ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಸರ್ಕಾರದಿಂದ ಹಸಿರು ನಿಶಾನೆ. ಗೃಹಲಕ್ಷ್ಮೀ ಯೋಜನೆ (Gruha Lakshmi scheme Karnataka) ಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು 19-07-2023 ರಂದು ಜಾರಿ ಮಾಡಿದ್ದಾರೆ. ಅಂದು ಸಂಜೆ ವಿಧಾನ ಸೌಧದ ಬ್ಯಾಂಕ್ವೇಟ್ ಹಾಲಿನಲ್ಲಿ ಈ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಲಾಯಿತು.
ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರೀಯೆ ಆರಂಭವಾಗಿದೆ. ನೀವೆಲ್ಲರು ಅರ್ಜಿ ಸಲ್ಲಿಸುವ ಮೊದಲು ಈ ಕೇಳಗಿನ ವಿಚಾರಗಳನ್ನು ತಿಳಿದಿಕೊಳ್ಳುವುದು ಉತ್ತಮ.
Gruha Lakshmi Scheme Karnataka: ಈ ದಾಖಲೆಗಳಿದ್ದರೆ ಸಾಕು.
ಗೃಹ ಲಕ್ಷ್ಮಿ ಯೋಜನೆಯ ಅರ್ಜಿ ಭರ್ತಿ ಮಾಡಲು ಕೆಲವೆ ದಾಖಲೆಗಳು ಬೇಕಾಗಿದ್ದು, ಅವು ಈ ಕೇಳಗಿನಂತಿವೆ.
- ಪಡಿತರ ಕಾರ್ಡ್ ಸಂಖ್ಯೆ
- ಆಧಾರ ಸಂಖ್ಯೆ
- ಮನೆ ಯಜಮಾನಿಯ ಆಧಾರ ಸಂಖ್ಯೆ
- ಅವರ ಪತಿಯ ಆಧಾರ ಸಂಖ್ಯೆ
- ಬ್ಯಾಂಕ್ ಖಾತೆಯ ವಿವರ
- ಮೊಬೈಲ್ ಸಂಖ್ಯೆ
ಪತಿ ಅಥವಾ ಪತ್ನಿ ಆದಾಯ ತೇರಿಗೆ ಮತ್ತು GST Returns ಪಾವತಿಸುತ್ತಿದ್ದರೆ, ಈ ಯೋಜನೆಗೆ ಅರ್ಜಿ ಸಲ್ಲಿಸಲು ಅನರ್ಹರಾಗಿರುತ್ತೀರಿ.
ಗೃಹಲಕ್ಷ್ಮಿ ಯೋಜನೆಯ ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?
ಈ ಯೋಜನೆಯ ಸೌಲಭ್ಯ ಪಡೆಯಲು ಸದ್ಯಕ್ಕೆ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಹಾಗೂ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಉಚಿತವಾಗಿ ನೋಂದಾಯಿಸಿಕೊಳ್ಳಬಹುದು ಅಥವಾ ಸ್ವಯಂಸೇವಕ “ಪ್ರಜಾಪ್ರತಿನಿಧಿಗಳು” ಮನೆ ಮನೆಗೆ ತೆರಳಿ ಉಚಿತವಾಗಿ ನೋಂದಣಿ ಮಾಡಿಕೊಳ್ಳುತ್ತಾರೆ ಎಂದು ಸರ್ಕಾರ ತಿಳಿಸಿದೆ.
ನಿಮ್ಮ ಮೊಬೈಲ್‌ಗೆ ಗೃಹಲಕ್ಷ್ಮೀ ಯೋಜನೆ (Gruha Lakshmi scheme Karnataka) ನೋಂದಣಿ ವೇಳಾಪಟ್ಟಿ ಬಂದಿಲ್ಲವೆಂದರೆ ಈ 8147500500 ಹಾಗೂ 8277000555 ಸಹಾಯವಾಣಿ ನಂಬರ್‌ಗೆ ನಿಮ್ಮ ರೇಷನ್ ಕಾರ್ಡ್ ನಂಬರ್‌ನ್ನು SMS ಮಾಡಿ. ಆಗ ನಿಮಗೆ ಸರ್ಕಾರದ ಅಧಿಕೃತ SMS ಬರುತ್ತದೆ.
ಗೃಹಲಕ್ಷ್ಮೀ: ಅರ್ಜಿ ಸಲ್ಲಿಕೆಗೆ ಹಣ ಪಡೆದರೆ ಕ್ರಿಮಿನಲ್ ಕೇಸ್..?
Gruha Lakshmi scheme Karnataka ಮುಖ್ಯಾಂಶಗಳು
- ಪಡಿತರ ಕಾರ್ಡ್ (Ration Card) ಹೊಂದಿರುವ ಕುಟುಂಬದ ಯಜಮಾನಿ ಖಾತೆಗೆ ಹಣ ಜಮೆ,
- ಗ್ರಾಮ ಓನ್ ಕರ್ನಾಟಕ ಒನ್, ಬೆಂಗಳೂರು ಒನ್ ಮತ್ತು ಬಾಪೂಜಿ ಸೇವಾ ಕೇಂದ್ರದಲ್ಲಿ ಉಚಿತ ನೋಂದಣಿ
- ಅಧಿಕೃತ “ಪ್ರಜಾ ಪ್ರತಿನಿಧಿ” ಸ್ವಯಂ ಸೇವಕರು ಕೂಡ ನಿಮ್ಮಮನೆ ಬಾಗಿಲಲ್ಲೇ ಉಚಿತವಾಗಿ ನೋಂದಣಿ ಮಾಡುತ್ತಾರೆ.
- ನೋಂದಣಿಗೆ ಬ್ಯಾಂಕ್ ಪಾಸ್‌ಬುಕ್ ಪ್ರತಿ, ಪಡಿತರ ಕಾರ್ಡ್ ಸಂಖ್ಯೆ ಯಜಮಾನಿಯ ಮತ್ತು ಪತಿಯ ಆಧಾರ್ ಕಾರ್ಡ್ ಪ್ರತಿ ಹಾಗೂ ಮೊಬೈಲ್ ಸಂಖ್ಯೆ ಅಗತ್ಯವಿರುತ್ತದೆ.
- ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅರ್ಜಿ ಸಲ್ಲಿಕೆಗೆ ಚಾಲನೆ ನೀಡಿದರು.
ಮನೆಯ ಯಜಮಾನಿಯ ಯಾರೆಂದು ತಿಳಿಯುವುದು ಹೇಗೆ?
ಸರ್ಕಾರದ ಅಧಿಸೂಚನೆಯ ಪ್ರಕಾರ ಪಡಿತರ ಚೀಟಿ (Ration Card) ಯಲ್ಲಿ ಕುಟುಂಬದ ಮುಖ್ಯಸ್ಥೆ ಎಂದು ಗುರುತಿಸಿರಬೇಕು. ಕುಟುಂಬದ ಯಜಮಾನಿ ಎಂದು ತಿಳಿದುಕೊಳ್ಳುವುದು ಹೇಗೆ? ನಿಮಗೆ ಗೊತ್ತಿಲ್ಲವೇ ಹಾಗಿದ್ದರೆ ಈ ಕೇಳಗಿನ ವಿಧಾನದ ಮೂಲಕ ತಿಳಿದುಕೊಳ್ಳಿ.
- Step-1: ಮೊದಲಿಗೆ mahitikanaja.karnataka.gov.in ಭೇಟಿ ನೀಡಿ.
- Step-2: Mahiti Kanaja ವೆಬ್‌ಸೈಟ್‌ನಲ್ಲಿ ಮೇಲೆ ಇಲಾಖೆಗಳು ಎಂಬ ಆಯ್ಕೆ ಇರುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ.

- Step-3: ಅಲ್ಲಿಯೆ ಕೇಳಗೆ Serche Box ಇರುತ್ತದೆ. ಅಲ್ಲಿ ಇಲಾಖೆ ಹುಡುಕಿ ಅಂತ ಬರೆಯಲಾಗಿದೆ ಅದರಲ್ಲಿ Food ಅಂತ Type ಮಾಡಿ. ಅಲ್ಲಿಯೆ ಕೇಳಗೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಅಂತ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.

- Step-4: ಎರಡು ಆಯ್ಕೆಗಳಿವೆ “ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ” ಯನ್ನು ಆಯ್ಕೆ ಮಾಡಿ.

- Step-5: ಮತ್ತೊಂದು ಪುಟ ತೆರೆಯುತ್ತದೆ ಅಲ್ಲಿರುವ “ಪಡಿತರ ಚೀಟಿ – ಪ್ರತ್ಯೇಕವಾಗಿ” ಎಂಬುದರ ಮೇಲೆ ಕ್ಲಿಕ್ ಮಾಡಿ.

- Step-6: ಇನ್ನೊಂದು ಪುಟ ಓಪನ್ ಆಗುತ್ತೆ ಅದಲ್ಲಿ ನಿಮ್ಮ ಜಿಲ್ಲೆ ಯನ್ನು ಆಯ್ಕೆ ಮಾಡಿ ಮತ್ತು ನಿಮ್ಮ ಪಡಿತರ ಚೀಟಿ ಸಂಖ್ಯೆಯನ್ನು ಅಲ್ಲಿ ನಮೂದಿಸಿ. ಸಲ್ಲಿಸಿ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ.

- Step-7: ನಿಮ್ಮ ಪಡಿತರ ಚೀಟಿಯಲ್ಲಿರುವ ಕುಟುಂಬದ ಸದಸ್ಯರ ವಿವರಗಳು ಇರುತ್ತದೆ. ಹೆಸರು ಮತ್ತು ಇತರೆ ಎಲ್ಲ ಮಾಹಿತಿ ಲಭ್ಯವಾಗುತ್ತದೆ. ಅದರಲ್ಲಿ ನಿಮ್ಮ ಕುಟುಂಬದ ಮುಖ್ಯಸ್ಥರು ಯಾರಿದ್ದಾರೆ ಎಂಬುದನ್ನು ಮೊದಲಿಗೆ ಗುರುತಿಸಲಾಗಿದೆ. ಕುಟುಂಬದ ಮುಖ್ಯಸ್ಥರು ಮಹಿಳೆಯಾಗಿದ್ದರೆ ಅಂತವರು ಅರ್ಜಿ ಸಲ್ಲಿಸಬಹುದು.

ಪ್ರಮುಖ ಲಿಂಕ್‌ಗಳು:
ವೆಬ್‌ಸೈಟ್ ಲಿಂಕ್: ಇಲ್ಲಿ ಕ್ಲಿಕ್ ಮಾಡಿ
ಮಾಹಿತಿ ಕಣಜ ಅಧಿಕೃತ ವೆಬ್‌ಸೈಟ್: mahitikanaja.karnataka.gov.in
“ಗೃಹ ಲಕ್ಷ್ಮೀ” ಯೋಜನೆ 2023 ಅರ್ಜಿ ಮಾಹಿತಿ
ಕೊನೆಯ ಮಾತು: ಗೃಹಲಕ್ಷ್ಮೀ ಯೋಜನೆ (Gruha Lakshmi scheme Karnataka) ಯ ಕುರಿತ ಈ ಲೇಖನ ನಿಮಗೆ ಸಹಾಯವಾಗಿದೆ ಎಂದು ಭಾವಿಸುತ್ತೇವೆ. ಸರ್ಕಾರದ ಯೋಜನೆಗಳ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸ್‌ಆಪ್ ಗ್ರೂಪ್‌ಗೆ ಅಥವಾ ಟೆಲಿಗ್ರಾಮ್ ಗ್ರೂಪ್‌ಗೆ ಸೇರಬಹುದು. ಧನ್ಯವಾದಗಳು.
ಸರ್ಕಾರ ಇತರೆ ಯೋಜನೆಗಳು
Application form for guruha Laxmi