ತು ಪ್ರಯಾಗ್‌ರಾಜ್ ಕ್ಷೇತ್ರಗಳನ್ನು ಒಳಗೊಂಡ 9 ದಿನಗಳ Karnataka Bharat Gaurav Kashi Darshan 2023 ಯಾತ್ರಾ ಪ್ಯಾಕೇಜ್ ಸಹಾಯಧನ ನೀಡುತ್ತಿದ್ದು, ಧಾರ್ಮಿಕ ಯಾತ್ರೆಗೆ ಹೋಗಬಯಸುವ ಜನರಿಗೆ ಟಿಕೇಟ್ ನೋಂದಣಿಗೆ ಸರ್ಕಾರದಿಂದ ಸಹಾಯಧನ ಸಿಗಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರವು “ಕಾಶಿ-ಗಯಾ ದರ್ಶನ” ಎಂಬ ಹೆಸರಿನ ಧಾರ್ಮಿಕ ಯಾತ್ರೆ ಯೋಜನೆಗೆ ಸಬ್ಸಿಡಿ ನೀಡುತ್ತಿದ್ದು, ಇದರ ಲಾಭ ಪಡೆದುಕೊಳ್ಳಬಹುದಾಗಿದೆ.
Karnataka Bharat Gaurav Kashi Darshan 2023
ಕರ್ನಾಟಕ ಸರ್ಕಾರದ ವತಿಯಿಂದ 9 ದಿನಗಳ ಯಾತ್ರಾ ಪ್ಯಾಕೇಜ್ ಇದಾಗಿದ್ದು, ಕಾಶಿ, ಗಯಾ, ಅಯೋಧ್ಯ ಮತ್ತು ಪ್ರಯಾಗ್‌ರಾಜ್ ಕ್ಷೇತ್ರಗಳನ್ನು ಒಳಗೊಂಡಿದೆ. ಈ ವಿಶೇಷ ರೈಲಿನ ಯಾತ್ರೆಯನ್ನು ಗಯಾ ಕ್ಷೇತ್ರದವರೆಗೆ ವಿಸ್ತರಿಸಿ ಪ್ರತಿ ಯಾತ್ರಾರ್ಥಿಗಳಿಗೆ ನೀಡುತ್ತಿರುವ ಸಹಾಯಧನವನ್ನು 5 ಸಾವಿರ ದಿಂದ ರೂ. 7500 ಗಳಿಗೆ ಹೆಚ್ಚಿಸಲಾಗಿದೆ.
ಕರ್ನಾಟಕ ಭಾರತ ಗೌರವ ಕಾಶಿ-ಗಯಾ ದರ್ಶನ ಪ್ಯಾಕೇಜ್ ಗೆ ಒಟ್ಟು 22,500 ರೂಪಾಯಿಗಳು ತಗಲಲಿದ್ದು, ಅದರಲ್ಲಿ ರೂ. 7,500 ಗಳ ಸಹಾಯಧನವನ್ನು ಕರ್ನಾಟಕ ಸರ್ಕಾರದ ವತಿಯಿಂದ ನೀಡಲಾಗುವುದರಿಂದ ಯಾತ್ರಾರ್ಥಿಗಳು ಬುಕಿಂಗ್ ಮೊತ್ತ 15,000 ರೂಪಾಯಿಗಳನ್ನು ಮಾತ್ರ ಪಾವತಿಸಬೇಕಾಗುತ್ತದೆ.
ಈ ಪ್ಯಾಕೇಜ್ ನಲ್ಲಿ 3 ಟೈರ್ ಎ.ಸಿ ರೈಲು ಪ್ರಯಾಣಿಸಲಿದ್ದು, ಊಟ, ವಸತಿ, ಸ್ಥಳೀಯ ಸಾರಿಗೆ ಮತ್ತು ದರ್ಶನದ ವ್ಯವಸ್ಥೆ ಇರುತ್ತದೆ.
- ಯಾತ್ರಾರ್ಥಿಗಳ ಆರೋಗ್ಯದ ದೃಷ್ಠಿಯಿಂದ ವೈದ್ಯಕೀಯ ಸಹಾಯ ವ್ಯವಸ್ಥೆ ಇರುತ್ತದೆ
- ಪ್ರಯಾಣಿಸುವಾಗ ಆಧುನಿಕ ಪ್ಯಾಂಟ್ರಿ ಕಾರಿನಲ್ಲಿ ತಯಾರಿಸಿದ ತಾಜಾ ಸ್ಥಳೀಯ ಆಹಾರವನ್ನು ನೀಡಲಾಗುತ್ತದೆ.
ಯೋಜನೆಯಡಿ ನಿಗದಿಪಡಿಸಲಾಗಿರುವ ದಿನಾಂಕಗಳು:
- ನಿರ್ಗಮನ ದಿನಾಂಕ 31-10-2023 – ಆಗಮನ ದಿನಾಂಕ 08-11-2023
- ನಿರ್ಗಮನ ದಿನಾಂಕ 18-11-2023 – ಆಗಮನ ದಿನಾಂಕ 26.11.2023
Karnataka Bharat Gaurav Kashi Darshan ರೈಲು ಹತ್ತುವ ಹಾಗೂ ಇಳಿಯುವ ಸ್ಥಳಗಳು
- ಯಶವಂತಪುರ
- ತುಮಕೂರು
- ಬೀರೂರು
- ದಾವಣಗೆರೆ
- ಹಾವೇರಿ
- ಹುಬ್ಬಳ್ಳಿ
- ಗದಗ್
- ಹೊಸಪೇಟೆ
- ಬಳ್ಳಾರಿ
- ರಾಯಚೂರು
Karnataka Bharat Gaurav Kashi Darshan 2023 Ticket Booking Online:
9 ದಿನಗಳ ಯಾತ್ರಾ ಪ್ಯಾಕೇಜ್ ಲಿಂಕ್: Tickets Book Online
IRTC Tickets online: https://www.irctctourism.com
Contact: +91 8595931291, 8595931292, 8595931294
ಜನರ ಧಾರ್ಮಿಕತೆಯನ್ನು ಗೌರವಿಸಲು ನೂತನ ಸರ್ಕಾರದ ಜನಪರ ನಿರ್ಧಾರಗಳು
- ಕರ್ನಾಟಕ ಭಾರತ್ ಗೌರವ್ ಕಾಶಿ-ಗಯಾ ಯಾತ್ರೆಗೆ ಸಹಾಯಧನವನ್ನು ರೂ.5,000 ಗಳಿಂದ ರೂ.7.500 ಕ್ಕೆ ಹೆಚ್ಚಿಸಲಾಗಿದೆ.
- ದೇವಾಲಯಗಳಿಗೆ ನೀಡುತ್ತಿರುವ ವಾರ್ಷಿಕ ನಗದು ಅನುದಾನವನ್ನು ಕನಿಷ್ಠ ರೂ.35 ಗಳಿಂದ ಗರಿಷ್ಠ ರೂ.15,000/-ಗಳಿಗೆ ಹೆಚ್ಚಿಸಲಾಗಿದೆ.
- ಅರ್ಚಕರ ವರ್ಷಾಸನ ವಾರ್ಷಿಕ ಮೊತ್ತವನ್ನು ರೂ.48,000 ಗಳಿಂದ ರೂ.60,000 ಗಳಿಗೆ ಹೆಚ್ಚಿಸಲಾಗಿದೆ.
- ತಸ್ತೀಕ್ ಮತ್ತು ವರ್ಷಾಸನ ಹಣವನ್ನು ನೇರವಾಗಿ ಅರ್ಚಕರ ಖಾತೆಗೆ ವರ್ಗಾವಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ.
- ಮೈಸೂರಿನ ಶ್ರೀ ಚಾಮುಂಡೇಶ್ವರಿ ದೇವಾಲಯಕ್ಕೆ ಆಗಮಿಸುವ ಭಕ್ತಾದಿಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಸಲುವಾಗಿ ಚಾಮುಂಡಿ ಬೆಟ್ಟ, ಅಭಿವೃದ್ಧಿ ಪ್ರಾಧಿಕಾರ ರಚಿಸಲು ಕ್ರಮ ವಹಿಸಲಾಗಿದೆ.
- ದೇವಾಲಯಗಳಲ್ಲಿ ಹಿರಿಯ ನಾಗರೀಕರಿಗೆ ಶೀಘ್ರ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.
- ದೇವಾಲಯಗಳಿಗೆ ಶಿಶುಗಳೊಂದಿಗೆ ಆಗಮಿಸುವ ತಾಯಂದಿರು ಶಿಶುಗಳಿಗೆ ಆರೈಕೆ ಮಾಡಲು ಹಾಗೂ ಹಾಲುಣಿಸಲು ಅನುಕೂಲವಾಗುವಂತೆ ಪ್ರತ್ಯೇಕವಾಗಿ ಹಾಲುಣಿಸುವ ಕೊಠಡಿಯನ್ನು ನಿರ್ಮಿಸಲು ಆದೇಶಿಸಲಾಗಿದೆ.
- ದೇವಾಲಯಗಳ ನಿರ್ಮಾಣಕ್ಕಾಗಿ ಪರಿಣಿತ ಶಿಲ್ಪಿಗಳನ್ನು ರೂಪುಗೊಳಿಸಲು ಕೋಲಾರ ಜಿಲ್ಲೆಯಲ್ಲಿ ಶಿಲ್ಪಕಲಾ ತರಬೇತಿ ಕೇಂದ್ರವನ್ನು ಪ್ರಾರಂಭಿಸಲು ಕ್ರಮವಹಿಸಲಾಗಿದೆ.
ಇತರೆ ಮಾಹಿತಿಗಳನ್ನು ಓದಿ