ಕರ್ನಾಟಕ ಲೋಕಸೇವಾ ಆಯೋಗವು ಲೋಕೋಪಯೋಗಿ ಇಲಾಖೆಯಲ್ಲಿನ ಜೂನಿಯರ್ ಇಂಜಿನಿಯರ್ (Karnataka PWD JE Result 2022) ಹುದ್ದೆಗಳ ನೇಮಕಾತಿಗೆ 2021 ರ ಡಿಸೆಂಬರ್ 13 ಮತ್ತು 15 ರಂದು ಲಿಖಿತ ಪರೀಕ್ಷೆಯನ್ನು ನಡೆಸಲಾಗಿತ್ತು. ಇಂದು (ಸೆ.23) PWD JE ಹುದ್ದೆಗಳ ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ KPSC ಪ್ರಕಟಿಸಲಾಗಿದೆ.
KPSC ಯು 2020 ರ ಜುಲೈ 30 ರಂದು PWD ಇಲಾಖೆಯಲ್ಲಿ ಖಾಲಿ ಇದ್ದ 330 ಕಿರಿಯ ಇಂಜಿನಿಯರ್ (ಸಿವಿಲ್) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿತ್ತು. ಅದರಂತೆ JE ಪರೀಕ್ಷೆ ಬರೆದ ಅಭ್ಯರ್ಥಿಗಳು ತಾತ್ಕಾಲಿಕ ಪಟ್ಟಿಯನ್ನು ನೋಡಬಹುದು.
How to Check Karnataka PWD JE Result 2022
- ದಯವಿಟ್ಟು KPSC ಯ ಅಧಿಕೃತ ವೆಬ್‌ಸೈಟ್ kpsc.kar.nic.in ಗೆ ಭೇಟಿ ನೀಡಿ.
- “ಹೊಸದು ಏನು?” ಎಂಬ ಶೀರ್ಷಿಕೆಯ ವಿಭಾಗದಲ್ಲಿ PWD JE ಫಲಿತಾಂಶದ ಬಗ್ಗೆ ಮಾಹಿತಿ ಇರುತ್ತದೆ.
- ಅಲ್ಲಿ ನಿಮಗೆ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲಾಗಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
- PDF ಡೌನ್‌ಲೋಡ್ ಮಾಡಿಕೊಂಡು ನಿಮ್ಮ ಹೆಸರು ಅಥವಾ ನಿಮ್ಮ ಅಪ್ಲಿಕೇಶನ್ ನಂಬರ್ ಇದೆಯೇ ಎಂಬುದನ್ನು ಪರಿಶೀಲಿಸಬಹುದು.