ಎಲ್ಲರಿಗೂ ನಮಸ್ಕಾರ, ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್. ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ (Karnataka Free Laptop Scheme 2023) ನೀಡಲು ಅರ್ಹರಿಂದ ಅರ್ಜಿ ಕರೆಯಲಾಗಿದೆ. ಉಚಿತ ಲ್ಯಾಪ್‌ಟಾಪ್‌ಗಾಗಿ ಅರ್ಜಿ ಸಲ್ಲಿಸುವ ವಿಧಾನ, ಬೇಕಾಗುವ ದಾಖಲೆಗಳು ಮತ್ತು ಯಾರು ಅರ್ಹರು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ.
ಹೌದು, ಕರ್ನಾಟಕ ರಾಜ್ಯ ಸರ್ಕಾರ ಪ್ರಥಮ ಪಿಯುಸಿ ಮತ್ತು ದ್ವಿತೀಯ ಪಿಯುಸಿ ಕೋರ್ಸ್‌ನಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ವಿತರಿಸಲು ನಿರ್ಧರಿಸಿದ್ದು, ಈ ಕೇಳಗಿನಂತೆ ಮಾಹಿತಿಯಿದೆ.
Karnataka Free Laptop Scheme 2023
ಕರ್ನಾಟಕ ರಾಜ್ಯ ಕಾರ್ಮಿಕ ಇಲಾಖೆಯಿಂದ ರಾಜ್ಯ ಕಟ್ಟಡ ಮತ್ತು ಇತರೆ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನೋಂದಣಿ ಮಾಡಿಕೊಂಡಿರುವ ಕಟ್ಟಡ ಕಾರ್ಮಿಕರ ಮಕ್ಕಳಿಗಾಗಿ ಉಚಿತ ಲ್ಯಾಪ್‌ಟಾಪ್ (Free Laptop) ವಿತರಿಸಲು 2023-24ನೇ ಸಾಲಿನಲ್ಲಿ ಪ್ರಥಮ ಪಿಯುಸಿ ಮತ್ತು ದ್ವಿತೀಯ ಪಿಯುಸಿ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ವಿದ್ಯಾರ್ಥಿಗಳಿಂದ ಉಚಿತ ಲ್ಯಾಪ್‌ಟಾಪ್‌ಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಈ ಸೌಲಭ್ಯವನ್ನು ಪಡೆಯಲು ಕಟ್ಟಡ ಮತ್ತು ಇತರೆ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಮಾರ್ಚ್ 31, 2023ರ ಒಳಗಾಗಿ ನೋಂದಣಿ ಮಾಡಿಕೊಂಡಿರಬೇಕು. ಅತಂಹ ಕಟ್ಟಡ ಕಾರ್ಮಿಕರ ಮಕ್ಕಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
How to Apply Karnataka Free Laptop Scheme 2023
ಹಿರಿಯ ಕಾರ್ಮಿಕ ನಿರೀಕ್ಷಕರು, ಕಾರ್ಮಿಕ ನಿರೀಕ್ಷಕರು ಅಥವಾ ತಾಲೂಕಾ ಕಾರ್ಮಿಕ ನಿರೀಕ್ಷಕರ ಕಛೇರಿಯಿಂದ ಅರ್ಜಿ ನಮೂನೆ ಪಡೆದು ಅಗತ್ಯ ದಾಖಲೆಗಳೊಂದಿಗೆ ಸೆಪ್ಟೆಂಬರ್ 26 ರ ಒಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕಾರ್ಮಿಕ ಅಧಿಕಾರಿಯವರ ಕಛೇರಿ, ಉಪ ವಿಭಾಗ-1, ಬೆಂಗಳೂರು. ಕರ್ನಾಟಕ ರಾಜ್ಯ ಕಾರ್ಮಿಕ ಅಧ್ಯಯನ ಸಂಸ್ಥೆಯ ಕಟ್ಟಡ, ಮೊದಲನೇ ಮಹಡಿ, ಮಂಜುನಾಥ ನಗರ ಬಾಗಲಗುಂಟೆ ಬೆಂಗಳೂರು -73 ಅಥವಾ ದೂರವಾಣಿ ಸಂಖ್ಯೆ 9845587605, 8105084941 ಮೂಲಕ ಸಂಪರ್ಕಿಸಬಹುದು.
ಬೇಕಾಗುವ ದಾಖಲೆಗಳು
- ರಾಜ್ಯ ಕಟ್ಟಡ ಮತ್ತು ಇತರೆ ಕಾರ್ಮಿಕ ಕಲ್ಯಾಣ ಮಂಡಳಿ ನೀಡುವ ನೋಂದಾವಣೆ ಪ್ರಮಾಣ ಪತ್ರ (Labour Card).
- ಪಿಯುಸಿ ತರಗತಿಗೆ ಪ್ರವೇಶ ಪಡೆದಿರುವ ದಾಖಲೆ
- ಆಧಾರ್ ಕಾರ್ಡ್
- ಇತ್ತೀಚಿನ ಭಾವಚಿತ್ರ
- ಜಾತಿ / ಆದಾಯ ಪ್ರಮಾಣ ಪತ್ರ
- ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ
- ವಾಸಸ್ಥಳ ದೃಢೀಕರಣ ಪ್ರಮಾಣ ಪತ್ರ
- ಇತರೆ
ಈ ಲೇಖನ ನಿಮಗೆ ಉಪಯೋಗವಾಗಿದೆ ಎಂದ ಭಾವಿಸುತ್ತೇವೆ. ಬೇರೆಯರಿಗೂ ಈ ಲೇಖನವನ್ನು ಶೇರ್ ಮಾಡಿ ಹಾಗೂ ನಮ್ಮ ವಾಟ್ಸ್‌ಆಪ್ ಗ್ರುಪ್‌ಗೆ ಜಾಯಿನ್ ಆಗಿ. ಹಾಗೆಯೆ ಪ್ರತಿಯೊಂದು ಮಾಹಿತಿ ಪಡೆಯಲು ನಮ್ಮ Notification ಆನ್ ಮಾಡಿಕೊಳ್ಳಿ.
ಇತರೆ ಮಾಹಿತಿಗಳನ್ನು ಓದಿ
ವಿದ್ಯಾರ್ಥಿಗಳಿಗೆ 20,000 ರೂ. ಪ್ರೋತ್ಸಾಹ ಧನ ಸಹಾಯಕ್ಕಾಗಿ ಅರ್ಜಿ ಆಹ್ವಾನ
Thanks for this offer 🙏🙏
This is helpful for poor people