ಎಲ್ಲರಿಗೂ ನಮಸ್ಕಾರ, ನೀವು ಕೋಟಕ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬೇಕೆ? Kotak Scholarship 2024 ಅರ್ಜಿ ಸಲ್ಲಿಸಲು ಯಾವೇಲ್ಲಾ ದಾಖಲೆಗಳು ಬೇಕಾಗುತ್ತವೆ, ಶೈಕ್ಷಣಿಕ ಅರ್ಹತೆ, ಹಾಗೂ ಅರ್ಜಿ ಸಲ್ಲಿಕೆ ದಿನಾಂಕ ಮುಂತಾದ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಿದ್ದೇವೆ.
ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗದೆ ಶೈಕ್ಷಣಿಕ ಗುರಿಯನ್ನು ತಲುಪಲು ಹಣಕಾಸಿನ ನೇರವು ನೀಡಲು ಕೋಟಕ್ ಸುರಕ್ಷಾ ವಿದ್ಯಾರ್ಥಿವೇತನನ್ನು ನೀಡಲಾಗುತ್ತದೆ. ಅರ್ಹ ಹಾಗೂ ಆಸಕ್ತ ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
9 ರಿಂದ 12 ನೇ ತರಗತಿ ವಿದ್ಯಾರ್ಥಿಗಳು ಹಾಗೂ ಸಾಮಾನ್ಯ/ವೃತ್ತಿಪರ ಪದವಿ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿಕಲಚೇತನ ವಿದ್ಯಾರ್ಥಿಗಳಿಗೆ 50,000 ರೂ. ರಿಂದ 1,00,000 ರೂ ಶೈಕ್ಷಣಿಕ ಸಹಾಯಧನವನ್ನು ನೀಡಲಾಗುತ್ತಿದೆ.
Kotak Scholarship 2024 ಮೊತ್ತ:
- 9 ನೇ ತರಗತಿ ಯಿಂದ 12 ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ: 50,000 ರೂ.
- ಸಾಮಾನ್ಯ ಹಾಗೂ ವೃತ್ತಿಪರ ಪದವಿ ಕೋರ್ಸ್‌ಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ: 1,00,000 ರೂ.
Kotak Suraksha Scholarship 2024 ಅಗತ್ಯ ದಾಖಲೆಗಳು:
- ಆಧಾರ್ ಕಾರ್ಡ್
- ಪ್ರಸ್ತುತ ವರ್ಷದ ಪ್ರವೇಶ ಪುರಾವೆ (ಶುಲ್ಕ ರಸೀದಿ/ಪ್ರವೇಶ ಪತ್ರ/ಸಂಸ್ಥೆಯ ಗುರುತಿನ ಚೀಟಿ/ಬೊನಾಫೈಡ್ ಪ್ರಮಾಣಪತ್ರ)
- 10 ಮತ್ತು 12 ನೇ ತರಗತಿಯ ಅಂಕಪಟ್ಟಿಗಳು
- ಹಿಂದಿನ ಶೈಕ್ಷಣಿಕ ವರ್ಷದ ಅಂಕಪಟ್ಟಿಗಳು
- ಆದಾಯ ಪ್ರಮಾಣ ಪತ್ರ
- ರೇಷನ್ ಕಾರ್ಡ್
- ಅರ್ಜಿದಾರರ ಅಥವಾ ಪೋಷಕರ ಬ್ಯಾಂಕ್ ಖಾತೆ ವಿವರಗಳು
- ಇತ್ತೀಚಿನ ಭಾವಚಿತ್ರ
Kotak Scholarship 2024 ಅರ್ಹತೆಗಳು:
- PwD (ವಿಕಲಚೇತನ) ವಿದ್ಯಾರ್ಥಿಗಳು ಅರ್ಜಿ ಸಲ್ಲಿಬಹುದು.
- 9 ರಿಂದ 12 ನೇ ತರಗತಿ ಹಾಗೂ ಸಾಮಾನ್ಯ/ವೃತ್ತಿಪರ ಪದವಿ ಕೋರ್ಸ್ ಓದುತ್ತಿರುವವರು
- ಅರ್ಜಿದಾರರು ತಮ್ಮ ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ 55% ಅಂಕಗಳನ್ನು ಪಡೆದಿರಬೇಕು.
- ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು INR 3,20,000 ಗಿಂತ ಹೆಚ್ಚಿರಬಾರದು.
- Kotak ಸೆಕ್ಯುರಿಟೀಸ್, ಅದರ ಅಂಗಸಂಸ್ಥೆಗಳು ಮತ್ತು Buddy4Study ಉದ್ಯೋಗಿಗಳ ಮಕ್ಕಳು ಅರ್ಹರಲ್ಲ.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ: 30-04-2024
ಪ್ರಮುಖ ಲಿಂಕ್’ಗಳು:
Apply Online ಲಿಂಕ್: Apply ಮಾಡಿ
Karnataka SSP Scholarship 2024