ಎಲ್ಲರಿಗೂ ನಮಸ್ಕಾರ, ಗುಡ್ ನ್ಯೂಸ್.. ಗುಡ್ ನ್ಯೂಸ್… ಹೊಸ ರೇಷನ್ ಕಾರ್ಡ್‌ಗೆ ನೀವು ಅರ್ಜಿ ಸಲ್ಲಿಸಬೇಕಾ? ಸರ್ಕಾರದಿಂದ ನಿಮಗೆ ಬಂದಿದೆ ಗುಡ್ ನ್ಯೂಸ್. ನೀವು ಬಹು ದಿನಗಳಿಂದ ಹೊಸ ಪಡಿತರ ಚೀಟಿ (Ration Card Karnataka Online Application 2023) ಪಡೆಯುವ ನಿರೀಕ್ಷೆಯಲ್ಲಿ ಇದ್ದೀರಿ.
ಈಗ ಆ ಕಾಲ ಕೂಡಿ ಬಂದಿದೆ. ಬಡವರಿಗಾಗಿ ಹೊಸ ರೇಷನ್ ಕಾರ್ಡ್‌ಗಳನ್ನು ವಿತರಣೆ ಮಾಡಲು ಸರ್ಕಾರ ಮುಂದಾಗಿದೆ. ಅದಕ್ಕಾಗಿ ಎಲ್ಲ ರೀತಿಯ ತಯಾರಿ ನಡೆದಿದ್ದು. ನೀವು ಅಗತ್ಯ ದಾಖಲೆಗಳನ್ನು ನಿಮ್ಮಲ್ಲಿ ಇಟ್ಟುಕೊಳ್ಳಿ.
Ration Card Karnataka Online Application 2023
2023 ರ ವಿಧಾನ ಸಭೆ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವ ಪ್ರಕ್ರೀಯೆಯನ್ನು ಸ್ಥಗಿತ ಮಾಡಲಾಗಿತ್ತು. ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಅರ್ಹ ಫಲಾನುಭವಿಗಳಿಗೆ ಹೊಸ ಪಡಿತರ ಚೀಟಿ (New Ration Card) ಗಳನ್ನು ವಿತರಣೆ ಮಾಡಲಿದೆ.
Ration Card Online Application 2023 Date:
ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗೃಹಲಕ್ಷ್ಮಿ ಯೋಜನೆ, ಅನ್ನಭಾಗ್ಯ ಯೋಜನೆ ಮತ್ತು ಇತರೆ ಕಲ್ಯಾಣ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ರೇಷನ್ ಕಾರ್ಡ್ ಕಡ್ಡಾಯವಾಗಿ ಬೇಕು. ಅನೇಕ ಅರ್ಹ ಫಲಾನುಭವಿಗಳು ಪಡಿತರ ಚೀಟಿ ಇಲ್ಲದ ಕಾರಣ ಸರ್ಕಾರ ಯೋಜನೆಗಳ ಲಾಭ ಪಡೆಯಲು ಸಾಧ್ಯವಾಗದೆ ವಂಚಿತರಾಗಿದ್ದರು.
ಆದರೆ ಇದೀಗ ಅರ್ಹ ಬಡವರಿಗಾಗಿ ಇರುವ ಯೋಜನೆಗಳ ಲಾಭ ಪಡೆಯಲು ಅರ್ಹ ಫಲಾನುಭವಿಗಳಿಂದ ಹೊಸ ರೇಷನ್ ಕಾರ್ಡ್ ವಿರಿಸಲು ಸರ್ಕಾರ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಡಿಸೆಂಬರ್ 3 ರಂದು ಅರ್ಜಿ ಸಲ್ಲಿಸಬಹುದು.
ಪ್ರಮುಖ ಅಂಶಗಳು:
ಅರ್ಜಿ ಸಲ್ಲಿಕೆ ದಿನಾಂಕ: ಡಿಸೆಂಬರ್ 03, 2023 ರಂದು 11 ರಿಂದ ಮಧ್ಯಹ್ನ 2 ರವರೆಗೆ
ಆಹಾರ ಇಲಾಖೆ ಅಧಿಕೃತ ವೆಬ್‌ಸೈಟ್: ahara.kar.nic.in