KCET Admit Card 2025: ಸಿಇಟಿ-2025 ಪರೀಕ್ಷೆಯ ಪ್ರವೇಶ ಪತ್ರ ಬಿಡುಗಡೆ, ಡೌನ್‌ಲೋಡ್ ವಿಧಾನ ಇಲ್ಲಿದೆ

KCET Admit Card 2025: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) 2025ರ ಸಾಮಾನ್ಯ ಪ್ರವೇಶ ಪರೀಕ್ಷೆಗೆ (UGCET-25) ಸಂಬಂಧಿಸಿದ ಪ್ರವೇಶ ಪತ್ರವನ್ನು ಬಿಡುಗಡೆ ಮಾಡಿದೆ. ಈ ಪರೀಕ್ಷೆಗೆ ನೋಂದಾಯಿಸಿಕೊಂಡಿರುವ ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರವನ್ನು KEAನ ಅಧಿಕೃತ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.

KEA ಈ ಬಾರಿ ಅಭ್ಯರ್ಥಿಗಳಿಗೆ ಅಭ್ಯಾಸಕ್ಕೆ ಸಹಾಯವಾಗುವಂತೆ ಪ್ರವೇಶ ಪತ್ರದ ಜೊತೆಗೆ ಮಾದರಿ OMR ಶೀಟ್ ಅನ್ನು ಸಹ ಒದಗಿಸಿದೆ. ಈ ಮಾದರಿ ಶೀಟ್‌ನೊಂದಿಗೆ ಅಭ್ಯರ್ಥಿಗಳು ಪರೀಕ್ಷೆಗೆ ಮೊದಲೇ ಅಭ್ಯಾಸ ಮಾಡಿಕೊಳ್ಳಬಹುದು, ಇದರಿಂದ ಪರೀಕ್ಷಾ ಸಮಯದಲ್ಲಿ ತಪ್ಪುಗಳನ್ನು ತಪ್ಪಿಸಲು ಸಾಧ್ಯವಾಗುತ್ತದೆ. ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಲು ಅಭ್ಯರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಮತ್ತು ಪಾಸ್‌ವರ್ಡ್ ಬಳಸಿಕೊಂಡು ಲಾಗಿನ್ ಮಾಡಿ UGCET Admit Card ಡೌನ್‌ಲೋಡ್ ಮಾಡಿಕೊಳ್ಳಬಹುದು.

KCET Admit Card 2025 Download ಮಾಡುವ ವಿಧಾನ:

ಪ್ರವೇಶ ಪತ್ರವನ್ನು ಪಡೆಯಲು ಈ ಕೆಳಗಿನ ಹಂತಗಳನ್ನು ಅನುಸರಿಸಿ:

  1. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: cetonline.karnataka.gov.in
  2. ಮುಖಪುಟದಲ್ಲಿ “KCET 2025 Admit Card” ಲಿಂಕ್ ಮೇಲೆ ಕ್ಲಿಕ್ ಮಾಡಿ.
  3. ನಿಮ್ಮ ನೋಂದಣಿ ಸಂಖ್ಯೆ, ಪಾಸ್‌ವರ್ಡ್ ಮತ್ತು Captcha ನಮೂದಿಸಿ.
  4. “Login” ಬಟನ್ ಒತ್ತಿ, ಪ್ರವೇಶ ಪತ್ರವನ್ನು ಪರಿಶೀಲಿಸಿ.
  5. ಡೌನ್‌ಲೋಡ್ ಮಾಡಿ ಪ್ರಿಂಟೌಟ್ ತೆಗೆದುಕೊಳ್ಳಿ.

ಪರೀಕ್ಷೆಯ ವಿವರ:

  • ದಿನಾಂಕ: ಏಪ್ರಿಲ್ 15, 16 ಮತ್ತು 17, 2025
  • ಸಮಯ: ಎರಡು ಸೆಷನ್‌ಗಳಲ್ಲಿ Shift-1: ಬೆಳಗ್ಗೆ 10:30 ರಿಂದ 11:50 ರವರೆಗೆ ಮತ್ತು Shift-2: ಮಧ್ಯಾಹ್ನ 2:30 ರಿಂದ 3:50 ರವರೆಗೆ
  • ಪರೀಕ್ಷಾ ಮಾದರಿ: ವಸ್ತುನಿಷ್ಠ ಬಹು ಆಯ್ಕೆ ಪ್ರಶ್ನೆಗಳು (MCQs)

KCET Admit Card 2025 Link: Download
Official Website: cetonline.karnataka.gov.in/kea

ಇತರೆ ಮಾಹಿತಿ ಓದಿ:

ದ್ವಿತೀಯ ಪಿಯುಸಿ ಫಲಿತಾಂಶ 2025, ಈ ದಿನ ಬಿಡುಗಡೆ..!

ಗೃಹಲಕ್ಷ್ಮೀ ಯೋಜನೆಯ ಮತ್ತೊಂದು ಕಂತಿನ 2,000 ರೂ. ಹಣ ಜಮಾ

PM Kisan DBT: PM ಕಿಸಾನ್ ಯೋಜನೆಯ 2,000 ರೂ. ಹಣ ಬಿಡುಗಡೆ

Written By Verified Author
Manjunath Pujari - Founder & Editor-in-Chief of KannadaSiri.in

Manjunath Pujari

Founder & Editor-in-Chief, KannadaSiri.in

10+ Years Exp
6,000+ Articles
B.A. RCU Belagavi

Kannada journalist from Belagavi with over 10 years of experience across print and digital media. Writes on government schemes, jobs, education, scholarships, technology, automobiles, and agriculture - making complex official information simple for everyday Kannada readers.

Leave a Comment