ರೇಷನ್‌ ಕಾರ್ಡ್‌ ರದ್ದು: ಹೊಸ ಪಟ್ಟಿ ಬಿಡುಗಡೆ | Ration Card Cancelled List Karnataka 2024 Check @ahara.kar.nic.in

Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, ನೀವು ಕೂಡ ರೇಷನ್‌ ಕಾರ್ಡ್‌ ಹೊಂದಿದ್ದೀರಾ..? ಹಾಗಿದ್ದರೇ ಈ ಮಾಹಿತಿಯೊಮ್ಮೆ ಓದಿ. ಸರ್ಕಾರ ಕಾಲಕಾಲಕ್ಕೆ ರದ್ದಾದ ಪಡಿತರ ಚೀಟಿ ಪಟ್ಟಿ (Ration Card Cancelled List) ಯನ್ನು ಬಿಡುಗಡೆ ಮಾಡುತ್ತದೆ. ಈ ಲೇಖನದಲ್ಲಿ ಅನರ್ಹ ರೇಷನ್‌ ಕಾರ್ಡ್‌ದಾತರ ಮಾಹಿತಿ ನೀಡಲಾಗಿದೆ.

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದನಂತರ ಅನೇಕ ಕಲ್ಯಾಣ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಅದರಲ್ಲಿ ಗೃಹಲಕ್ಷ್ಮೀ ಯೋಜನೆಯ ಅಡಿಯಲ್ಲಿ ಮನೆ ಯಜಮಾನಿ ಮಹಿಳೆಯರಿಗೆ ಪ್ರತಿ ತಿಂಗಳು 2,000 ರೂ. DBT ಮೂಲಕ ವರ್ಗಾವಣೆ ಮಾಡಲಾಗುತ್ತಿದೆ.

ಈ ರೀತಿಯ ಜನಪ್ರಿಯ ಯೋಜನೆಗಳಿಂದಾಗಿ ರೇಷನ್‌ ಕಾರ್ಡ್‌ಗೆ ಪ್ರಾಮುಖ್ಯತೆ ಹೆಚ್ಚಾಗಿದೆ. ಜನರು ಪಡಿತರ ಚೀಟಿ ಪಡೆಯಲು ಪ್ರಯತ್ನ ಪಡುತ್ತಿದ್ದಾರೆ. ಅಷ್ಟೇ ಅಲ್ಲದೇ, ಬಡವರು ಅಲ್ಲದವರು ಕೂಡ BPL ಕಾರ್ಡ್‌ ಪಡೆದು ಯೋಜನೆಗಳ ಲಾಭ ಮಾಡಿಕೊಳ್ಳುತ್ತಿದ್ದಾರೆ.

ಬಡತನ ರೇಖೆಗಿಂತ ಕೇಳಗಿರುವ ಕುಟುಂಬಗಳಿಗಾಗಿ ನೀಡುವ ಅನೇಕ ಸೌಲಭ್ಯಗಳನ್ನು ಉಳ್ಳವರು ಪಡೆಯುತ್ತಿದ್ದಾರೆ. ಈ ಕಾರಣಕ್ಕಾಗಿ ಸರ್ಕಾರ ಅಧಿಕಾರಿಗಳ ಮೂಲಕ ಪರಿಶೀಲನೆ ಮಾಡಿ ಅನರ್ಹ ಪಡಿತರ ಚೀಟಿಗಳನ್ನು ರದ್ದು ಮಾಡಿ ದಂಡ ವಿಧಿಸುತ್ತಿದ್ದಾರೆ.

Karnataka Ration Card Cancelled List 2024:

ಕರ್ನಾಟಕ ಆಹಾರ ಇಲಾಖೆ ಪ್ರತಿ ತಿಂಗಳು ರೇಷನ್‌ ಕಾರ್ಡ್‌ ಹೊಂದಲು ಅರ್ಹರಲ್ಲದವರ ಪಟ್ಟಿಯನ್ನು ಪ್ರಟಿಸುತ್ತದೆ. ರದ್ದಾದ ಪಟ್ಟಿಯನ್ನು ನೋಡಲು ಈ ಕೇಳಗೆ ನೀಡಿರುವ ವಿಧಾನವನ್ನು ಅನುಸರಿಸಿ.

Step-1: ಮೊದಲಿಗೆ ಕೇಳಗೆ ಪ್ರಮುಖ ಲಿಂಕ್‌ಗಳು ವಿಭಾಗದಲ್ಲಿ ನೀಡಲಾಗಿರುವ ಆಹಾರ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. ನಂತರ ಅಲ್ಲಿ ಮೂರು ಗೆರೆಗಳಿವೆ ಅದರ ಮೇಲೆ ಕ್ಲಿಕ್‌ ಮಾಡಿ.

Karnataka Ration Card Ban List 2024

Step-2: ನಂತರ ವಿವಿಧ ಆಯ್ಕೆಗಳಿರುತ್ತವೆ, ಅಲ್ಲಿ ಇ-ಸೇವೆಗಳು/ E-Services ಎಂಬ ಆಯ್ಕೆ ಮೇಲೆ ಕ್ಲಿಕ್‌ ಮಾಡಿ.

Step-3: ನಿಮ್ಮ ಮೊಬೈಲ್‌ನಲ್ಲಿ ಎಡ ಭಾಗದಲ್ಲಿ ಮೂರು ಗೆರೆಗಳಿರುವ ಆಯ್ಕೆ ಕಾಣುತ್ತದೆ. ಅದರ ಮೇಲೆ ಕ್ಲಿಕ್‌ ಮಾಡಿ. ನಂತರ ಅಲ್ಲಿ ಇ-ಪಡಿತರ ಚೀಟಿ ಎಂಬ ಆಯ್ಕೆ ಮೇಲೆ ಕ್ಲಿಕ್‌ ಮಾಡಿ.

Step-4: ತದನಂತರ ರದ್ದುಗೊಳಿಸಲಾದ / ತಡೆಹಿಡಿಯಲಾದ ಪಟ್ಟಿ ಎಂಬ ಆಯ್ಕೆ ಮೇಲೆ ಕ್ಲಿಕ್‌ ಮಾಡಿ.

Step-5: Ration Card Cancelled and Suspended List ಎಂಬ ಆಯ್ಕೆ ಬರುತ್ತದೆ. ಅಲ್ಲಿ ನಿಮ್ಮ ಜಿಲ್ಲೆ ಹೆಸರು, ತಾಲೂಕು, ತಿಂಗಳು, ವರ್ಷ ಆಯ್ಕೆ ಮಾಡಿ.

Step-6: ಅಂತಿಮವಾಗಿ ನಿಮ್ಮ ತಾಲೂಕಿನಲ್ಲಿ ನೀವು ಆಯ್ಕೆ ಮಾಡಿರುವ ತಿಂಗಳಲ್ಲಿ ಎಷ್ಟು ರೇಷನ್‌ ಕಾರ್ಡ್‌ಗಳು ರದ್ದಾಗಿವೆ ಎಂಬ ಮಾಹಿತಿ ದೊರೆಯುತ್ತದೆ.

Ration Card Cancelled List Karnataka

ಪ್ರಮುಖ ಲಿಂಕ್‌ಗಳು:
Ration Card Ban List Link:‌
Check Online
ಅಧಿಕೃತ ವೆಬ್‌ಸೈಟ್: ahara.kar.nic.in, ahara.kar.nic.in/Home/EServices

ಹೊಸ ರೇಷನ್‌ ಕಾರ್ಡ್‌ ಅರ್ಜಿ ಆಹ್ವಾನ, ಬೇಗ ಅರ್ಜಿ ಸಲ್ಲಿಸಿ

ಗೃಹಲಕ್ಷ್ಮಿ DBT Status Check ಮಾಡಿ, 2000 ರೂ. ಬಂತಾ ನೋಡಿ

ನಿಮ್ಮ ಬ್ಯಾಂಕ್ ಖಾತೆಗೆ ಆಧಾರ ಸಂಖ್ಯೆ ಲಿಂಕ್ ಆಗಿದ್ಯಾ..?

ಉಚಿತ ಹೊಲಿಗೆ ಯಂತ್ರ ಯೋಜನೆ 2024

Telegram Group Join Now
WhatsApp Group Join Now

Leave a Comment

error: Content is protected !!