ಎಲ್ಲರಿಗೂ ನಮಸ್ಕಾರ.. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ನಿಧಿ ಯೋಜನೆಯ ಹಣ ನಿಮ್ಮ ಖಾತೆಗೆ ಬಂದಿದೆಯಾ..? PM Kisan Status Check 2024 ಚೆಕ್ ಮಾಡಬೇಕಾ..? ಹಾಗಿದ್ದರೆ ಈ ಲೇಖನವನ್ನು ಓದಿರಿ.. ಇಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದೆ.
PM ಕಿಸಾನ್ ಸಮ್ಮಾನ ಯೋಜನೆಯ 16 ನೇ ಕಂತಿನ ಹಣವನ್ನು ಸಣ್ಣ ಹೀಡುವಳಿದಾರ ರೈತರ ಬ್ಯಾಂಕ್ ಖಾತೆಗೆ 2024 ರ ಫೆಬ್ರವರಿ 28 ರಂದು ಬಿಡುಗಡೆ ಮಾಡಲಾಗಿದೆ. PM Kisan eKYC ಮಾಡಿಸಿರುವ ರೈತರ ಖಾತೆಗಳಿಗೆ ಈ ಯೋಜನೆಯ ಹಣವನ್ನು ಮಾಡುತ್ತಾರೆ.
ಪಿಎಂ-ಕಿಸಾನ್ ಸಮ್ಮಾನ ನಿಧಿಯ 16ನೇ ಕಂತಿನ ಹಣವನ್ನು 9 ಕೋಟಿಗೂ ಅಧಿಕ ಫಲಾನುಭವಿ ರೈತಾಪಿಗಳ ಬ್ಯಾಂಕ್ ಖಾತೆಗಳಿಗೆ ರೂ. 21 ಸಾವಿರ ಕೋಟಿಗೂ ಅಧಿಕ ನೇರ ವರ್ಗಾವಣೆ (PM Kisan DBT) ಮಾಡಿದ್ದಾರೆ.
ಪಿಎಂ ಕಿಸಾನ್ ಸಮ್ಮಾನ ನಿಧಿ ಯೋಜನೆ:
- ಇಲ್ಲಿಯವರೆಗೆ ರೂ. 3 ಲಕ್ಷ ಕೋಟಿಗೂ ಅಧಿಕ ಮೊತ್ತವನ್ನು 11 ಕೋಟಿಗೂ ಹೆಚ್ಚಿನ ರೈತರ ಬ್ಯಾಂಕ್ ಖಾತೆಗಳಿಗೆ ನೇರ ವರ್ಗಾವಣೆ ಮಾಡಲಾಗಿದೆ.
- ಫಲಾನುಭವಿ ರೈತಾಪಿಗಳು ಮೂರು ಸಮಾನ ಕಂತುಗಳಲ್ಲಿ ವಾರ್ಷಿಕ ರೂ. 6,000 ಪಡೆಯುತ್ತಾರೆ.
- ಇದು ವಿಶ್ವದಲ್ಲೇ ಅತಿದೊಡ್ಡ ಫಲಾನುಭವಿಗಳಿಗೆ ನೇರ ವರ್ಗಾವಣೆ (ಡಿಬಿಟಿ) ಯೋಜನೆಯಾಗಿದೆ.
- ಫಲಾನುಭವಿಗಳ ಸಮಸ್ಯೆಗಳನ್ನು ಇತ್ಯರ್ಥಪಡಿಸಲು, ದೂರು ದುಮ್ಮಾನಗಳ ಸಮಗ್ರ ಪರಿಹಾರ ವ್ಯವಸ್ಥೆ ಮತ್ತು ಕೇಂದ್ರಿಕೃತ ಸಹಾಯವಾಣಿಯನ್ನು ಸ್ಥಾಪಿಲಾಗಿದೆ.
PM Kisan Karnataka Payment Status ಚೆಕ್ ಮಾಡುವುದು ಹೇಗೆ?
PM ಕಿಸಾನ್ ಯೋಜನೆಯ Payment Status ಚೆಕ್ ಮಾಡುವ ಸರಳ ವಿಧಾನವನ್ನು ಈ ಕೇಳಗಿನಂತೆ ನೀಡಲಾಗಿದೆ. ಈ ಮಾಹಿತಿಯನ್ನು ಪಡೆದು Payment Status ನೋಡಿ.
PM Kisan Status ಮೊದಲ ವಿಧಾನ
ಈ ಒಂದು ವಿಧಾನದ ಮೂಲಕ ನಿಮ್ಮ ಊರಿನಲ್ಲಿ ಯಾವ ರೈತರಿಗೆ PM Kisan Samman Nidhi 16 ನೇ ಕಂತಿನ ಹಣ ಬೀಡುಗಡೆ ಮಾಡಲಾಗಿದೆ ಎಂಬುದನ್ನು ತಿಳಿಯಲು ಈ ರೀತಿ ಮಾಡಿ.
- Step-1: ಮೊದಲಿಗೆ ಕೇಳಗೆ ನೀಡಿರುವ PM Kisan ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
- Step-2: ವೆಬ್‌ಸೈಟ್ ಓಪನ್ ಮಾಡಿ Scroll ಮಾಡಿ, ಅಲ್ಲಿ ಕೇಳಗೆ FARMERS CORNER ಎಂದಿರುತ್ತದೆ ಅದರಲ್ಲಿ ಹಲವು ಆಯ್ಕೆಗಳಿರುತ್ತವೆ. BENIFICIARY LIST ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.
- Step-3: BENIFICIARY LIST ಆಯ್ಕೆ ಮೇಲೆ ಕ್ಲಿಕ್ ಮಾಡಿದ ನಂತರ ಅಲ್ಲಿ ರಾಜ್ಯ, ಜಿಲ್ಲೆ, ತಾಲೂಕು, Block ಮತ್ತು ನಿಮ್ಮ ಊರನ್ನು ಆಯ್ಕೆ ಮಾಡಿ. Get Report ಮೇಲೆ ಕ್ಲಿಕ್ ಮಾಡಿ.
- Step-4: ಆಗ ಅಲ್ಲಿಯೇ ಕೇಳಗೆ ನಿಮ್ಮ ಊರಿನಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ಯೋಜನೆಯ ಅಡಿಯಲ್ಲಿ ಹಣ ಪಡೆಯಲು ಅರ್ಹ ಫಲಾನುಭವಿ ರೈತರ ಮಾಹಿತಿ ಲಭ್ಯವಾಗುತ್ತದೆ. ಅದರಲ್ಲಿ ನಿಮ್ಮ ಹೆಸರನ್ನು ನೋಡಬಹುದು.
PM Kisan Status Check 2024 ಮಾಡುವ ವಿಧಾನ
- Step-1: ಮೊದಲಿಗೆ ಕೇಳಗೆ ನೀಡಿರುವ PM Kisan ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
- Step-2: ಅಲ್ಲಿ ಕೇಳಗೆ FARMERS CORNER ಎಂದಿರುತ್ತದೆ ಅದರಲ್ಲಿ ಹಲವು ಆಯ್ಕೆಗಳಿರುತ್ತವೆ. Know Your Status ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.
- Step-3: ಮುಂದಿನ ಪುಟದಲ್ಲಿ “Enter Registration No.” ಎಂದಿರುತ್ತದೆ, ಅಲ್ಲಿ ನಿಮ್ಮ PM Kisan Number ಎಂಟರ್ ಮಾಡಿ. ಅಲ್ಲಿಯೇ ಕೇಳಗೆ ನೀಡಿರುವ ಆರು ಅಕ್ಷರಗಳ ಕ್ಯಾಪ್ಚಾ ಭರ್ತಿ ಮಾಡಿ. ನಂತರ Get OTP ಎಂದಿರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ನೋಂದಣಿ ಮಾಡುವಾಗ ನೀಡಿರುವ ನಿಮ್ಮ ಮೊಬೈಲ್‌ಗೆ OTP ಬರುತ್ತದೆ ಅದನ್ನು ಎಂಟರ್ ಮಾಡಿ. ಹಾಗೂ Get Data ಮೇಲೆ ಕ್ಲಿಕ್ ಮಾಡಿ.
- Step-4: ಆಗ ನಿಮ್ಮ ಮುಂದೆ ಮತ್ತೊಂದು ಹೊಸ ಪುಟ ಓಪನ್ ಆಗುತ್ತದೆ. ಅದಲ್ಲಿ ನಿಮ್ಮ PM Kisan ಖಾತೆಯ ಮಾಹಿತಿ ಲಭ್ಯವಾಗುತ್ತದೆ. ಈ ಕೇಳಗಿನಂತೆ ವಯಕ್ತಿಕ ಮಾಹಿತಿ ಲಭಿಸುತ್ತದೆ.
- Step-5: ನೀವು ಅರ್ಹರಿದ್ದರೆ ಈ ಕೇಳಗಿನಂತೆ Land Seeding :- Yes, Aadhaar Bank Account Seeding Status:- Yes, e-KYC Status :- Yes ಎಂದಿರುತ್ತದೆ. ಇಲ್ಲವಾದರೆ No ಎಂದಿರುತ್ತದೆ. ಆಗಿದ್ದಾಗ ನೀವು Seeding ಮಾಡಿಸಬೇಕಾಗುತ್ತದೆ.
- Step-6: LATEST INSTALLMENTS DETAILS ಎಂದಿರುತ್ತದೆ. ಅದರಲ್ಲಿ ನಿಮ್ಮ ಖಾತೆಗೆ ಹಣ ಜಮಾ ಮಾಡಿರುವ ಮಾಹಿತಿಯನ್ನು ನೀಡಲಾಗಿತ್ತದೆ. ಜಮಾ ಆಗಿರುವ ಬ್ಯಾಂಕ್ ಖಾತೆ, ಬ್ಯಾಂಕ್ ಹೆಸರು, Payment Mode ಸೇರಿದಂತೆ PM Kisan Karnataka Payment Status ನ ಎಲ್ಲ ಮಾಹಿತಿ ಅಲ್ಲಿರುತ್ತದೆ.
ಪ್ರಮುಖ ಲಿಂಕ್‌ಗಳು:
PM Kisan Payment Status ಅಧಿಕೃತ ಲಿಂಕ್: ಚೆಕ್ ಮಾಡಿ
ಅಧಿಕೃತ ವೆಬ್‌ಸೈಟ್: pmkisan.gov.in
ಕೊನೆಯ ಮಾತು: PM Kisan Status Check 2024 ಚೆಕ್ ಮಾಡುವ ಮಾಹಿತಿ ನಿಮಗೆ ಉಪಯೋಗವಾಗಿದೆ ಎಂದು ಭಾವಿಸುತ್ತೇವೆ. ನಿಮ್ಮ ಅನಿಸಿಕೆಯನ್ನು ಕೆಮೇಂಟ್ ಮಾಡಿ. ಸರ್ಕಾರಿ ಯೋಜನೆಗಳ ಮಾಹಿತಿ ಪಡೆಯಲು ನಮ್ಮ ವಾಟ್ಸ್ಆಪ್ ಗ್ರುಪ್’ಗೆ Join ಆಗಿರಿ ಅಥವಾ ನಮ್ಮ ವೆಬ್’ಸೈಟ್’ನ್ನು Subscribe ಮಾಡಿಕೊಳ್ಳಿ.
ಸರ್ಕಾರ ಇತರೆ ಯೋಜನೆಗಳು: