ಎಲ್ಲರಿಗೂ ನಮಸ್ಕಾರ, Lenovo Idea Tab Pro ಅನ್ನು ಲೆನೊವೊ ಕಂಪನಿಯು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಟ್ಯಾಬ್ ಯಾವ ಯಾವ ಹೊಸ ಪೀಚರ್ಸ್ ಗಳನ್ನು ಒಳಗೊಂಡಿದೆ. ಹಾಗೂ ಇದರ ಬೆಲೆ ಎಷ್ಟು..? ಬ್ಯಾಟರಿ ಹಾಗೂ Storage ಸಾಮರ್ಥ್ಯ ಸೇರಿದಂತೆ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ ಓದಿರಿ.
Lenovo Idea Tab Pro ವಿಶೇಷತೆಗಳು:
ಲೆನೊವೊ ಐಡಿಯಾ ಟ್ಯಾಬ್ ಪ್ರೊ ನಲ್ಲಿ 12.7-ಇಂಚಿನ 3K (1,840×2,944 ಪಿಕ್ಸೆಲ್‌ಗಳು) LTPS LCD ಸ್ಕ್ರೀನ್ ಅನ್ನು ಹೊಂದಿದೆ. 144Hz ರಿಫ್ರೆಶ್ ದರ ಹಾಗೂ 400 nits ಗರಿಷ್ಠ ಹೊಳಪು ಹೊಂದಿದೆ ಮತ್ತು 273ppi ಪಿಕ್ಸೆಲ್ ಸಾಂದ್ರತೆಯೊಂದಿಗೆ ಇರಲಿದೆ. ಟ್ಯಾಬ್ 4nm ಆಕ್ಟಾ-ಕೋರ್ ಮೀಡಿಯಾಟೆಕ್ ಡೈಮೆನ್ಸಿಟಿ 8300 ಚಿಪ್‌ಸೆಟ್‌ನಿಂದ ಚಾಲಿತವಾಗಿದ್ದು, ಇದು ಆಂಡ್ರಾಯ್ಡ್ 14-ಆಧಾರಿತ ಲೆನೊವೊ ZUI 16 ನೊಂದಿಗೆ ಕಾರ್ಯನಿರ್ವಹಿಸುತ್ತದೆ.
ಈ ಟ್ಯಾಬ್ಲೆಟ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಅನ್ನು ಹೊಂದಿದೆ. ಇದು 291.8×189.1×6.9mm ಗಾತ್ರ ಮತ್ತು 615g ತೂಗುತ್ತದೆ. ಡಾಲ್ಬಿ ಅಟ್ಮೋಸ್ ಬೆಂಬಲದೊಂದಿಗೆ ಕ್ವಾಡ್ JBL ಸ್ಪೀಕರ್ ಅನ್ನು ಹೊಂದಿದೆ. ಲೆನೊವೊ ಟ್ಯಾಬ್ ಪೆನ್ ಪ್ಲಸ್ ಸ್ಟೈಲಸ್, ಟ್ಯಾಬ್ ಪ್ರೊ 2-ಇನ್-1 ಕೀಬೋರ್ಡ್ ಮತ್ತು ಫೋಲಿಯೊ ಕೇಸ್ ಸೇರಿವೆ. ಟ್ಯಾಬ್ಲೆಟ್ ಕೀಬೋರ್ಡ್‌ಗಾಗಿ ಮೂರು-ಪಾಯಿಂಟ್ ಪೋಗೊ-ಪಿನ್ ಕನೆಕ್ಟರ್ ಅನ್ನು ಸಹ ಹೊಂದಿದೆ.
ಬ್ಯಾಟರಿ ಮಾಹಿತಿ:
ಈ ಟ್ಯಾಬ್ಲೆಟ್ 10,200mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. ಬ್ಯಾಟರಿಯ ಚಾರ್ಜ್ ಗಾಗಿ 45W ವೈರ್ಡ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಇರಲಿದೆ.
ಕ್ಯಾಮೆರಾ ಮಾಹಿತಿ:
Lenovo Idea Tab Pro ಹಿಂಭಾಗದಲ್ಲಿ 13-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಇರಲಿದೆ. ಹಾಗೂ ಮುಂಭಾಗದಲ್ಲಿ 8-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಈ ಟ್ಯಾಬ್ ಲೂನಾ ಗ್ರೇ ಬಣ್ಣದಲ್ಲಿ ಬಿಡುಗಡೆಯಾಗಿದೆ.

ಬೆಲೆ ಮಾಹಿತಿ:
- 8GB RAM ಹಾಗೂ 128GB Storage ನ ಬೆಲೆ: 27,999 ರೂ.
- 12GB RAM ಹಾಗೂ 256GB Storage ನ ಬೆಲೆ: 30,999 ರೂ.
ಇತರೆ ಮಾಹಿತಿ ಓದಿ:

