ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತನಲ್ಲಿ ಖಾಲಿ ಇದ್ದ ಸಹಾಯಕ ಇಂಜಿನಿಯರ್ (ವಿದ್ಯುತ್/ ಸಿವಿಲ್), ಕಿರಿಯ ಇಂಜಿನಿಯರ್ ( ವಿದ್ಯುತ್/ ಸಿವಿಲ್ ) ಮತ್ತು ಕಿರಿಯ ಸಹಾಯಕ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ದಾಖಲೆಗಳ ಪರಿಶೀಲನೆಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿ (KPTCL Document verification 2023) ಯನ್ನು ಪ್ರಕಟಿಸಲಾಗಿದೆ.
ಒಟ್ಟು 1492 ಹುದ್ದೆಗಳ ನೇಮಕಾತಿಗಾಗಿ ದಿನಾಂಕ 01-02-2022 ರಂದು ಅಧಿಸೂಚನೆ ಹೊರಡಿಸಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಪರೀಕ್ಷೆ ನಡೆಸಲಾಗಿತ್ತು.
KPTCL ದಾಖಲೆಗಳ ಪರಿಶೀಲನೆ ದಿನಾಂಕ ಪ್ರಕಟ
ರಾಜ್ಯಾದ್ಯಂತ ಅರ್ಜಿ ಸಲ್ಲಿಸಿದ್ದ ಒಟ್ಟು 3.97 ಲಕ್ಷ ಅಭ್ಯರ್ಥಿಗಳಿಗೆ 2022ರ ಜುಲೈ 23 ಮತ್ತು 24 ಹಾಗೂ ಆಗಸ್ಟ್ 07 ರಂದು ಯಶಸ್ವಿಯಾಗಿ ಪರೀಕ್ಷೆಯನ್ನು ಕೆಇಎ ನಡೆಸಿದೆ. ನಂತರ ಪರೀಕ್ಷೆಗಳ ಅಂತಿಮ ಸರಿ ಉತ್ತರಗಳನ್ನು ಫೆ. 04 & 07 ರಂದು ಕೆ.ಇ.ಎ ಯ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿತ್ತು.
ಬೆಂಗಳೂರಿನ ಎನ್.ಐ.ಸಿ ಸಂಸ್ಥೆಯು ಅರ್ಹ ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆಗಾಗಿ ಸೂಚಿತ ಹುದ್ದೆಗಳ 1:12 ರ ಅನುಪಾತದಲ್ಲಿ, ಆಪ್ಟಿಟ್ಯೂಡ್ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಜೇಷ್ಠತೆಯ ಆಧಾರದಲ್ಲಿ ಪಟ್ಟಿಯನ್ನು ಸಿದ್ಧಪಡಿಸಿದೆ. ಅರ್ಹ ಅಭ್ಯರ್ಥಿಗಳ ಹೆಸರುಗಳನ್ನೊಳಗೊಂಡ 1:12 ಅನುಪಾತದ ಪಟ್ಟಿ, ಕಟ್ ಆಫ್ ಅಂಕ ಪಟ್ಟಿಯನ್ನು ಪ್ರಕಟಿಸಲಾಗಿದೆ.
KPTCL Document verification 2023
ಮೂಲ ದಾಖಲೆಗಳ ಪರಿಶೀಲನೆಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಈ ಲಿಂಕ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. Download Lists
ಉದ್ಯೋಗ ಮಾಹಿತಿಗಳನ್ನು ಓದಿ
ಅಂಚೆ ಇಲಾಖೆ ಚಾಲಕ ಹುದ್ದೆಗಳ ನೇಮಕಾತಿ 2023