ಜೂನ್ 18 ರಂದು ಜಾರಿಗೆ ಬಂದಿರುವ “ಗೃಹ ಜ್ಯೋತಿ” (Gruha Jyothi Scheme) ಯೋಜನೆಯ ಆನ್ಲೈನ್ ಅರ್ಜಿ ಸಲ್ಲಿಸಲು ನೀವು ಪ್ರಯತ್ನಿಸುತ್ತಿದ್ದಿರಿ. ಹಾಗಾರೆ ಈ ಪೋಸ್ಟ್ನಲ್ಲಿ ನಿಮಗೆ ಮಹತ್ವದ ಮಾಹಿತಿ ಹಾಗೂ ಸುಲಭ ಮಾರ್ಗವನ್ನು ನಿಮಗೆ ತಿಳಿಸಲಿದ್ದೇವೆ. ಈ ಕೇಳಗಿನಂತಿದೆ ಓದಿರಿ (Sevasindhugs.karnataka.gov.in Gruha Jyothi Scheme).
“ಗೃಹ ಜ್ಯೋತಿ” ಯೋಜನೆಯ ಅರ್ಜಿಯನ್ನು ಸೇವಾ ಸಿಂಧು ಪೋರ್ಟಲ್ ನಲ್ಲಿ ನಿಮ್ಮ ಸ್ಮಾರ್ಟ್ ಫೋನ್, ಕಂಪ್ಯೂಟರ್/ ಲ್ಯಾಪ್ಟಾಪ್ ಗಳಿಂದ ಸುಲಭವಾಗಿ ಅರ್ಜಿ ನೋಂದಣಿ (Seva Sindhu Gruha Jyoti Registration) ಮಾಡಬಹುದು. ಸಧ್ಯಕ್ಕೆ ಯಾವುದೇ ದಾಖಲೆ ಅಪ್ಲೋಡ್ ಮಾಡುವ ಅವಶ್ಯಕತೆ ಇಲ್ಲ ಇರುವುದಿಲ್ಲ.
“ಗೃಹ ಜ್ಯೋತಿ” (Gruha Jyoti) ಅರ್ಜಿ ಸಲ್ಲಿಸಲು ಏನು ಬೇಕು?
- ವಿದ್ಯುತ್ ಬಿಲ್
- ಆಧಾರ್ ಸಂಖ್ಯೆ
- ಮೊಬೈಲ್ ಸಂಖ್ಯೆ
- ಈ ಮೂರು ಇದ್ದರೆ ಸಾಕು
“ಗೃಹ ಜ್ಯೋತಿ” (Gruha Jyothi) ಅರ್ಜಿ ಸಲ್ಲಿಕೆ ಸುಲಭ ವಿಧಾನ
- ಈ ಕೇಳಗೆ ನೀಡಿರುವ ಸೇವಾ ಸಿಂಧು ಅಧಿಕೃತ ವೆಬ್ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ (ಲಿಂಕ್ ಕೇಳಗೆ ನೀಡಿದ್ದೇವೆ-Gruha Jyothi Scheme Website Link)
- ಅಲ್ಲಿ “ಗೃಹ ಜ್ಯೋತಿ” ಎಂದಿರುತ್ತದೆ ಅದರ ಮೇಲೆ ಕ್ಲಿಕ್ ಮಾಡಿದರೆ. ಆನ್ಲೈನ್ ಅರ್ಜಿ ತೆರೆದುಕೊಳ್ಳುತ್ತದೆ.
- ಅಲ್ಲಿ ಮೇಲೆ ಇಂಗ್ಲೀಷ್ ಅಥವಾ ಕನ್ನಡ ಭಾಷಾ ಆಯ್ಕೆ ಇರುತ್ತದೆ.
- ತದನಂತರ ನಿಮ್ಮದು ಯಾವ ಎಸ್ಕಾಂ ಎಂಬ ಆಯ್ಕೆ ಇರುತ್ತದೆ. ಉದಾ: BESCOM, CESC, GESCOM, HESCOM, MESCOM, HRESC ಅಂತ ಇರುತ್ತವೆ. ನಿಮ್ಮದು ಎಸ್ಕಾಂ ಮೇಲೆ ಟಿಕ್ ಮಾಡಿ.
5) ನಂತರ Account ID/Connection ID ಎಂದಿರುವಲ್ಲಿ ನಿಮ್ಮ ವಿದ್ಯುತ್ ಬಿಲ್ ನಲ್ಲಿರುವ Account ID ಸಂಖ್ಯೆಯನ್ನು ಟೈಪ್ ಮಾಡಿ. ಹೆಸರು ಮತ್ತು ಮನೆ ವಿಳಾಸ ತಾನಾಗೆ ಅಲ್ಲಿ ಬರುತ್ತದೆ, ನೀವು ಬರೆಯುವ ಅವಶ್ಯಕತೆ ಇಲ್ಲ. (ಹೆಸರು & ವಿಳಾಸ ಬರುವವರೆಗೆ Wait ಮಾಡಿ)
6) ಮುಂದೆ ಸ್ವಂತ ಮಾಲೀಕ, ಬಾಡಿಗೆದಾರ, ಕುಟುಂಬ ಸದಸ್ಯ ಎಂದಿರುತ್ತದೆ. ನಿಮಗೆ ಯಾವುದು ಅನ್ವಯ ಆಗುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
7) ಅರ್ಜಿದಾರ ಮನೆಯ ಯಜಮಾನನ/ ಕುಟುಂಬ ಸದಸ್ಯರ ಆಧಾರ ಸಂಖ್ಯೆ, ನೀವು ಬಾಡಿಗೆ ಇದ್ದರೆ ಬಾಡಿಗೆಯವರ ಆಧಾರ್ ಕಾರ್ಡ್ ನ 12 ಸಂಖ್ಯೆ ಟೈಪಿಸಿ.
ಇದರ ನಂತರ ಎರಡು ರೀತಿಯ ಆಯ್ಕೆಗಳು ಬರಬಹುದು. ಈ ಕೇಳಗಿನಂತಿದೆ.
- ನಂತರ ಆಧಾರ್ e – KYC ಕೇಳುತ್ತದೆ OK ಮಾಡಿದರೆ ಹೊಸ ಪೇಜ್ ತೆರೆದುಕೊಳ್ಳುತ್ತದೆ.. ಅಲ್ಲಿ OK ಅಂತ ಟಿಕ್ ಮಾಡಿ.. ಆಧಾರ್ ಕಾರ್ಡ್’ನಲ್ಲಿ ಇರುವ ಫೋನ್ ನಂಬರ್’ಗೆ OTP ( ಒಟಿಪಿ) ಸಂಖ್ಯೆ ಬರುತ್ತದೆ.. ಅದನ್ನ ಟೈಪಿಸಿ OK ಮಾಡಿ, e – KYC ಮುಗಿಯಿತು. ಅಥವಾ
- ಸಂವಹನಕ್ಕಾಗಿ ದೂರವಾಣಿ ಸಂಖ್ಯೆ ಎಂದಿರುತ್ತದೆ. ಅಲ್ಲಿ ನಿಮ್ಮ ಮೊಬೈಲ್ ಸಂಖ್ಯೆ ಟೈಪ್ ಮಾಡಿದ ನಂತರ ನೀವು ಟೈಪಿಸಿದ ನಂಬರ್ ಗೆ OTP ಬರುತ್ತದೆ. ಅದನ್ನು ಅಲ್ಲಿ ಎಂಟರ್ ಮಾಡಿ.
8) ನಂತರ ಮುಂದಿನ ಬಾಕ್ಸ್’ ನಲ್ಲಿ ಸಂಪರ್ಕಕ್ಕಾಗಿ ಫೋನ್ ಸಂಖ್ಯೆ ಟೈಪಿಸಿ. ಈ ಸಂಖ್ಯೆಗೆ ಮತ್ತೊಂದು OTP (ಒಟಿಪಿ) ಬರುತ್ತದೆ.
ಅದನ್ನ ಟೈಪಿಸಿ OK ಮಾಡಿ.
9) ಕೆಳಗೆ I agree ಅಂತ ಇರುವ ಡಿಕ್ಲೆರೇಶನ್’ಗೆ Right Tick Mark ✅ ಮಾಡಿ.
10) ಕೆಳಗೆ Word verification ಅಂತ ತೋರಿಸುವ 6 ಸಂಖ್ಯೆಯನ್ನ, ಅಲ್ಲಿನ ಬಾಕ್ಸ್’ನಲ್ಲಿ ಟೈಪ್ ಮಾಡಿ. ಹಸಿರು ಬಣ್ಣದ submit ಬಟನ್ ಮೇಲೆ ಕ್ಲಿಕ್ ಮಾಡಿ.
11) ನಿಮ್ಮ ಅರ್ಜಿಯ ಒಟ್ಟು ಮಾಹಿತಿಯ ಹೊಸ ಪೇಜ್ ತೆರೆದುಕೊಳ್ಳುತ್ತದೆ, ಮತ್ತೆ Submit ಅಂತ ಕೊಡಿ.
12) ನಿಮ್ಮ ಅರ್ಜಿಯ ಸಂಖ್ಯೆಯೊಂದಿಗೆ ಸ್ವೀಕೃತಿ ಪ್ರತಿಯ ಪಿಡಿಎಫ್ ಬರುತ್ತದೆ. ಅದನ್ನ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಇಲ್ಲಿಗೆ ಅರ್ಜಿ ಹಾಕುವ ಪ್ರಕ್ರಿಯೆ ಮುಗಿಯುತ್ತದೆ.
“ಗೃಹ ಜ್ಯೋತಿ” ಯೋಜನೆ (Gruha Jyoti Scheme) ಯ ಅರ್ಜಿಯನ್ನು ನೀವು ಸಲ್ಲಿಸಿದ್ದರೆ ನಿಮ್ಮ ಅರ್ಜಿ ಸ್ವೀಕಾರವಾಗಿದೆ ಅಥವಾ ಇಲ್ಲಾ ಎಂಬುದನ್ನು ತಿಳಿಸಿದುಕೊಳ್ಳಲು ಇವಾಗ ಅವಕಾಶ ಸೀಡಲಾಗಿದೆ. ಅರ್ಜಿ ಸಲ್ಲಿಸಿದ ಗ್ರಾಹಕರು ತಮ್ಮ ಅರ್ಜಿ ಸ್ಥೀತಿ ನೋಡಬಹುದಾಗಿದೆ. ಇಲ್ಲಿ ಕ್ಲಿಕ್ ಮಾಡಿ:- ಗೃಹ ಜ್ಯೋತಿ ಅರ್ಜಿ Status ಚೇಕ್ ಮಾಡಿ
Sevasindhugs.karnataka.gov.in Gruha Jyothi Scheme ಅರ್ಜಿ ಲಿಂಕ್
Sevasindhu.karnataka.gov.in Gruha Jyothi Direct New Link: ಇಲ್ಲಿ ಕ್ಲಿಕ್ ಮಾಡಿ
Gruha Jyothi Scheme Link: ಇಲ್ಲಿ ಕ್ಲಿಕ್ ಮಾಡಿ
Seva Sindhu Gruha Jyothi ವೆಬ್ಸೈಟ್ ಲಿಂಕ್: Sevasindhugs.karnataka.gov.in/GruhaJyothi, sevasindhugs.karnataka.gov.in/gsdn/
ಸರ್ಕಾರ ಇತರೆ ಯೋಜನೆಗಳು