ವಿದ್ಯಾರ್ಥಿಗಳಿಗೆ ವಾರ್ಷಿಕ 1.5 ಲಕ್ಷ ವಿದ್ಯಾರ್ಥಿವೇತನ | Kotak Kanya Scholarship 2025 Apply Online

ಎಲ್ಲರಿಗೂ ನಮಸ್ಕಾರ, ಕೋಟಕ್ ಕನ್ಯಾ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬೇಕೆ..? ಯಾರು Kotak Kanya Scholarship 2025 ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಬಹುದು..? ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಎಷ್ಟು ವಿದ್ಯಾರ್ಥಿವೇತನ ದೊರೆಯಲಿದೆ..? ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ ಸೇರಿದಂತೆ ಹೆಚ್ಚಿನ ಮಾಹಿತಿಯನ್ನು ನೀಡಲಾಗಿದೆ ಓದಿರಿ.

ಕೋಟಕ್ ಕನ್ಯಾ ವಿದ್ಯಾರ್ಥಿವೇತನವು ಕೋಟಕ್ ಮಹೀಂದ್ರಾ ಗ್ರೂಪ್ ವತಿಯಿಂದ ನೀಡುತ್ತಾರೆ. ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಸೇರಿದ ಕಡಿಮೆ ಆದಾಯ ಹೊಂದಿದ ಕುಟುಂಬಗಳಿಗೆ ಸೇರಿದ ಪ್ರತಿಭಾನ್ವಿತ ಹೆಣ್ಣು ಮಕ್ಕಳಿಗೆ ನೀಡುತ್ತಾರೆ. 12 ನೇ ತರಗತಿಯ ನಂತರದ ವೃತ್ತಿಪರ ಕೋರ್ಸುಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

2025-26ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ NIRF/NAAC ನಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ವೃತ್ತಿಪರ ಪದವಿ ಪದವಿಗಳಾದ ಎಂಜಿನಿಯರಿಂಗ್, MBBS, ಇಂಟಿಗ್ರೇಟೆಡ್ LLB (5 ವರ್ಷ), ಇಂಟಿಗ್ರೇಟೆಡ್ BS-MS/BS-Research, ISER, IISC (ಬೆಂಗಳೂರು) ಅಥವಾ ಇತರ ವೃತ್ತಿಪರ ಕೋರ್ಸ್‌ಗಳಲ್ಲಿ (ವಿನ್ಯಾಸ, ವಾಸ್ತುಶಿಲ್ಪ, ಇತ್ಯಾದಿ) ಮಾನ್ಯತೆ ಪಡೆದ ಪದವಿ ಕಾರ್ಯಕ್ರಮಗಳ ಮೊದಲ ವರ್ಷಕ್ಕೆ ಪ್ರವೇಶ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಲು‌ ಅರ್ಹರು.

ಪ್ರಯೋಜನಗಳು:
ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅವರ ವೃತ್ತಿಪರ ಪದವಿ ಕೋರ್ಸ್/ಪದವಿ ಪೂರ್ಣಗೊಳ್ಳುವವರೆಗೆ ವರ್ಷಕ್ಕೆ 1.5 ಲಕ್ಷ ವಿದ್ಯಾರ್ಥಿವೇತನ ಮೊತ್ತವನ್ನು ನೀಡಲಾಗುತ್ತದೆ.

Kotak Kanya Scholarship 2025 ಅಗತ್ಯ ದಾಖಲೆಗಳು:

  • ಆಧಾರ್ ಕಾರ್ಡ್
  • 12 ನೇ ತರಗತಿ ಅಂಕಪಟ್ಟಿ
  • ಪೋಷಕರ ಆದಾಯ ಪುರಾವೆ
  • ವಿದ್ಯಾರ್ಥಿಯ ಕಾಲೇಜಿನ ಪ್ರಮಾಣಪತ್ರ
  • ಕಾಲೇಜು ಸೀಟು ಹಂಚಿಕೆ ದಾಖಲೆ
  • ಕಾಲೇಜು ಪ್ರವೇಶ ಪರೀಕ್ಷೆಯ ಅಂಕಪಟ್ಟಿ
  • ಬ್ಯಾಂಕ್ ಪಾಸ್‌ಬುಕ್
  • ಪಾಸ್‌ಪೋರ್ಟ್ ಗಾತ್ರದ ಪೋಟೋ

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 31-12-2025

ಪ್ರಮುಖ ಲಿಂಕ್ ಗಳು:
ಅರ್ಜಿ ಸಲ್ಲಿಕೆ ಲಿಂಕ್: Apply ಮಾಡಿ
ಅಧಿಕ ವೆಬ್ ಸೈಟ್: www.buddy4study.com

SSP ವಿದ್ಯಾರ್ಥಿವೇತನ 2025, ಆನ್‌ಲೈನ್‌ ಅರ್ಜಿ ಆಹ್ವಾನ

Prize Money Scholarship 2025

Written By Verified Author
Manjunath Pujari - Founder & Editor-in-Chief of KannadaSiri.in

Manjunath Pujari

Founder & Editor-in-Chief, KannadaSiri.in

10+ Years Exp
6,000+ Articles
B.A. RCU Belagavi

Kannada journalist from Belagavi with over 10 years of experience across print and digital media. Writes on government schemes, jobs, education, scholarships, technology, automobiles, and agriculture - making complex official information simple for everyday Kannada readers.

Leave a Comment